Advertisement
ಮಂಗಳವಾರ ನಡೆದ 2ನೇ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳಿಂದ ಜಯಿಸಿದೆ. ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಅವರ ಮತ್ತೂಂದು ಅತ್ಯುತ್ತಮ ಬ್ಯಾಟಿಂಗ್ ಭಾರತದ ವನಿತಾ ತಂಡದ ಸರಣಿ ಗೆಲುವಿಗೆ ಕಾರಣವಾಯಿತು.ಟಾಸ್ ಸೋತು ಬ್ಯಾಟಿಂಗ್ ಇಳಿದ ಆತಿಥೇಯರನ್ನು 44.2 ಓವರ್‌ಗಳಲ್ಲಿ 161 ರನ್‌ಗಳಿಗೆೆ ಆಲೌಟ್ ಮಾಡುವಲ್ಲಿ ಭಾರತದ ಬೌಲರ್‌ಗಳು ಯಶಸ್ವಿಯಾಗಿದ್ದರು. ಭಾರತ 35.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 166 ರನ್ ಗಳಿಸಿ ಜಯಭೇರಿ ಬಾರಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯಲ್ಲಿದೆ.
161 ರನ್‌ಗಳ ಸಾಧಾರಣ ಮೊತ್ತದ ಗುರಿ ಹೊಂದಿದ್ದ ಭಾರತ ಆರಂಭಿಕ ಆಘಾತ ಅನುಭವಿಸಿತು. ಆತಿಥೇಯ ತಂಡ 15 ರನ್‌ಗೆ 2 ವಿಕೆಟ್ ಕಿತ್ತು ಭಾರತದ ಓಟಕ್ಕೆ ಕಡಿವಾಣ ಹಾಕಲು ಯತ್ನಿಸಿತು. ಮೊದಲ ಪಂದ್ಯದಲ್ಲಿ 81 ರನ್ ಸಿಡಿಸಿದ್ದ ಜೆಮಿಮಾ ರೋಡ್ರಿಗಸ್ ಈ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿದರೆ, ಮತ್ತೋರ್ವ ಆಟಗಾರ್ತಿ ದೀಪ್ತಿ ಶರ್ಮ ಗಳಿಸಿದ್ದು ಕೇವಲ 8 ರನ್. ಬಳಿಕ ಜತೆಯಾದ ಸ್ಮತಿ ಮಂಧನಾ, ನಾಯಕಿ ಮಿಥಾಲಿ ರಾಜ್ ನ್ಯೂಜಿಲ್ಯಾಂಡ್ ಬೌಲರ್‌ಗಳ ಬೆವರಿಳಿಸುವಲ್ಲಿ ಯಶಸ್ವಿ ಯಾದರು. ಇವರಿ ಬ್ಬರ ಜತೆಯಾಟದಲ್ಲಿ ಬಂದಿದ್ದು ಬರೋಬ್ಬರಿ 150 ರನ್. ಅತ್ಯುತ್ತಮ ಫಾರ್ಮ್ನಲ್ಲಿರುವ ಮಂಧನಾ ಕಳೆದ 10 ಏಕದಿನ ಪಂದ್ಯಗಳಲ್ಲಿ 8 ಅರ್ಧಶತಕ ಬಾರಿಸಿದ್ದಾರೆ. ಅವರು 82 ಎಸೆತಗಳಲ್ಲಿ ಅಜೇಯ 90 ರನ್ ಹೊಡೆದರು. ಇದರಲ್ಲಿ 13 ಬೌಂಡರಿ, ಒಂದು ಸಿಕ್ಸ್ ಇದೆ. ಮಿಥಾಲಿ ರಾಜ್ 111 ಎಸೆತಗಳಲ್ಲಿ 63 ರನ್ ಗಳಿಸಿದರು. ಅವರು 4 ಬೌಂಡರಿ, 2 ಸಿಕ್ಸರ್ ಬಾರಿಸಿದರು. 35.2 ಓವರ್‌ನಲ್ಲಿ ಮಿಥಾಲಿ ಬಾರಿಸಿದ ಸಿಕ್ಸರ್‌ನ ನೆರವಿನಿಂದ ಭಾರತ 166 ರನ್ ಗಳಿಸಿ ಗೆಲುವು ದಾಖಲಿಸಿಕೊಂಡಿದೆ. ಮಂಧನಾ ಸತತ ಎರಡನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದರು. ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್- 44.2 ಓವರ್‌ಗಳಲ್ಲಿ 161 (ಸ್ಯಾಟರ್‌ವೈಟ್ 71, ಕ್ಯಾಸ್ಪರೆಕ್ 21, ಗೋಸ್ವಾಮಿ 23ಕ್ಕೆ 3, ಬಿಷ್ಟಾ 14ಕ್ಕೆ 2, ಪೂನಂ 38ಕ್ಕೆ 2). ಭಾರತ-35.2 ಓವರ್‌ಗಳಲ್ಲಿ 2 ವಿಕೆಟಿಗೆ 166 (ಮಂಧನಾ ಔಟಾಗದೆ 90, ಮಿಥಾಲಿ ರಾಜ್ ಔಟಾಗದೆ 63).
ಪಂದ್ಯಶ್ರೇಷ್ಠ: ಸ್ಮತಿ ಮಂಧನಾ
Related Articles
ಮೊದಲು ಬ್ಯಾಟಿಂಗಿಗೆ ಇಳಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಜೂಲನ್ ಗೋಸ್ವಾಮಿ ಅವರ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭಿಕ ಆಟಗಾರ್ತಿ ಸುಝೀ ಬೇಟ್ಸ್ ಶೂನ್ಯಕ್ಕೆ ಔಟಾದರೆ, ಸೋಫಿ ಡಿವೈನ್ 7 ರನ್ ಗಳಿಸಿ ನಿರ್ಗಮಿಸಿದರು. ನ್ಯೂಜಿಲ್ಯಾಂಡ್ 21 ಓವರ್‌ಗಳಲ್ಲಿ 62 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ನಾಯಕಿ ಆ್ಯಮಿ ಸ್ಯಾಟರ್‌ವೈಟ್ ಆಟದಿಂದ ತಂಡ ಅಲ್ಪಮಟ್ಟಿನ ಚೇತರಿಕೆ ಕಂಡಿತು. ಅವರು 87 ಎಸೆತಗಳಲ್ಲಿ 71 ರನ್ ಗಳಿಸಿದ್ದು ನ್ಯೂಜಿಲ್ಯಾಂಡ್ ತಂಡದ ಅತ್ಯಧಿಕ ಗಳಿಕೆೆ. ಆ್ಯಮಿ ಔಟಾದ ಆನಂತರ ಬಂದ ಆಟಗಾರ್ತಿಯರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಮೊದಲ ಪಂದ್ಯದಲ್ಲಿ ಯಾವುದೇ ವಿಕೆಟ್ ಗಳಿಸದ ಜೂಲನ್ ಗೋಸ್ವಾಮಿ ಈ ಪಂದ್ಯದಲ್ಲಿ 23ಕ್ಕೆ3 ವಿಕೆಟ್ ಕಿತ್ತರು. ಮೊದಲ ಪಂದ್ಯದಲ್ಲಿ ಮೋಡಿ ಮಾಡಿದ್ದ ಸ್ವಿನ್ನರ್‌ಗಳಾದ ಏಕ್ತಾ ಬಿಷ್ಟಾ, ಪೂನಮ್ ಯಾದವ್, ದೀಪ್ತಿ ಶರ್ಮ ತಲಾ 2 ವಿಕೆಟ್ ಸಂಪಾದಿಸಿದರು. ಸರಣಿಯ ಕೊನೆಯ ಪಂದ್ಯ ಫೆಬ್ರವರಿ ಒಂದರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.
Advertisement