ಹೊಸದಿಲ್ಲಿ: ಸಂಸತ್ ಭದ್ರತಾಲೋಪ ಪ್ರಕರಣ ಸಂಬಂಧಿಸಿದಂತೆ ಮೈಸೂರಿನ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಸದ್ಯ ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಬೆಳವಣಿಗೆ ನಡೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈಗಾಗಲೇ ತನಿಖೆ ನಡೆಯುತ್ತಿದ್ದು, ವರದಿ ಸಲ್ಲಿಕೆ ಯಾದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾ ಗುವುದು ಎಂದು ಜೋಶಿ ತಿಳಿಸಿದ್ದಾರೆ.
ಮನೋರಂಜನ್ ಮಾಸ್ಟರ್ ಮೈಂಡ್?: ಹೊಗೆ ಬಾಂಬ್ ದಾಳಿ ನಡೆಸಿದ ಆರೋಪಿಗಳ ಪೈಕಿ ಒಬ್ಬನಾಗಿರುವ ಮೈಸೂರಿನ ಮನೋರಂಜನ್ ಈ ಸಂಪೂರ್ಣ ಕೃತ್ಯದ ರೂವಾರಿ ಆಗಿರಬಹುದೆಂದು ದಿಲ್ಲಿ ಪೊಲೀಸ್‌ನ ವಿಶೇಷ ಪಡೆ ಸಂಶಯ ವ್ಯಕ್ತಪಡಿಸಿದೆ. ಪ್ರಕರಣದ ಮತ್ತೋರ್ವ ಆರೋಪಿ ಲಲಿತ್ ಝಾ, ವಿಚಾರಣೆ ವೇಳೆ “ಸರಕಾರಕ್ಕೆ ಬುದ್ಧಿ ಕಲಿಸಲು ದೊಡ್ಡದೇನಾದರೂ ಮಾಡಬೇಕು ಎಂದು ನಮ್ಮೆಲ್ಲರನ್ನು ಪ್ರಚೋದಿಸಿದ್ದು ಮನೋರಂಜನ್’ ಎಂದು ಹೇಳಿಕೆ ನೀಡಿದ ಬಳಿಕ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಸ್ಟಡಿ ವಿಸ್ತರಣೆ: ಈ ನಡುವೆಯೇ ಹೊಸದಿಲ್ಲಿಯ ಸ್ಥಳೀಯ ಕೋರ್ಟ್ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಸದ್ಯ ಕ್ಕೆ ನಂಬಲಾಗಿರುವ ಲಲಿತ್ ಝಾನ ಕಸ್ಟಡಿ ಅವಧಿಯನ್ನು ಜ.5ರ ವರೆಗೆ ವಿಸ್ತರಿಸಿದೆ.
ಎಫ್ಐಆರ್ ಕಾಪಿ ನೀಡಲ್ಲ: ಹೊಗೆ ಬಾಂಬ್ ಗ್ಯಾಂಗ್‌ನ ಆರೋಪಿ ನೀಲಂ ದೇವಿಗೆ ಪ್ರಕರಣ ಸಂಬಂಧಿಸಿದಂತೆ ದಾಖಲಿಸಿರುವ ಎಫ್ಐಆರ್ ಪ್ರತಿಯನ್ನು ಒದಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದ ವಿಚಾರಣ ನ್ಯಾಯಾಲಯದ ಆದೇಶಕ್ಕೆ ದ್ಲಿಲಿ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.