Advertisement

ಸುಗಮ ಸಂಚಾರ ದುಸ್ತರ; ನಿಧಾನಗತಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿ

05:43 PM Jan 06, 2024 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ಎರಡು ವರ್ಷದಲ್ಲಿ ಮುಕ್ತಾಯಗೊಳ್ಳಬೇಕಿದ್ದ ಗ್ರಾಮದಲ್ಲಿ ಹಾಯ್ದು ಹೋಗಿರುವ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಅಗಲೀಕರಣ ಕಾಮಗಾರಿ ಸುಮಾರು 10 ವರ್ಷಗಳಿಂದ ಕುಂಟುತ್ತ ಸಾಗುತ್ತಿದೆ.

Advertisement

ಎರಡು ವರ್ಷದಲ್ಲಿ ಕಾಮಗಾರಿ ಮುಗಿಸಿ ಕೊಡುವಂತೆ ಗುತ್ತಿಗೆದಾರನಿಗೆ 2015ರಲ್ಲೇ ಗುತ್ತಿಗೆ ನೀಡಲಾಗಿತ್ತು. 2017ರಲ್ಲಿ ಕಾಮಗಾರಿ ಪೂರ್ಣ ಮುಗಿಯಬೇಕಿದ್ದ ಇದುವರೆಗೂ ಮುಕ್ತಾಯಗೊಂಡಿಲ್ಲ. ಈ ಅರೆಬರೆ ಹೆದ್ದಾರಿ ಕಾಮಗಾರಿಯಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವುದರ ಜತೆಗೆ ಪ್ರಾಣಭಯದಲ್ಲಿ ಓಡಾಡುವಂತಾಗಿದೆ. ಇಕ್ಕಟ್ಟಾದ ಹೆದ್ದಾರಿಗೆ ಕುಳಗೇರಿ ಕ್ರಾಸ್‌ -ಕೆರೂರ ಮಧ್ಯೆ ಅರೆಬರೆ ಟೋಲ್‌ ಗೇಟ್‌ ನಿರ್ಮಿಸಲಾಗಿದೆ. ಸೂಚನಾ ಫಲಕಗಳಿಲ್ಲದ ಟೋಲ್‌ಗೇಟ್‌ ನಿರ್ಮಾಣದಿಂದ ನಿತ್ಯ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಯ ಮಧ್ಯೆ ಡಿವೈಡರ್‌ ಕಲ್ಲು ನಿಲ್ಲಿಸಲಾಗಿದ್ದು ಕೆಲ ಪ್ರಯಾಣಿಕರು ಕೈ ಕಾಲು ಮುರಿದುಕೊಂಡು ತೊಂದರೆ ಅನುಭವಿಸುವ ಘಟನೆ ನಡೆದಿವೆ.

ಕಳೆದ 10 ವರ್ಷಗಳಿಂದ ಗುತ್ತಿಗೆ ಪಡೆದ ಗುತ್ತಿಗೆದಾರ ಆರಂಭದಲ್ಲಿ ಕಾಮಗಾರಿ ವೇಗವಾಗಿ ನಡೆಸಿದ. ನಂತರದಲ್ಲಿ ಕಾಮಗಾರಿ ಅರ್ಧದಲ್ಲೇ ಬಿಟ್ಟಿದ್ದಾರೆ. ಸುಮಾರು ಗ್ರಾಮಗಳಲ್ಲಿ ಚರಂಡಿ ನಿರ್ಮಾಣ, ಸೂಚನಾ ಫಲಕಗಳಿಲ್ಲದ ಅರೆಬರೆ ಹೆದ್ದಾರಿ ನಿರ್ಮಾಣ,
ಅರ್ದಮರ್ಧ ಬಸ್‌ ನಿಲ್ದಾಣ, ತಡೆಗೋಡೆ ಇಲ್ಲದ ಅಪಾಯಕಾರಿ ಬ್ರಿಡ್ಜ್ ಹೀಗೆ ಹತ್ತು ಹಲವು ಸಮಸ್ಯೆಗಳು ಈ ರಾಷ್ಟ್ರೀಯ
ಹೆದ್ದಾರಿಯಲ್ಲಿವೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು-ಜನಪ್ರತಿನಿ ಧಿಗಳನ್ನು ಕೇಳಿದರೆ ಗುತ್ತಿಗೆದಾರ ಪೋನ್‌ ರಿಸೀವ್‌ ಮಾಡುತ್ತಿಲ್ಲ. ಯಾವ ಸಭೆಗೂ ಹಾಜರಾಗುತ್ತಿಲ್ಲ ಯಾರಿಗೂ ಮರ್ಯಾದೆ ಕೊಡುತ್ತಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

ಗುತ್ತಿಗೆದಾರನಿಗೆ ಸಾಕಷ್ಟು ನೋಟೀಸ್‌ ನೀಡಿದ್ದೇವೆ. ದಂಡ ಹಾಕಿದ್ದೇವೆ. ಎಷ್ಟೇ ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ಎಲ್ಲ ಸಚಿವರು,
ಸಂಸದರು ಎಚ್ಚರಿಕೆ ನೀಡಿದರೂ ಗುತ್ತಿಗೆದಾರ ಗಮನಹರಿಸುತ್ತಿಲ್ಲ. ಕೆಲವೊಮ್ಮೆ ಈ ವಾರದಲ್ಲಿ ಕೆಲಸ ಮಾಡುತ್ತೇನೆ ಎಂದು ನೆಪ
ಹೇಳುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಸರಿಪಡಿಸುತ್ತೇನೆ.
*ಸಂತೋಷ ಕೋಟಿ,
ಹೆದ್ದಾರಿ ಪ್ರಾ ಧಿಕಾರದ ಎಇಇ ನರಗುಂದ

Advertisement

*ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next