Advertisement

ನಗುವ ಬುದ್ಧನ ನೆನೆದು… : ಭಾರತದ ಪ್ರಥಮ ಪರಮಾಣು ಪರೀಕ್ಷೆಗೆ 46 ವರ್ಷ

02:20 AM May 19, 2020 | Hari Prasad |

ಭಾರತ ಒಂದು ಪರಮಾಣು ಶಕ್ತಿಯಾಗಿ ಗುರುತಿಸಿಕೊಂಡು ಸೋಮವಾರಕ್ಕೆ (ಮೇ 18) 46 ವರ್ಷಗಳು ತುಂಬಿವೆ.

Advertisement

1974ರ ಮೇ 18ರಂದು ರಾಜಸ್ಥಾನದ ಪೋಖ್ರಾನ್‌ ಗ್ರಾಮದಲ್ಲಿ ದೇಶದ ಮೊದಲ ಪರಮಾಣು ಪರೀಕ್ಷೆ ಯಶಸ್ವಿಯಾಗಿ, ಅದರಲ್ಲೂ ಅತ್ಯಂತ ಶಾಂತಿಯುತವಾಗಿ ನಡೆದಿತ್ತು.

ಈ ಪರೀಕ್ಷೆಗೆ ಭಾರತ ಸರ್ಕಾರ ಇರಿಸಿದ್ದ ಕೋಡ್‌ ನೇಮ್‌ ‘ಸ್ಮೈಲಿಂಗ್‌ ಬುದ್ಧ’ . ಈ ಹೆಸರು ಬರಲು ಕಾರಣ ಪರೀಕ್ಷೆ ನಡೆದದ್ದು ಬುದ್ಧ ಪೂರ್ಣಿಮೆ ದಿನ. ಆದರೆ ಈ ಹೆಸರಿನ ಹಿಂದೆ ಮತ್ತೂಂದು ಕಥೆ ಇದೆ…

ಕೊನೆಗೂ ಬುದ್ಧ ನಕ್ಕ
ಪರೀಕ್ಷೆ ನಡೆದ ದಿನ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಬಳಿ ಹೋದ ಬಾಬಾ ಆಟೋಮಿಕ್‌ ರಿಸರ್ಚ್‌ ಸೆಂಟರ್‌ನ ನಿರ್ದೇಶಕರಾಗಿದ್ದ ರಾಜಾ ರಾಮಣ್ಣ, ‘ಬುದ್ಧ ಕೊನೆಗೂ ನಗುಬೀರಿದ’ (ದಿ ಬುದ್ಧ ಹ್ಯಾಸ್‌ ಫೈನಲಿ ಸ್ಮೈಲ್ಡ್‌’) ಎಂದರು. ಆಗ ಯೋಜನೆಗೆ ‘ಸ್ಮೈಲಿಂಗ್‌ ಬುದ್ಧ’ ಬುದ್ಧ ಹೆಸರು ಬಂತು.

ಯೋಜನೆ ವಿಶೇಷತೆ
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯನಲ್ಲದ ರಾಷ್ಟ್ರವೊಂದು ನಡೆಸಿದ ಮೊಟ್ಟ ಮೊದಲ ದೃಢೀಕೃತ ಪರಮಾಣು ಪರೀಕ್ಷೆ. ಪ್ರಯೋಗಕ್ಕೂ ಮೊದಲು ಸ್ಫೋಟದಿಂದಾಗುವ ಹಾನಿ ವ್ಯಾಪ್ತಿ ಕುರಿತು ತೀವ್ರ ಚರ್ಚೆ ನಡೆದಿತ್ತು.

Advertisement

ಸ್ಫೋಟದಿಂದಾದ ಹಾನಿಯ ತೀವ್ರತೆ 8-12  ಕಿಲೋ ಟನ್‌ಗಳಷ್ಟಿತ್ತು. ಅಮೆರಿಕ ಮತ್ತು ಇತರ ದೇಶಗಳ ಗುಪ್ತಚರ ಸಂಸ್ಥೆಗಳಿಗೆ ಈ ಪ್ರಯೋಗದ ಸುಳಿವು ಕೂಡ ಸಿಗಲಿಲ್ಲ. ಪರಮಾಣು ಪ್ರಸರಣ ರಹಿತ ಒಪ್ಪಂದ ಏರ್ಪಟ್ಟ 6 ವರ್ಷ ಬಳಿಕ ಭಾರತ ಈ ಪ್ರಯೋಗ ನಡೆಸಿತು.

1972 : ಪರಮಾಣು ಪರೀಕ್ಷೆಯ ಪಯಣ ಆರಂಭ
1974 : ಪೋಖ್ರಾನ್‌ ಪರಮಾಣು ಪರೀಕ್ಷೆ ನಡೆದ ವರ್ಷ
1998 : ಪೋಖ್ರಾನ್‌ – II ಪರಮಾಣು ಪರೀಕ್ಷೆ ನಡೆದ ವರ್ಷ

Advertisement

Udayavani is now on Telegram. Click here to join our channel and stay updated with the latest news.

Next