Advertisement

ಐಪಿಎಲ್‌ನಿಂದ ಸ್ಮಿತ್‌, ವಾರ್ನರ್‌ ಡಿಬಾರ್‌

07:09 PM Mar 29, 2018 | |

ಹೊಸದಿಲ್ಲಿ: ಕಪಟ ಕ್ರಿಕೆಟಿಗರಾದ ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಮೇಲೆ ಬಿಸಿಸಿಐ ಕೂಡ ಚಾಟಿ ಬೀಸಿದೆ. ಇವರಿಬ್ಬರನ್ನೂ ಈ ವರ್ಷದ ಐಪಿಎಲ್‌ನಿಂದ “ಡಿಬಾರ್‌’ ಮಾಡಿದೆ.

Advertisement

ಇವರಿಬ್ಬರೂ ಕ್ರಮವಾಗಿ ರಾಜ ಸ್ಥಾನ್‌ ರಾಯಲ್ಸ್‌ ಮತ್ತು ಸನ್‌ರೈಸರ್ ಹೈದರಾ ಬಾದ್‌ ತಂಡದ ನಾಯಕರಾಗಿದ್ದರು. ಪ್ರಸಕ್ತ ಋತುವಿನ ಐಪಿಎಲ್‌ನಿಂದ ವಜಾಗೊಳಿಸುವ ಮುನ್ನ ಇವರಿಬ್ಬರನ್ನೂ ಐಪಿಎಲ್‌ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು.

“ಕ್ರಿಕೆಟ್‌ ಆಸ್ಟ್ರೇಲಿಯ’ದ ನಿಷೇಧ ಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ತನ್ನ ನಿರ್ಧಾರವನ್ನು ಪ್ರಕಟಿಸಿತು. ಐಪಿಎಲ್‌ ಚೇರ್ಮನ್‌ ರಾಜೀವ್‌ ಶುಕ್ಲಾ ಮಾಧ್ಯಮ ಗಳಿಗೆ ಈ ವಿಷಯ ತಿಳಿಸಿದರು.

“ಕ್ರಿಕೆಟ್‌ ಆಸ್ಟ್ರೇಲಿಯ ತನ್ನಿಬ್ಬರು ಆಟಗಾರ ರಿಗೆ ಒಂದು ವರ್ಷದ ನಿಷೇಧ ವಿಧಿಸಿದೆ. ಇದನ್ನು ಅನುಸರಿಸಿ ನಾವು ಕೂಡ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ಪ್ರಸಕ್ತ ಋತುವಿನ ಐಪಿಎಲ್‌ನಿಂದ ಕೈಬಿಡುತ್ತಿದ್ದೇವೆ’ ಎಂದು ರಾಜೀವ್‌ 
ಶುಕ್ಲಾ ಹೇಳಿದರು.

“ಇದು ನಾವಾಗಿ ಅವಸರದಲ್ಲಿ ತೆಗೆದು ಕೊಂಡ ನಿರ್ಧಾರವಲ್ಲ. ಎಲ್ಲವನ್ನೂ ಕಾದು ನೋಡಿ ನಿರ್ಧರಿಸಲಾಗಿದೆ. ಮೊದಲು ನಾವು ಐಸಿಸಿ ನಿರ್ಧಾರಕ್ಕೆ ಕಾದೆವು, ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯದ ಹೆಜ್ಜೆಯನ್ನು ಗಮನಿಸಿದೆವು. ಅನಂತರವಷ್ಟೇ ಬಿಸಿಸಿಐ ಇವರಿಬ್ಬರ ಐಪಿಎಲ್‌ ನಿಷೇಧಕ್ಕೆ ಮುಂದಾಗಿದೆ. ಸ್ಮಿತ್‌ ಹಾಗೂ ವಾರ್ನರ್‌ ಅವರನ್ನು 2018ರ ಐಪಿಎಲ್‌ನಿಂದ ಹೊರಗಿಡಲಾಗುವುದು. ಎರಡೂ ತಂಡಗಳಿಗೆ ಬದಲಿ ಆಟಗಾರರನ್ನು ಆರಿಸುವ ಅವಕಾಶವಿದೆ….’ ಎಂದು ರಾಜೀವ್‌ ಶುಕ್ಲಾ ಸ್ಪಷ್ಟಪಡಿಸಿದರು. 

Advertisement

ಶುಕ್ಲಾ ಪತ್ರಿಕಾಗೋಷ್ಠಿ ನಡೆಸಿದ ಬೆನ್ನಲೇ ಬಿಸಿಸಿಐ ಕೂಡ ಈ ವಿಷಯದ ಕುರಿತು ಅಧಿಕೃತ ಮಾಹಿತಿ ನೀಡಿತು. “ಸುಪ್ರೀಂ ಕೋರ್ಟ್‌ ನೇಮಿಸಿದ ಬಿಸಿಸಿಐ ಆಡಳಿತಾಧಿಕಾರಿಗಳು ಬುಧವಾರ ಸಭೆ ನಡೆಸಿ ಇಡೀ ಪ್ರಕರಣವನ್ನು ಪರಿಶೀಲಿಸಿದರು. ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಐಪಿಎಲ್‌ ಚೇರ್ಮನ್‌ ರಾಜೀವ್‌ ಶುಕ್ಲಾ ಮತ್ತು ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್‌ ಚೌಧರಿ ಸೇರಿಕೊಂಡು ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನು ತತ್‌ಕ್ಷಣವೇ ಜಾರಿಗೆ ಬರುವಂತೆ ಈ ವರ್ಷದ ಐಪಿಎಲ್‌ನಿಂದ ಹೊರಗಿಡಲು ತೀರ್ಮಾನಿಸಿದರು’ ಎಂದು ಬಿಸಿಸಿಐ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next