ನ್ಯೂಯಾರ್ಕ್: ನಿಮ್ಮ ಪಕ್ಕದಲ್ಲಿ ಇರುವವರಿಗಿಂತ ನಿಮಗೇ ಹೆಚ್ಚು ಸೊಳ್ಳೆಗಳು ಕಡಿಯುತ್ತ ವೆಯೇ? ಕೆಲವರಿಗೇ ಏಕೆ ಸೊಳ್ಳೆ ಗಳು ಹೆಚ್ಚು ಕಚ್ಚುತ್ತವೆ ಎಂಬುದನ್ನು ಎಂದಾದರೂ ಯೋಚಿಸಿದ್ದಿರಾ? ಇದಕ್ಕೆ ಅಮೆರಿಕದ ನ್ಯೂಯಾರ್ಕ್‌ನ ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕರು ಉತ್ತರ ಕಂಡುಕೊಂಡಿದ್ದಾರೆ.
ಸಂಶೋಧನೆಯ ಪ್ರಕಾರ, ತಮ್ಮ ಚರ್ಮದ ಮೇಲೆ ಹೆಚ್ಚಿನ ಮಟ್ಟದ ಕಾರ್ಬಾಕ್ಸಿಲಿಕ್ ಆಮ್ಲಗಳನ್ನು ಹೊಂದಿ ರುವ ಜನರ ಮೇಲೆ ಹೆಣ್ಣು ಸೊಳ್ಳೆ “ಈಡಿಸ್ ಈಜಿಪ್ಟಿ’ಗೆ 100 ಪಟ್ಟು ಹೆಚ್ಚು ಆಕರ್ಷಿತವಾಗುತ್ತದೆ.
ಈ ಪ್ರಕಾರದ ಸೊಳ್ಳೆಯು ಡೆಂಗ್ಯೂ, ಚಿಕೂನ್‌ಗುನ್ಯಾ, ಹಳದಿ ಜ್ವರ, ಝಿಕಾ ಮುಂತಾದ ರೋಗಗಳು ಹರಡಲು ಕಾರಣವಾಗಿದೆ. ಆಹಾರದಲ್ಲಿ ಬದಲಾವಣೆ ಹೊರತಾಗಿಯೂ ಮನ್ಯುಷರ ಮೇಲೆ ಸೊಳ್ಳೆಗಳ ಆಕರ್ಷಣೆಯು ಸ್ಥಿರವಾಗಿ ರಲಿದೆ ಎಂಬುದು ಸಂಶೋಧ ನೆಯಿಂದ ತಿಳಿದುಬಂದಿದೆ.
“ನಿಮ್ಮ ಚರ್ಮದ ಮೇಲೆ ಹೆಚ್ಚಿನ ಪ್ರಮಾಣದ ಕಾರ್ಬಾ ಕ್ಸಿಲಿಕ್ ಆಮ್ಲ ಹೊಂದಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಸೊಳ್ಳೆಗಳ ಕಡಿತಕ್ಕೆ ಒಳಗಾಗುತ್ತೀರಿ,’ ಎಂದು ರಾಕ್‌ಫೆಲ್ಲರ್ ವಿಶ್ವವಿದ್ಯಾಲಯದ ಸಂಶೋಧಕಿ ಲೆಸ್ಲಿ ವೋಶಾಲ್ ತಿಳಿಸಿದ್ದಾರೆ.
64 ಮಂದಿ ಸ್ವಯಂಸೇವಕರನ್ನು ಈ ಸಂಶೋಧನಾತ್ಮಕ ಅಧ್ಯಯನಕ್ಕಾಗಿ ತೊಡಗಿಸಿಕೊಳ್ಳಲಾಗಿದೆ.