Advertisement

ಎಸ್‌ಎಂಇ ಸಮ್ಮೇಳನ:ಭವಾನಿ ಶಿಪ್ಪಿಂಗ್‌ ಸಂಸ್ಥೆಗೆ ಪ್ರಶಸ್ತಿ

04:27 PM May 11, 2018 | Team Udayavani |

ಮುಂಬಯಿ: ಸಣ್ಣ ಮತ್ತು ಮಧ್ಯಮ (ಮೈಕ್ರೊ) ಉದ್ಯಮ ಕ್ಷೇತ್ರದಲ್ಲಿ ಅಂತಾರಾಷ್ಟಿÅàಯ ಮಟ್ಟದಲ್ಲಿ ಅತೀ ಶೀಘ್ರದಲ್ಲಿ ಪ್ರಗತಿ ಹೊಂದಿದ ಶ್ರೇಷ್ಟ ಉದ್ಯಮ ಸಂಸ್ಥೆಗಳಲ್ಲಿ ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗೆ ಈ ಬಾರಿ ಪ್ರಶಸ್ತಿ ಲಭಿಸಿದೆ.

Advertisement

ಎ. 22ರಂದು ನವದೆಹಲಿಯಲ್ಲಿ ಜರಗಿದ ಅಂತಾರಾಷ್ಟ್ರೀಯ ಎಸ್‌. ಎಂ. ಇ. (ಸ್ಮಾಲ್‌ ಆ್ಯಂಡ್‌ ಮೀಡಿಯಂ) ಕನ್ವೆಶನ್‌ನಲ್ಲಿ ಭಾರತ ಸರಕಾರದ ಸಣ್ಣ ಮತ್ತು ಮಧ್ಯಮ ಉದ್ದಿಮೆ (ಮೈಕ್ರೋ) ರಾಜ್ಯ ಸಚಿವ ಗಿರಿರಾಜ್‌ ಸಿಂಘ… ಇವರಿಂದ ಭವಾನಿ ಶಿಪ್ಪಿಂಗ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ಇವರ ಅನುಪಸ್ಥಿತಿಯಲ್ಲಿ ಅವರ ಪುತ್ರ, ಸಂಸ್ಥೆಯ ನಿರ್ದೇಶಕ ಜೀಕ್ಷಿತ್‌ ಕೆ. ಶೆಟ್ಟಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಮಾರು 39 ರಾಷ್ಟ್ರಗಳ 160 ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಪ್ರತಿನಿಧಿಗಳು ಮೂರು ದಿನಗಳವರೆಗೆ ನಡೆದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ 2007 ರಲ್ಲಿ ನವಶೇವಾದಲ್ಲಿ ಕಂಟೇನರ್‌ ಯಾರ್ಡ್‌ ಮತ್ತು ಕಂಟೇನರ್‌ ಟ್ರಾನ್ಸ್‌ ಪೋರ್ಟ್‌ ಉದ್ದಿಮೆಯೊಂದಿಗೆ ಆರಂಭಗೊಂಡು, ಕೇವಲ 10 ವರ್ಷಗಳಲ್ಲೇ ಸಂಪೂರ್ಣ ಲಾಜಿಸ್ಟಿಕ್‌ ವ್ಯವಹಾರದಲ್ಲಿ ಮುಂಚೂಣಿಯಲ್ಲಿತ್ತು.

2015ನೇ ಸಾಲಿನಲ್ಲಿ ಅತೀ ಶೀಘ್ರ ಪ್ರಗತಿ ಹೊಂದಿದ ಲಾಜಿಸ್ಟಿಕ್‌ ಕಂಪೆನಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. 2016ರಲ್ಲಿ ಲಾಜಿಸ್ಟಿಕ್‌ ಪ್ರೊಫೆಶನಲ್‌ ಆಫ್‌ ದಿ ಇಯರ್‌, 2017ರಲ್ಲಿ ಇಂಡಿಯಾ ಮೆರಿಟೈಮ್‌ ಅವಾರ್ಡ್‌ ಪ್ರಶಸ್ತಿಯನ್ನು ಪಡೆದಿದೆ. ಭವಾನಿ ಶಿಪ್ಪಿಂಗ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೆ. ಡಿ. ಶೆಟ್ಟಿ ಇವರು ತಮ್ಮ ಭವಾನಿ ಫೌಂಡೇಷನ್‌ ಮುಖಾಂತರ ಸಮಾಜಮುಖೀ ಕಾರ್ಯಕ್ರಮಗಳಲ್ಲೂ ತೊಡಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next