Advertisement

Parliament ಬೆಚ್ಚಿಬೀಳಿಸಿದ ಹೊಗೆ ಬಾಂಬ್ ಕೇಸ್: ಬಾಗಲಕೋಟೆಗೂ ನಂಟು?

11:34 PM Dec 20, 2023 | Team Udayavani |

ಬಾಗಲಕೋಟೆ : ದೆಹಲಿಯ ಸಂಸತ್ ಭವನದಲ್ಲಿ ಹೊಗೆ ಬಾಂಬ್ ಸ್ಪೋಟ ಪ್ರಕರಣಕ್ಕೂ ಬಾಗಲಕೋಟೆಗೂ ನಂಟಿದೆಯಾ ? ಎಂಬ ಚರ್ಚೆ ಇದೀಗ ಶುರುವಾಗಿದೆ.ಹೌದು, ಬುಧವಾರ ಸಂಜೆ ದೆಹಲಿಯ ವಿಶೇಷ ರಾಷ್ಟ್ರೀಯ ತನಿಖಾ ದಳದ ನಾಲ್ವರು ಹಿರಿಯ ಅಧಿಕಾರಿಗಳ ತಂಡ, ಬಾಗಲಕೋಟೆ ನಗರಕ್ಕೆ ಆಗಮಿಸಿದ್ದು, ಇಲ್ಲಿನ ವಿದ್ಯಾಗಿರಿಯಲ್ಲಿ ವಾಸವಿರುವ ನಿವೃತ್ತ ಡಿವೈಎಸ್ಪಿ ಪುತ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.

Advertisement

ದೆಹಲಿಯ ಸಂಸತ್ ಭವನದೊಳಗೆ ಹೊಗೆ ಬಾಂಬ್ ಸ್ಪೋಟದ ಪ್ರಮುಖ ಆರೋಪಿ, ಮೈಸೂರಿನ ಮನೋರಂಜನ್ ಜತೆಗೆ 2008-09ರಲ್ಲಿ ಬೆಂಗಳೂರಿನ ಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗದ ವೇಳೆ ಒಂದೇ ಕೊಠಡಿಯಲ್ಲಿ ಇಬ್ಬರು ವಾಸವಾಗಿದ್ದರು. ಹೀಗಾಗಿ ಇಬ್ಬರಿಗೂ ಬಹು ದಿನಗಳಿಂದ ಸ್ನೆಃಹವಿತ್ತು.ನಿರಂತರ ಸಂಪರ್ಕದಲ್ಲಿದ್ದ ಸ್ನೇಹಿತ ಬಾಗಲಕೋಟೆಯ ಸಾಯಿಕೃಷ್ಣ ಜಗಲಿ ಎಂಬ ಯುವಕನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮನೋರಂಜನ್ ಮತ್ತು ಸಾಯಿಕೃಷ್ಣ ಅವರು ಎಷ್ಟು ವರ್ಷಗಳಿಂದ ಸ್ನೇಹಿತರು, ಸಂಸತ್ ಭವನದ ದಾಳಿಯ ವಿಷಯ, ಸಾಯಿಕೃಷ್ಣನಿಗೆ ಗೊತ್ತಿತ್ತಾ ? ಎಂಬ ವಿಷಯಗಳ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಸುಮಾರು ಎರಡು ಗಂಟೆಗಳ ಕಾಲ ಬಾಗಲಕೋಟೆಯ ನವನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾಚರಣೆ ನಡೆಸಿ, ತಡರಾತ್ರಿ ಸಾಯಿಕೃಷ್ಣ ಜಗಲಿಯನ್ನು ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ಸಾಯಿಕೃಷ್ಣ ಕ್ರಾಂತಿಕಾರಿ ವಿಚಾರ ಹೊಂದಿದ್ದ ಎನ್ನಲಾಗಿದ್ದು, ಮನೋರಂಜನ ಜತೆಗೆ ನಿರಂತರ ಸಂಪರ್ಕವೂ ಹೊಂದಿದ್ದ ಎನ್ನಲಾಗಿದೆ.

ದೆಹಲಿಯ ಪೊಲೀಸರು ಬಾಗಲಕೋಟೆಗೆ ಬಂದಿದ್ದಾರೆ. ಸಂಸತ್ ಭವನದೊಳಗೆ ನುಗ್ಗಿದ ಮೈಸೂರಿನ ಮನೋರಂಜನೆ ಅವರೊಂದಿಗೆ ಎಂಜಿನಿಯರಿಂಗ್ ಬ್ಯಾಚ್‌ಮೇಟ್ ಆಗಿದ್ದ ಬಾಗಲಕೋಟೆಯ ಸಾಯಿಕೃಷ್ಣ ಜಗಲಿ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
-ಅಮರನಾಥ ರಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next