ಹೊಸದಿಲ್ಲಿ : ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದು ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಿರುವ ಕಾರಣ ಕೇಂದ್ರ ಸಚಿವ ಸಂಪುಟದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಆ ಪ್ರಕಾರ ಜವುಳಿ ಸಚಿವೆ ಸ್ಮತಿ ಇರಾನಿ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಯಾಗಿ ವಾರ್ತಾ ಮತ್ತು ಪ್ರಸಾರ ಖಾತೆಯನ್ನು ವಹಿಸಿಕೊಡಲಾಗಿದೆ.
ಗ್ರಾಮಾಭಿವೃದ್ಧಿ ಸಚಿವ ನರೇಂದ್ರ ತೋಮರ್ ಅವರಿಗೆ ಹೆಚ್ಚುವರಿಯಾಗಿ ನಗರಾಭಿವೃದ್ಧಿ ಖಾತೆಯನ್ನು ವಹಿಸಿಕೊಡಲಾಗಿದೆ.
ಪ್ರಧಾನಿ ಕಾರ್ಯಾಲಯವು ಈ ವರದಿಯನ್ನು ದೃಢೀಕರಿಸಿದೆ.
Related Articles
ಇದಕ್ಕೆ ಮುನ್ನ ಇಂದು ಬೆಳಗ್ಗೆ ನಾಯ್ಡು ಅವರು ಹಿರಿಯ ಬಿಜೆಪಿ ನಾಯಕರಾದ ಮುರಲೀ ಮನೋಹರ ಜೋಷಿ ಮತ್ತು ಎಲ್ ಕೆ ಆಡ್ವಾಣಿ ಅವರ ಜತೆಗೆ ಸಂಸತ್ ಭವನಕ್ಕೆ ಆಗಮಿಸಿ, ಉಪ ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿ ತಮ್ಮ ನಾಮಪತ್ರವನ್ನು ಸಲ್ಲಿಸಿದರು.