Advertisement

ಮೇಲ್ಮನವಿ ಸಲ್ಲಿಸದಿರಲು ಸ್ಮಿತ್‌, ಬ್ಯಾನ್‌ಕ್ರಾಫ್ಟ್ ನಿರ್ಧಾರ

07:15 AM Apr 05, 2018 | |

ಸಿಡ್ನಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದು ಕಠಿಣ ಶಿಕ್ಷೆಗೆ ಗುರಿಯಾಗಿರುವ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಸ್ಟೀವನ್‌ ಸ್ಮಿತ್‌ ಹಾಗೂ ಬ್ಯಾನ್‌ಕ್ರಾಫ್ಟ್ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದ್ದಾರೆ.

Advertisement

ತಂಡದ ನಾಯಕನಾಗಿ ಆಗಿರುವ ತಪ್ಪಿಗೆ ಪೂರ್ಣ ಜವಾಬ್ದಾರನಾಗಿರುತ್ತೇನೆ. ಹೀಗಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆ ಹೊರಡಿಸಿರುವ ಶಿಕ್ಷೆಯ ಪ್ರಮಾಣದ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ. ನನಗೆ ವಿಧಿಸಿರುವ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿದ್ದೇನೆ ಎಂದು ಸ್ಟೀವನ್‌ ಸ್ಮಿತ್‌ ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಇದೇ ವೇಳೆ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಶಿಕ್ಷೆ ಅನುಭವಿಸುವುದಾಗಿ ಟ್ವೀಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ ಡೇವಿಡ್‌ ವಾರ್ನರ್‌ ಈ ಕುರಿತಂತೆ ಇನ್ನು ಪ್ರತಿಕ್ರಿಯೆ ನೀಡಿಲ್ಲ. 

ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದ ವೇಳೆ ಬ್ಯಾನ್‌ಕ್ರಾಫ್ಟ್ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ನಾಯಕನ ಅರಿವಿಗೆ ಬಂದಿದ್ದರೂ ಚೆಂಡು ವಿರೂಪಗೊಳಿಸುವುದನ್ನು ಸ್ಮಿತ್‌ ತಡೆಯಲಿಲ್ಲ.  ಹೀಗಾಗಿ ಸ್ಮಿತ್‌ , ಉಪನಾಯಕ ವಾರ್ನರ್‌ಗೆ 12 ತಿಂಗಳು ನಿಷೇಧ ಹಾಗೂ ಬ್ಯಾನ್‌ಕ್ರಾಫ್ಟ್ಗೆ 9 ತಿಂಗಳು ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next