Advertisement

ಸ್ಮಾರ್ಟ್‌ಗ್ರಿಡ್‌ ಅನಿವಾರ್ಯ

07:02 AM Jan 28, 2019 | Team Udayavani |

ದಾವಣಗೆರೆ: ನಗರದ ಯುಬಿಡಿಟಿ ಕಾಲೇಜಿನಲ್ಲಿ ಎಐಸಿಟಿಇ, ಐಎಸ್‌ಟಿಇ ಸಹಯೋಗದಲ್ಲಿ ನಡೆದ ಸ್ಮಾರ್ಟ್‌ಗ್ರಿಡ್‌ ಕಾರ್ಯಾಗಾರದ ಸಮಾರೋಪ ನಡೆಯಿತು.

Advertisement

ಮಂಗಳೂರಿನ ಸಹ್ಯಾದ್ರಿ ಇನ್ಸ್‌ಟಿಟ್ಯೂಟ್ ಆಫ್‌ ಟೆಕ್ನಾಲಜಿ ಸಂಶೋಧನಾ ಮತ್ತು ಅಭಿವೃದ್ದಿ ವಿಭಾಗದ ನಿರ್ದೇಶಕ ಡಾ| ಎಸ್‌. ಮಂಜಪ್ಪ, ಪ್ರಸ್ತುತ ದಿನಗಳಲ್ಲಿ ವಿದ್ಯುತ್‌ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸ್ಮಾರ್ಟ್‌ಗ್ರಿಡ್‌ ಆನಿವಾರ್ಯ. ನವೀಕರಿಸಬಲ್ಲ ಸಂಪನ್ಮೂಲಗಳ ಬಗ್ಗೆ ಹೆಚ್ಚು ಗಮನ ಮತ್ತು ಆದ್ಯತೆ ನೀಡಬೇಕಾಗಿದೆ ಎಂದರು.

ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ಕುಲಸಚಿವ ಡಾ| ಬಸವರಾಜ್‌ ಬಣಕಾರ್‌ ಮಾತನಾಡಿ, ಇಂದಿನ ವಾತಾವರಣದಲ್ಲಿ ಸ್ಮಾರ್ಟ್‌ಗ್ರಿಡ್‌ ಉಪಯೋಗಿ ಮಾತ್ರವಲ್ಲ, ಅತೀ ಮಹತ್ವದ್ದು ಎಂದರು. ಯುಬಿಡಿಟಿ ಕಾಲೇಜು ಪ್ರಾಚಾರ್ಯ ಡಾ| ಶಿವಪ್ರಸಾದ್‌ ಬಿ. ದಂಡಗಿ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಗ್ರಿಡ್‌ ಪ್ರಮುಖ ಪಾತ್ರ ವಹಿಸುತ್ತದೆ. ಸ್ಮಾರ್ಟ್‌ಗ್ರಿಡ್‌ ತಂತ್ರಜ್ಞಾನದಲ್ಲಿ ವಿದ್ಯುತ್‌ ಅಭಿಯಂತರರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ಯುಬಿಡಿಟಿ ಕಾಲೇಜು ವಿದ್ಯುತ್‌ ವಿಭಾಗದ ಮುಖ್ಯಸ್ಥ ಡಾ| ಅಶೋಕ್‌ ಕುಸಗೂರ್‌ ಅಧ್ಯಕ್ಷತೆ ವಹಿಸಿದ್ದರು. ಸತ್ಯನಾರಾಯಣರಾಜು, ಇತರರು ಇದ್ದರು. ಕ್ಷಿತಿಜ ನಿರೂಪಿಸಿದರು. ಮೇಘನಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next