Advertisement

ವಿಮಾನದಲ್ಲಿ ಕಾಣಿಸಿಕೊಂಡ ಹೊಗೆ

11:29 AM Nov 14, 2017 | |

ನವದೆಹಲಿ: ಇಂಡಿಗೋ ವಿಮಾನದಲ್ಲಿ ಬ್ಯಾಗ್‌ ಒಂದರ ಒಳಗಿದ್ದ ಲ್ಯಾಪ್‌ಟಾಪ್‌ ಹೊಗೆಯಾಡುವ ಮೂಲಕ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ನ.11ರ ಶನಿವಾರ ನಡೆದಿದೆ. 6ಇ-445 (ವಿಟಿ-ಐಜಿವಿ) ವಿಮಾನ ತಿರುವನಂತಪುರದಿಂದ ಬೆಂಗಳೂರಿನತ್ತ ಹಾರಿದ ಸ್ವಲ್ಪ ಹೊತ್ತಿನಲ್ಲೇ ವಿಮಾನದಲ್ಲಿ ಸುಟ್ಟ ವಾಸನೆ ಹರಡಿದ್ದು, ಪ್ರಯಾಣಿಕರು ವಿಮಾನ ಸಿಬ್ಬಂದಿಗೆ ತಿಳಿಸಿದ್ದಾರೆ.

Advertisement

ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಸೀಟ್‌ ಸಂಖ್ಯೆ 24ಆರ್‌ಎಚ್‌ ಬಳಿ ಇದ್ದ ಕಪ್ಪು ಬಣ್ಣದ ಬ್ಯಾಗ್‌ನಿಂದ ಸಣ್ಣ ಕಿಡಿಯೊಂದಿಗೆ ಹೊಗೆ ಬರುತ್ತಿರುವುದು ಕಂಡುಬಂದಿದೆ. ಕೂಡಲೆ ಅಕ್ಕ ಪಕ್ಕದ ಪ್ರಯಾಣಿಕರನ್ನು ಸ್ಥಳಾಂತರಿಸಿದ ಸಿಬ್ಬಂದಿ, ಬ್ಯಾಗ್‌ ತೆಗೆದು ನೋಡಿದಾಗ ಲ್ಯಾಪ್‌ಟಾಪ್‌ನಿಂದ ಹೊಗೆ ಬರುತ್ತಿರುವುದು ಖಚಿತವಾಗಿದೆ.

ಆರಂಭದಲ್ಲಿ ಅಗ್ನಿ ನಂದಕ ಬಳಸಿ ಕಿಡಿ ಆರಿಸಿದ ಸಿಬ್ಬಂದಿ, ನಂತರ ಲ್ಯಾಪ್‌ಟಾಪ್‌ ಅನ್ನು ನೀರಿನಲ್ಲಿ ಮುಳುಗಿಸಿಟ್ಟಿದ್ದರು. ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಬಂದಿಳಿದ ನಂತರ ಸಾಧನವನ್ನು ಪರೀಕ್ಷೆಗೆ ಕಳಿಸಿಕೊಡಲಾಗಿದೆ. ತಿಂಗಳ ಹಿಂದಷ್ಟೇ ದೆಹಲಿ-ಇಂಧೋರ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್‌ ಹೊತ್ತಿ ಉರಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next