ಆಗ ನೀವು ಅತ್ತುಬಿಡಿ ಅಂತ ಹೇಳಿದ್ವಿ ಜ್ಞಾಪಕ ಇದೆಯಾ? ಈಗ ನಕ್ಕು ಬಿಡುವ ಸರದಿ. ನಗುವುದರಿಂದ ಲಾಭ ಇದೆ. ನಗಿಸುವುದರಿಂದಲೂ. ನೀವು ಜೋರಾಗಿ ನಕ್ಕರೆ ಮೆದುಳಲ್ಲಿ ಕೆಲಸ ಶುರುವಾಗುತ್ತದೆ. ಹೃದಯ ಆರಾಮಾಗುತ್ತದೆ. ಏಕೆಂದರೆ, ನೋವಿಗೂ ನಗುವಿಗೂ ಸಂಬಂಧ ಇದೆ. ನೋವು ಹೆಚ್ಚಾದಾಗ ಗಾಬಾ ಪೇಟಿಂಗ್ ಅನ್ನೋ ಹಾರ್ಮೋನು ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದು ನಮ್ಮ ಖನ್ನತೆಗೆ ದೂಡುತ್ತದೆ.
ಹೆಚ್ಚು ಹೆಚ್ಚು ಮುಖವರಳಿಸಿ ನಕ್ಕರೆ ದೇಹದಲ್ಲಿ ಡೋಪಮೀನ್, ಎಂಡಾಪಮೀನ್, ಸೆರಿಟನಿಯನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಗಾಬಾ ಪೇಟಿಂಗ್ ಹಾರ್ಮೋನ್ ಉಂಟು ಮಾಡುವ ಪರಿಣಾಮ ಕಡಿಮೆ ಮಾಡುತ್ತದೆ. ಡೋಪಮೀನ್ ದೇವರ ಕೊಟ್ಟ ಆಂಟಿಬಯೋಟಿಕ್ ಇದ್ದಂತೆ. ದೇಹದಲ್ಲಿ ಹೆಚ್ಚು ಹೆಚ್ಚು ಉತ್ಪಾದನೆಯಾದರೆ ನೋವು ಕಡಿಮೆಯಾಗುತ್ತಾ ಹೋಗುತ್ತದೆ. ರೋಗ ನಿರೋಧಕ ಗುಣ ಹೆಚ್ಚುತ್ತದೆ.
ಅಂದರೆ, ಇದು ನೋವು ನಿವಾರಕದಂತೆ ಕೆಲಸ ಮಾಡುತ್ತದೆ. ಇವಿಷ್ಟೇ ಅಲ್ಲ, ಎಂಡೋಪಮೀನ್, ಸೆರಿಟನಿಯನ್ ರಾಸಾಯನಿಕಗಳು ಹೃದಯದ ಭಾಗಕ್ಕೂ ತಲುಪುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೀಗಾಗಿ, ನಕ್ಕರೆ ಹಾರ್ಟ್ ಅಟ್ಯಾಕ್ ಕಡಿಮೆ. ಜೊತೆಗೆ ನಗುವುದರಿಂದ ನಮ್ಮ ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ. ಸಾಮಾನ್ಯ ಉಸಿರಾಟಕ್ಕಿಂತ ಹೆಚ್ಚು ಗಾಳಿಯನ್ನು ಎಳೆದುಕೊಳ್ಳುವ ಸ್ಟೋರ್ ಮಾಡಿಕೊಳ್ಳುತ್ತದೆ.
ಮುಖ ಗಂಟಿಕ್ಕಿಕೊಂಡರೆ ದೇಹವನ್ನು ನಾವೇ ಒತ್ತಡದ ಲಾಕಪ್‌ನಲ್ಲಿ ಹಾಕಿದಂತಾಗುತ್ತದೆ. ಹಾಗಾಗಿ, ನಕ್ಕು ಬಿಡಿ ಪ್ಲೀಸ್.