Advertisement
ಬ್ಯಾಂಕ್ ನ ಎಟಿಎಂ ಕೋಣೆಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಗ್ರಾಹಕರೋರ್ವರು ಅಗ್ನಿ ಶಾಮಕ ದಳಕ್ಕೆ ಸುದ್ದಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ತಂಡ ಎಟಿಎಂ ಒಳಗೆ ಇರುವ ಬ್ಯಾಟರಿ ರೂಮಿನಿಂದ ಹೊಗೆ ಬರುವುದನ್ನು ಗಮನಿಸಿ ಬಾಗಿಲನ್ನು ಒಡೆದು ಅಗ್ನಿ ಅನಾಹುತವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶನಿವಾರ ಸಂಜೆಯೇ ರೂಮಿನಲ್ಲಿರುವ ಬ್ಯಾಟರಿಗಳಿಂದ ಸುಟ್ಟ ವಾಸನೆ ಬರುತ್ತಿರುವ ಕುರಿತು ಎಟಿಎಂ. ನಿರ್ವಾಹಕ ಎಜೆನ್ಸಿಗೆ ಹೇಳಲಾಗಿದ್ದರೂ ಸಹ ಅವರು ಬಂದು ಬ್ಯಾಟರಿಗಳನ್ನು ಪರೀಕ್ಷಿಸದೇ ಇರುವುದು ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಅಲ್ಲದೇ ಬ್ಯಾಟರಿಗಳನ್ನು ಬಂದ್ ಮಾಡಿದ್ದ ರೂಮಿನಲ್ಲಿಟ್ಟಿದ್ದ ಕಾರಣ ಬಿಸಿಯಾಗಿ ಅಗ್ನಿ ಅನಾಹುತ ಸಂಭವಿಸಿದೆ ಎಂದೂ ಹೇಳಲಾಗಿದೆ.
Related Articles
ಎಟಿಎಂ. ರೂಮಿನಲ್ಲಿ ಅವಘಡ ಸಂಭವಿಸಿದರೆ ಮಾಹಿತಿ ನೀಡುವ ಕುರಿತು ಯಾವುದೇ ಸೂಚನಾ ಫಲಕವಿಲ್ಲ, ಕನಿಷ್ಟ ತುರ್ತು ಪೊಲೀಸ್, ಅಗ್ನಿಶಾಮಕ ಹಾಗೂ ಸಂಪರ್ಕ ಮಾಡಬೇಕಾಗ ಅಧಿಕಾರಿಗಳ ಇಲ್ಲವೇ ಏಜೆನ್ಸಿಯ ದೂರವಾಣಿ ಸಂಖ್ಯೆ ಸಹ ಇಲ್ಲ ಎನ್ನಲಾಗಿದೆ.
Advertisement
ಅಗ್ನಿಶಾಮಕ ದಳದ ಅಧಿಕಾರಿಗಳು ಈ ಕುರಿತು ಸೂಕ್ತ ಮಾಹಿತಿಯನ್ನು ಎಟಿಎಂ ಒಳಗಡೆಯಲ್ಲಿ ಒದಗಿಸುವಂತೆ ಎಲ್ಲಾ ಎಟಿಎಂ ನಿರ್ವಾಹಕರಿಗೆ ತಿಳಿಸುವುದಾಗಿ ಹೇಳಿದ್ದು, ಕನಿಷ್ಟ ಸಂಪರ್ಕಿಸಬೇಕಾದ ತುರ್ತು ಸಂಖ್ಯೆ ಗಳನ್ನು ನಮೂದಿಸುವುದು ಅಗತ್ಯ ಎಂದಿದ್ದಾರೆ .