Advertisement

ಜಗತ್ತಿನ ಗಮನ ಸೆಳೆಯಲಿದೆ ಬಸವಕಲ್ಯಾಣ; ಬಸವರಾಜ ಪಾಟೀಲ

06:34 PM Oct 20, 2022 | Team Udayavani |

ಬೀದರ: ಮುಂದಿನ ದಿನಗಳಲ್ಲಿ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ಮತ್ತೂಮ್ಮೆ ಜಗತ್ತಿನ ಗಮನ ಸೆಳೆಯಲಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ| ಬಸವರಾಜ ಪಾಟೀಲ ಸೇಡಂ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ಇತ್ತಿಚೆಗೆ ಜಿಲ್ಲಾ ಕಸಾಪ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಉದ್ಘಾಟನೆ ಮತ್ತು ವಿಜಯಲಕ್ಷ್ಮೀ ಕೌಟಗೆ ರಚಿತ ಸ್ವಾತಂತ್ರ್ಯದ ಕಿಚ್ಚು ಕಿತ್ತೂರು ರಾಣಿ ಚೆನ್ನಮ್ಮ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೀದರ ಜಿಲ್ಲೆಯ ಐತಿಹಾಸಿಕ ಕ್ಷೇತ್ರಗಳು ಮತ್ತೆ ಮುನ್ನೆಲೆಗೆ ಬರಲಿದ್ದು, ಜಿಲ್ಲೆ ಮುಂದಿನ ದಿನಗಳಲ್ಲಿ ಜಗತ್ತು ತಿರುಗಿ ನೋಡುವಂತಾಗಲಿವೆ ಎಂದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಎಂಎಲ್‌ಸಿ ಶಶೀಲ್‌ ನಮೋಶಿ, ಈ ಒಂದು ವರ್ಷಪೂರ್ತಿ ಈ ಭಾಗದ ಅಮೃತ ಮಹೋತ್ಸವ ಕಾರ್ಯಕ್ರಮ ಜರುಗಲಿವೆ. ಸ್ವಾತಂತ್ರ್ಯ ಹೋರಾಟಗಾರ ಸರ್ದಾರ ವಲ್ಲಭಭಾಯಿ ಪಟೇಲ್‌ ರು ಈ ದೇಶದ ಗೌರವಾನ್ವಿತ ನಾಯಕರಾಗಿದ್ದರು.

ಈ ಭಾಗದ ಸ್ವಾತಂತ್ರ್ಯದ ಕುರಿತು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸಬೇಕು, ಕ.ಕ ಭಾಗದ ಸ್ವಾತಂತ್ರ್ಯದ ಕುರಿತು ಇತಿಹಾಸ ರಚನೆಯಾಗಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಆಶಯ ನುಡಿಗಳನ್ನಾಡಿದ ಕಸಾಪ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಬೀದರನಲ್ಲಿ ಒಟ್ಟು 15 ಜನ ಕಾದಂಬರಿಕಾರರು ಇದುವರೆಗೂ 32 ಕಾದಂಬರಿಗಳನ್ನು ರಚಿಸಿದ್ದು, ಅದರಲ್ಲಿ 5 ಐತಿಹಾಸಿಕ ಕಾದಂಬರಿಗಳು ಬಂದಿವೆ.

ಕೌಟಗೆ ಅವರೇ 4 ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವುದು ವಿಶೇಷ ಎಂದರು. ಕೃತಿ ಪರಿಚಯ ಮಾಡಿದ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಅವರು, ವಿಜಯಲಕ್ಷ್ಮೀ ಕೌಟಗೆ ಅವರು ಬರೆದ ಕಾದಂಬರಿ ಮಹತ್ವದ್ದಾಗಿದೆ. ರಾಜ್ಯ ಸ್ವೀಕರಿಸಲಿದೆ. ಕಿತ್ತೂರು ಸಂಸ್ಥಾನ 300 ವರ್ಷಗಳ ಇತಿಹಾಸವನ್ನು ಕಾದಂಬರಿಯಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು. ಬಿಡಿಎ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಕ.ಕ ಅಮೃತ ಮಹೋತ್ಸವದ ಈ ವರ್ಷದಲ್ಲಿ ಕಸಾಪ ಕಾರ್ಯ ಯೋಜನೆಯನ್ನು ಹಾಕಿಕೊಟ್ಟರೆ ಒಟ್ಟು 75 ಜನ ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಪುಸ್ತಕವನ್ನು ಪ್ರಾಧಿಕಾರದಿಂದ ಮುದ್ರಿಸಿಕೊಡಲಾಗುವುದು ಎಂದು ಹೇಳಿದರು.

Advertisement

ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ| ಶಿವಾನಂದ ಸ್ವಾಮೀಜಿ, ಚಿದಂಬ ರಾಶ್ರಮದ ಡಾ| ಶಿವಕುಮಾರ ಸ್ವಾಮಿಗಳು ಮತ್ತು ಲೇಖಕಿ ವಿಜಯಲಕ್ಷ್ಮಿ ಕೌಟಗೆ ಮಾತನಾಡಿದರು. ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗುರುನಾಥ ಜಾಂತಿಕರ್‌ ಅವರನ್ನು ಸನ್ಮಾನಿಸಲಾಯಿತು.

ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಮುಖಂಡ ಗುರುನಾಥ ಕೊಳ್ಳುರ್‌, ಆನಂದ ದೇವಪ್ಪ, ರೇವಣಸಿದ್ದಪ್ಪ ಜಲಾದೆ, ಶಶಿಧರ ಹೊಸಳ್ಳಿ, ಶರಣಪ್ಪ ಮಿಠಾರೆ, ರಮೇಶ ಮಠಪತಿ, ರಾಜಕುಮಾರ ಪಾಟೀಲ, ಬಸವರಾಜ ಭತಮುರ್ಗೆ, ಶಾಲಿವಾನ ಗಂದಗೆ, ಮಲ್ಲಿನಾಥ ಮಠಪತಿ, ವಿದ್ಯಾವತಿ ಬಲ್ಲೂರು, ಶಾಂತಕುಮಾರ ಬಿರಾದಾರ, ಅಶೋಕ ಖೇಮಶೆಟ್ಟಿ, ಕಸ್ತೂರಿ ಪಟಪಳ್ಳಿ, ಜಯದೇವಿ ಯದಲಾಪುರೆ, ರೂಪಾ ಪಾಟೀಲ, ರಾಜಶೇಖರ ಉಪ್ಪಿನ್‌, ಧನರಾಜ
ಮಹಾಜನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next