ವಿಶೇಷವಾಗಿ ಟಿವಿ ನೋಡುವವರೂ ಹೆಚ್ಚು ಅತ್ಯಾಧುನಿಕ ಟಿವಿಗಳ ಖರೀದಿಗೆ ಹೆಚ್ಚು ಉತ್ಸಾಹ ತೋರುತ್ತಿರುವುದರಿಂದಾಗಿ ಇಂದು ಸ್ಮಾರ್ಟ್ ಟಿವಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಐಪಿ ಎಲ್ ನಂತ ವರ್ಷದ ಕ್ರಿಕಟ್ ಹಬ್ಬಕ್ಕಂತೂ ವೀಕ್ಷಕರು ಸ್ಮಾರ್ಟ್ ಟಿವಿಗೆ ಹೆಚ್ಚು ಒಲುವು ತೋರುತ್ತಿರುವುದು ತಿಳಿಯಬಹುದು.
ಈಗಾಗಲೇ ಕ್ರಿಕೆಟ್ ಹಬ್ಬ ಐಪಿಎಲ್ ಪ್ರಾರಂಭವಾಗಿದೆ. ಈ ವೇಳೆ ಹಳೇ ಕಾಲದ ಡೂಮ್ ಟಿವಿಯಲ್ಲಿ ಕ್ರಿಕೆಟ್ ನೋಡುವುದೆಂದರೆ ಯಾರಿಗೆ ತಾನೆ ಇಷ್ಟ ಇರುತ್ತೆ. ಅದರ ಬದಲು ದೊಡ್ಡದಾದ ಸ್ಮಾರ್ಟ್ ಟಿವಿಯಲ್ಲಿ ಮ್ಯಾಚ್ ನೋಡುವುದೇ ಕಣ್ಣಿಗೆ ಚಂದ.
ಹೌದು.. ಹೆಚ್ಚಿನ ಮನೆಗಳಲ್ಲೀಗ ಡೂಮ್ ಟಿವಿ ಬದಲಿ ಸ್ಮಾರ್ಟ್ ಟಿವಿಗಳು ಬಂದಿವೆ. ನೆಚ್ಚಿನ ಧಾರಾವಾಹಿಗಳು, ಚಲನಚಿತ್ರಗಳು, ವಾರ್ತೆಗಳು, ಆಟೋಟಗಳನ್ನು ವೀಕ್ಷಕರು ಸ್ಮಾರ್ಟ್ ಟಿವಿಯಲ್ಲಿ ನೋಡಲು ಆರಂಭಿಸಿದ್ದಾರೆ. ಅದಕ್ಕೆ ತಕ್ಕಂತೆ ಇದೀಗ ಸ್ಮಾರ್ಟ್ ಟಿವಿ ಖರೀದಿಯೂ ಜೋರಾಗಿದೆ. ಮಂಗಳೂರು ಮಾರುಕಟ್ಟೆಯ ಅಂಗಡಿಗಳಲ್ಲಿ ಗ್ರಾಹಕರು ಸ್ಮಾರ್ಟ್ ಟಿವಿಯ ಮೊರೆ ಹೋಗುತ್ತಿದ್ದಾರೆ.
ಟಿವಿ ಏಕೆ ಸ್ಮಾರ್ಟ್ ಇರಬೇಕು?
ಮಾಮೂಲಿ ಟಿವಿಯಲ್ಲಿಯೂ ಕಾಣುವ ಕ್ರಿಕೆಟ್‌ಗೆ ಸ್ಮಾರ್ಟ್ ಟಿವಿ ಏಕೆ ಬೇಕು ಎಂಬ ಪ್ರಶ್ನೆ ಅನೇಕರಲ್ಲಿ. ಮಾಮೂಲಿ ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುವುದಕ್ಕೂ, ಸ್ಮಾರ್ಟ್ ಟಿವಿಯಲ್ಲಿನ ವೀಕ್ಷಣೆಗೂ ವ್ಯತ್ಯಾಸವಿದೆ. ಸ್ಮಾರ್ಟ್‌ಟಿವಿಯ ನಿರ್ವಹಣೆ ಕೂಡ ತುಂಬಾ ಸುಲಭ. ಅಷ್ಟೇ ಅಲ್ಲದೆ, ಪರ್ಫೆಕ್ಟ್ ಪಿಸಿ ಹೊಂದಾಣಿಕ ಹೊಂದಿದೆ. ಸ್ಮಾರ್ಟ್ ಟಿ.ವಿ. ಉಪಯೋಗಿಸುವುದರಿಂದ ಶೇ.40ರಷ್ಟು ವಿದ್ಯುತ್ ಉಳಿತಾಯ ಮಾಡಬಹುದಾಗಿದೆ. ಸ್ಮಾರ್ಟ್ ಟಿವಿಯಲ್ಲಿ ಉತ್ತಮ ಗುಣಮಟ್ಟ ಸೌಂಡ್, ಅತ್ಯಾಧುನಿಕ ಮಾದರಿಯ ಡಿಜಿಟಲ್ ಆಂಪ್ಲಿಫೈಯರ್ ಹೊಂದಿದೆ.ಸ್ಮಾರ್ಟ್ ಟಿವಿಯಲ್ಲಿ 4ಕ್ಕಿಂತ ಹೆಚ್ಚು ಸ್ಪೀಕರ್‌ಗಳು ಹೊಂದಿವೆ.
ಆನ್‌ಲೈನ್‌ನಲ್ಲಿಯೂ ಐಪಿಎಲ್ ಹಬ್ಬ
ಐಪಿಎಲ್ ಕ್ರಿಕೆಟ್ ಪಂದ್ಯಾಟದ ಪ್ರಯುಕ್ತ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಆನ್‌ಲೈನ್‌ನಲ್ಲಿ ವಿಶೇಷ ಆಫರ್‌ಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿಯೂ ಐಪಿಎಲ್ ಪಂದ್ಯಾವಳಿ ವೀಕ್ಷಿಸಲು ಅಮೆಜಾನ್ ಶೇ. 45 ರಷ್ಟು ರಿಯಾಯಿತಿ ದರದಲ್ಲಿ ಟಿವಿಯನ್ನು ಖರೀದಿಸಲು ಅವಕಾಶ ಕಲ್ಪಿಸಿದೆ. ಪ್ರತಿಷ್ಠಿತ ಸ್ಯಾಮ್ ಸಂಗ್, ಎಲ್.ಜಿ., ಸೋನಿ, ಮತ್ತು ಶಿಯೋಮಿ ಕಂಪೆನಿಗಳ ಬೆಸ್ಟ್ ಟಿವಿಗಳನ್ನು ಗ್ರಾಹಕರು ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ. ಶಿಯೋಮಿ ಕಂಪೆನಿಯ ಎಲ್‌ಇಡಿ ಟಿವಿ 4ಸಿ ಪ್ರೋ-32 ಇಂಚು ಡಿಸ್‌ಪ್ಲೇ ಹೊಂದಿರುವ ಟಿವಿ 12,999 ರೂ., ಎಲ್.ಜಿ. ಕಂಪೆನಿಯ 32 ಇಂಚಿನ ಎಚ್.ಡಿ. ಸ್ಮಾರ್ಟ್ ಟಿವಿ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. 30,990 ಬೆಲೆಯ ಟಿವಿ ಗ್ರಾಹಕರಿಗಾಗಿ 11,550 ಬೆಲೆಗೆ ದೊರಕುತ್ತಿದೆ. ಸ್ಯಾಮ್‌ಸಂಗ್ ಕಂಪೆನಿಯ 32 ಇಂಚಿನ ಸಿರೀಸ್ 4 ಎಚ್‌ಡಿ ಎಲ್‌ಇಡಿ ಸ್ಮಾರ್ಟ್ ಟಿವಿ ಶೇ.41 ರಷ್ಟು ರಿಯಾಯಿತಿ ದರದಲ್ಲಿ ದೊರಕುತ್ತಿದೆ. 33,900 ರೂ. ಬೆಲೆ ಈ ಸ್ಯಾಮ್‌ಸಂಗ್ ಟಿವಿ 13,901 ರೂ ರಿಯಾಯಿತಿ ಬೆಲೆಗೆ ದೊರೆಯುತ್ತಿದೆ. ಸೋನಿ ಸಂಸ್ಥೆಯ 43 ಇಂಚಿನ ಫುಲ್ ಎಚ್‌ಡಿ ಎಲ್‌ಇಡಿ ಆ್ಯಂಡ್ರಾಯ್ಡ ಟಿ.ವಿ. ಐಪಿಎಲ್ ಕ್ರಿಕೆಟ್ ಪ್ರಯುಕ್ತ 52,999 ಬೆಲೆಯ ಟಿವಿ 13,910 ರೂ. ಬೆಲೆಗೆ ದೊರೆಯುತ್ತಿದೆ.
ಕ್ರಿಕೆಟ್ ಹಬ್ಬಕ್ಕೆ ಆಫರ್‌ಗಳ ಸುರಿಮಳೆ
ಭಾರತದಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಆಟಕ್ಕೆ ವಿದ್ಯಾರ್ಥಿಗಳು, ಯುವಕರೇ ಸಹಿತ ಎಲ್ಲ
ವಯೋಮಾನದ ಪ್ರೇಕ್ಷಕರಿದ್ದಾರೆ. ಇದೇ ಕಾರಣಕ್ಕೆ ಕ್ರಿಕೆಟ್ ಹಬ್ಬಕ್ಕೆ ನಗರ ಅನೇಕ ಎಲೆಕ್ಟ್ರಾನಿಕ್ ಮಳಿಗೆಗಳಲ್ಲಿ ಸ್ಮಾರ್ಟ್‌ಟಿವಿಗಳಿಗೆ ಆಫರ್ ನೀಡಲಾಗಿದೆ. ಸ್ಮಾರ್ಟ್ ಟಿವಿ ಖರೀದಿಗೆ ಸ್ಕ್ರಾಚ್ ಆ್ಯಂಡ್ ವಿನ್ ಎಂಬ ಆಫರ್ ನೀಡಲಾಗುತ್ತಿದ್ದು, 10,000 ರೂ.ವರೆಗೆ ಖಚಿತ ಕ್ಯಾಶ್‌ಬ್ಯಾಕ್, ಸ್ಮಾರ್ಟ್‌ಫೋನ್, 75 ಲಕ್ಷಕ್ಕೂ ಅಧಿಕ ಬಹುಮಾನಗಳನ್ನು ಪಡೆಯಲು ಅವಕಾಶವಿದೆ. ಇನ್ನು, ಇಎಂಐ ಮುಖೇನ ಟಿವಿ ಖರೀದಿ ಮಾಡುವ ಗ್ರಾಹಕರಿಗೂ ವಿಶೇಷ ಆಫರ್‌ಗಳನ್ನು ನೀಡಲಾಗುತ್ತಿದೆ. ಅನೇಕ ಕಂಪೆನಿಗಳು ಶೇ.0 ಡೌನ್‌ಪೇಮೆಂಟ್ ಆಫರ್‌ಗಳನ್ನು ನೀಡುತ್ತಿದ್ದಾರೆ. ಅಲ್ಲದೆ, ಇಎಂಐ ಅವಧಿಯ ಮೇಲೂ ಹೆಚ್ಚಿನ ಅವಧಿಗಳ ಆಫರ್‌ಗಳನ್ನು ನೀಡಲಾಗುತ್ತಿದೆ.
ವಿಶೇಷ ಆಫರ್
ಸ್ಮಾರ್ಟ್ ಟಿ.ವಿ. ಖರೀದಿಗೆ ಹೆಚ್ಚಿನ ಮಂದಿ ಮುಂದೆ ಬರುತ್ತಿದ್ದಾರೆ. ಪ್ರತೀ ಖರೀದಿಗೆ ವಿಶೇಷ ಆಫರ್‌ಗಳನ್ನು
ನೀಡಲಾಗುತ್ತಿದೆ. ಮೂಲ ಬೆಲೆಕ್ಕಿಂತ ಶೇ.30ರಷ್ಟು ರಿಯಾಯಿತಿ ಇದ್ದು, ಮತ್ತೂ ಕೆಲ ಕಂಪೆನಿ ಸ್ಮಾರ್ಟ್ ಟಿ.ವಿ. ಖರೀದಿಗೆ ಶೇ.0 ಇಎಂಐ ಸೌಲಭ್ಯವಿದೆ.
– ಮೋಹನ್,
– ಮೋಹನ್,
ಉದ್ಯಮಿ, ಮಂಗಳೂರು
ನವೀನ್ ಭಟ್, ಇಳಂತಿಲ