Advertisement

ಸ್ಮಿತ್‌, ವಾರ್ನರ್‌ ನಿಷೇಧ ತೆರವು?

06:25 AM Nov 10, 2018 | Team Udayavani |

ಸಿಡ್ನಿ: ಚೆಂಡು ವಿರೂಪ ಪ್ರಕರಣದಿಂದ ಕ್ರಿಕೆಟ್‌ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯ ಕ್ರಿಕೆಟ್‌ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ಮತ್ತೆ ಆಸ್ಟ್ರೇಲಿಯ ತಂಡಕ್ಕೆ ಮರಳುವ ಸಾಧ್ಯತೆಯಿದೆ. 

Advertisement

ಈ ಇಬ್ಬರ ನಿಷೇಧದ ನಂತರ ಆಸೀಸ್‌ ಕ್ರಿಕೆಟ್‌ ತಂಡ ಸತತ ಸೋಲು ಕಾಣುತ್ತಿದೆ. ಮತ್ತೂಂದು ಕಡೆಯಿಂದ ಇವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ಒತ್ತಡವೂ ಜೋರಾಗಿದೆ. ಇದನ್ನು ಪರಿಗಣಿಸುವುದಾಗಿ ಕ್ರಿಕೆಟ್‌ ಆಸ್ಟ್ರೇಲಿಯ ನೂತನ ಮುಖ್ಯಸ್ಥ  ಕೆವಿನ್‌ ರಾಬರ್ಟ್ಸ್ ಹೇಳಿದ್ದಾರೆ.

ಇದರೊಂದಿಗೆ ಅವಧಿಗೂ ಮುನ್ನವೇ ನಿಷೇಧ ಮುಗಿಸಿ ಇಬ್ಬರೂ ತಂಡ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಬಿಡುಗಡೆಯಾದ ಸ್ವತಂತ್ರ ವಸ್ತುಸ್ಥಿತಿ ಪರಿಶೀಲನೆ ವರದಿಯಲ್ಲಿ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯನ್ನೇ ಟೀಕಿಸಲಾಗಿದೆ. 

ಸ್ಮಿತ್‌, ವಾರ್ನರ್‌ ಚೆಂಡು ವಿರೂಪ ಮಾಡುವುದಕ್ಕೆ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿಯ ಅಹಂಕಾರಿ ಧೋರಣೆಯೇ ಕಾರಣ. ಎಂತಹ ಬೆಲೆ ತೆತ್ತಾದರೂ ಗೆಲ್ಲಲೇಬೇಕೆಂದು ತನ್ನ ಆಟಗಾರರಿಗೆ ಒತ್ತಡ ಹೇರುತ್ತಿದೆ. ತನ್ನ ಪ್ರಮುಖ ಆಟಗಾರರನ್ನು ಮಂಡಳಿ ಒಂದು ವಸ್ತುವಿನಂತೆ ನಡೆಸಿಕೊಳ್ಳುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರಿಂದ ಮಂಡಳಿ ವಿರುದ್ಧ ಆಕ್ರೋಶ ತೀವ್ರವಾಗಿದೆ. ಪರಿಣಾಮ ಇತ್ತೀಚೆಗೆ ಮಂಡಳಿ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದ ಡೇವಿಡ್‌ ಪೀವರ್‌ ಸೇರಿ ಹಲವರು ಪದಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next