Advertisement

ವರ್ಷದಲ್ಲಿ 12 ಬಾರಿ ಹಾವಿನ ಕಡಿತಕ್ಕೊಳಗಾದ ಮಹಿಳೆ… ಬದುಕುಳಿದಿದ್ದೇ ವಿಸ್ಮಯ

11:06 AM Jul 14, 2023 | Team Udayavani |

ಮಧ್ಯಪ್ರದೇಶ: ಹಾವಿನ ಸುದ್ದಿ ಮಾತನಾಡುವಾಗಲೇ ಮೈ ಜುಂ ಎನ್ನುತ್ತದೆ ಅಂತದರಲ್ಲಿ ಹನ್ನೆರಡು ಬಾರಿ ಹಾವಿನ ಕಡಿತಕ್ಕೊಳಗಾಗಿ ಬದುಕಿ ಬಂದ ಮಹಿಳೆಯ ಸ್ಥಿತಿ ಹೇಗಿರಬೇಡ ನಿಜಕ್ಕೂ ಇದೊಂದು ವಿಸ್ಮಯವೇ ಸರಿ.

Advertisement

ಹೌದು ಮಧ್ಯ ಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿರುವ ಮಹಿಳೆಯೊಬ್ಬರಿಗೆ ಹಾವೊಂದು ಬದ್ದ ವೈರಿಯಾಗಿ ಪರಿಣಮಿಸಿದೆ ಆಕೆ ಹೋದಲ್ಲೆಲ್ಲಾ ಹಾವುಗಳೇ ಆಕೆಯನ್ನು ಬೆನ್ನಟ್ಟುತ್ತಿವೆಯಂತೆ ಮನೆಯ ಒಳಗಿದ್ದರೂ, ಮನೆಯ ಹೊರಬಂದರೂ ಹಾವೂ ತನ್ನ ಬೆನ್ನ ಹಿಂದೆಯೇ ಬರುತ್ತದೆ ಎನ್ನುತ್ತಾರೆ ಈ ಮಹಿಳೆ.

ಈ ಮಹಿಳೆಗೆ ಕೇವಲ ಒಂದು ವರ್ಷದ ಅವಧಿಯಲ್ಲಿ ನಾಗರಹಾವು, ಕರಿ ನಾಗರ, ಕೊಳಕು ಮಂಡಲ ಸೇರಿದಂತೆ ಬರೋಬ್ಬರಿ ಹನ್ನೆರಡು ಹಾವುಗಳು ಕಚ್ಚಿವೆಯಂತೆ ಆದರೂ ಮಹಿಳೆ ಬದುಕಿರುವುದೇ ಪವಾಡ ಎಂದು ಹೇಳಬೇಕು. ಇದರ ನಡುವೆ ಕೇವಲ ಎಂಟು ದಿನದ ಅಂತರದಲ್ಲಿ ಎರಡು ಭಾರಿ ಹಾವಿನ ಕಡಿತಕ್ಕೆ ಒಳಗಾಗಿದ್ದರಂತೆ, ಆವಾಗಲೂ ಮಹಿಳೆ ತನ್ನ ಜೀವ ಉಳಿಸಿಕೊಂಡಿದ್ದಾರೆ.

ಮಹಿಳೆ ಹೇಳಿಕೆಯಂತೆ ತಮ್ಮ ಹಿರಿಯರ ಕಾಲದಿಂದಲೂ ನಾಗಾರಾಧನೆ ಮಾಡಿಕೊಂಡು ಬಂದಿರುವ ಕುಟುಂಬ ಈಗಲೂ ನಾವು ಆರಾಧನೆ ಮಾಡುತ್ತಿದ್ದೇವೆ ಆದರೂ ಹಾವುಗಳು ನನ್ನನು ಮಾತ್ರ ಯಾಕೆ ಹಿಂಬಾಲಿಸಿ ದಾಳಿ ಮಾಡುತ್ತವೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಾರೆ.

Advertisement

ಮಹಿಳೆಯ ಪತಿಯ ಹೇಳಿಕೆಯಂತೆ ಹಾವುಗಳ ಕಡಿತಕ್ಕೆ ಪತ್ನಿ ಒಳಗಾದ ಮೇಲೆ ನಮ್ಮಿಂದ ಏನಾದರು ತೊಂದರೆ ಆಗಿದ್ದರೆ ಪರಿಹಾರಕ್ಕಾಗಿ ಕೆಲವೊಂದು ಪೂಜೆಗಳನ್ನೂ ಮಾಡಿದ್ದೆವು ಆದರೆ ಅದ್ಯಾವುದೂ ಫಲಿಸಲಿಲ್ಲ ಎನ್ನುತ್ತಾರೆ ಮಹಿಳೆಯ ಪತಿ.

ಸಾಕಷ್ಟು ಪೂಜೆ ನಡೆಸಿದ ಬಳಿಕವೂ ಹಾವುಗಳು ದಾಳಿ ಮಾಡಿದ್ದು ಇದರಿಂದ ಕುಟುಂಬವೇ ರೋಸಿ ಹೋಗಿವೆ.

ಸೂಕ್ತ ಚಿಕಿತ್ಸೆಯಿಂದ ಗುಣಮುಖ:
ಹಾವು ಕಡಿತಕ್ಕೆ ಒಳಗಾದ ಮಹಿಳೆ ಹೇಳಿಕೆಯಂತೆ ನಾವು ಪ್ರತಿಭಾರಿ ಹಾವಿನ ಕಡಿತಕ್ಕೆ ಒಳಗಾದಾಗ ಸಮಯ ವ್ಯರ್ಥ ಮಾಡದೆ ಕೂಡಲೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದೆ ಎನ್ನುತ್ತಾರೆ ಹಾವಿನ ಕಡಿತಕ್ಕೆ ಒಳಗಾದ ಮಹಿಳೆ. ಆದರೂ ಒಬ್ಬರೇ ವ್ಯಕ್ತಿಗೆ ಈ ರೀತಿ ಹಾವು ದಾಳಿ ಮಾಡಿರುವುದು ಬಹುಶ ವಿಪರ್ಯಾಸವೇ ಸರಿ.

ಇದನ್ನೂ ಓದಿ: Kushtagi: ಪಟ್ಟಣದ‌ ಮೂರು ಮನೆಗಳಲ್ಲಿ ಕಳ್ಳತನ; ನಗದು ಚಿನ್ನಾಭರಣ, ಬೈಕ್ ಕದ್ದು ಪರಾರಿ

Advertisement

Udayavani is now on Telegram. Click here to join our channel and stay updated with the latest news.

Next