Advertisement

ದೀಪಾವಳಿ ಬಳಿಕ ಸ್ಮಾರ್ಟ್‌ಫೋನ್‌ ದರ ಹೆಚ್ಚಳ?

05:58 PM Oct 18, 2022 | Team Udayavani |

ನವದೆಹಲಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ, ಸ್ಮಾರ್ಟ್‌ಫೋನ್‌ಗಳು ಅದರಲ್ಲೂ ವಿಶೇಷವಾಗಿ ಅಗ್ಗದ ದರದ ಹ್ಯಾಂಡ್‌ಸೆಟ್‌ಗಳು ದುಬಾರಿಯಾಗಲಿವೆ!

Advertisement

ಡಾಲರ್‌ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಾಣುತ್ತಿರುವುದರ ಎಫೆಕ್ಟ್ ಎಂಬಂತೆ, ಸ್ಮಾರ್ಟ್‌ಫೋನ್‌ಗಳ ಬೇಡಿಕೆ ಕುಸಿಯುತ್ತಿದ್ದು, ಪ್ರಸಕ್ತ ವರ್ಷ ಒಟ್ಟಾರೆ ಶಿಪ್‌ಮೆಂಟ್‌ ಕೂಡ ಕಡಿಮೆಯಾಗಿದೆ. ಹೀಗಾಗಿ, ಅಕ್ಟೋಬರ್‌-ಡಿಸೆಂಬರ್‌ ಅವಧಿಯಲ್ಲಿ ಸ್ಮಾರ್ಟ್‌ಫೋನ್‌ಗಳ ದರ ಶೇ.5-7ರಷ್ಟು ಹೆಚ್ಚಳವಾಗಲಿದೆ ಎಂದು ಕೈಗಾರಿಕಾ ವಿಶ್ಲೇಷಕರು ಹೇಳಿದ್ದಾರೆ.

ಹಬ್ಬದ ಋತುವಿನಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಸ್ಮಾರ್ಟ್‌ಫೋನ್‌ ಕಂಪನಿಗಳು ತಾವು ಆಮದು ಮಾಡಿಕೊಳ್ಳುತ್ತಿರುವ ಪರಿಕರಗಳ ವೆಚ್ಚ ಹೆಚ್ಚಾಗಿದ್ದರೂ, ಆ ನೋವನ್ನು ನುಂಗಿಕೊಂಡು ವಹಿವಾಟು ನಡೆಸುತ್ತಿವೆ. ಆದರೆ, ನವೆಂಬರ್‌ನಿಂದ ಪರಿಸ್ಥಿತಿ ಬದಲಾಗಲಿದೆ. ಸ್ಮಾರ್ಟ್‌ಫೋನ್‌ಗಳ ದರದಲ್ಲಿ ಶೇ.5-7ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.

ಚಿಪ್‌ಸೆಟ್‌ಗಳು, ಮೆಮೊರಿ, ಇಮೇಜ್‌ ಸೆನ್ಸರ್‌ಗಳು ಮತ್ತಿತರ ಪರಿಕರಗಳಿಗಾಗಿ ಕಂಪನಿಗಳು ವಿದೇಶಗಳನ್ನೇ ಅವಲಂಬಿಸಿವೆ. ಆಮದು ವೆಚ್ಚ ಹೆಚ್ಚಾಗುತ್ತಿರುವ ಕಾರಣ, ಒಂದೋ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಳ ಮಾಡಬೇಕು ಅಥವಾ ಲಾಭದಲ್ಲಿ ಕಡಿತ ಅನುಭವಿಸಬೇಕು. ಇಲ್ಲಿಯವರೆಗೆ ನಾವು ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಆದರೆ, ಇನ್ನು ಮುಂದೆ ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ಲಾವಾ ಇಂಟರ್‌ನ್ಯಾಷನಲ್‌ ಅಧ್ಯಕ್ಷ ಸುನೀಲ್‌ ರೈನಾ.

Advertisement

Udayavani is now on Telegram. Click here to join our channel and stay updated with the latest news.

Next