ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್ ಫಿಟೆ°ಸ್ ಬ್ಯಾಂಡ್ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ. ನಮ್ಮ ಸ್ಮಾರ್ಟ್‌ಫೋನ್‌ಗಳಿಗೆ ಇವುಗಳನ್ನು ಸಂಪರ್ಕಿಸಿಕೊಂಡು ಫೋನ್‌ನ ಬಹುತೇಕ ಚಟುವಟಿಕೆಯನ್ನು ಅದರಲ್ಲಿ ನಿಯಂತ್ರಿಸಬಹುದಾಗಿದೆ. ಹಾನರ್ ಬ್ಯಾಂಡ್ 5ಐ, ಎಂಐ ಬ್ಯಾಂಡ್ 4, ಇನ್‌ಫಿನಿಕ್ಸ್, ಸ್ಯಾಮ್‌ಸಂಗ್ ಮೊದಲಾದ ಸಂಸ್ಥೆಗಳು ಆತ್ಯಾಧುನಿಕ ಸೌಲಭ್ಯಗಳನ್ನು ನೀಡುವ ಬ್ಯಾಂಡ್ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ.
ಹಾನರ್ ಕಂಪೆನಿ ಭಾರತದಲ್ಲಿ ಹಾನರ್ ಬ್ಯಾಂಡ್ 5ಜಿ ಫಿಟೆ°ಸ್ ಬ್ಯಾಂಡ್ ಮತ್ತು ಹಾನರ್ ಮ್ಯಾಜಿಕ್ ವಾಚ್ 2 ಸ್ಮಾರ್ಟ್ ವಾಚ್ ಅನ್ನು ಬಿಡುಗಡೆಗೊಳಿಸಿದೆ. ಬ್ಯಾಂಡ್ 5ಜಿ ಯುಎಸ್‌ಬಿ ಪೋರ್ಟ್ ಪ್ಲಗ್ ಇನ್ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ. ಹಾನರ್ ಮ್ಯಾಜಿಕ್ ವಾಚ್ 2 ಜಿಪಿಎಸ್ ಅನ್ನು ಬೆಂಬಲಿಸುತ್ತದೆ.
ಬ್ಯಾಂಡ್ 5ಜಿ 160×80 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 0.96-ಇಂಚಿನ ಟಚ್-ಸೆನ್ಸಿಟಿವ್ ಕಲರ್ ಡಿಸ್‌ಪ್ಲೇ ಹೊಂದಿದೆ. ಫಿಟೆ°ಸ್ ಬ್ಯಾಂಡ್ ಬ್ಲೂಟೂತ್ ವಿ 4.2 ಮೂಲಕ ಕಾರ್ಯ ನಿರ್ವಹಿಸುತ್ತದೆ.
ಹಾಂಕಾಂಗ್ ಮೂಲದ ಇನ್ಫಿನಿಕ್ಸ್ ಕಂಪೆನಿ ನೂತನ ಸ್ಮಾರ್ಟ್‌ಬ್ಯಾಂಡ್‌ವೊಂದನ್ನು ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸುತ್ತಿದ್ದ ಇನ್ಫಿನಿಕ್ಸ್ ಇದೇ ಮೊದಲ ಬಾರಿಗೆ ಕಲರ್ ಡಿಸ್‌ಪ್ಲೇ ಹೊಂದಿರುವ ರಿಸ್ಟ್ ವಾಚ್ ಪರಿಚಯಿಸಿದೆ. ಇದು ಪ್ರೀಮಿಯಂ ಫಿಟ್‌ನೆಸ್ ಬ್ಯಾಂಡ್ ಆಗಿದ್ದು, ರಿಯಲ್ ಟೈಮ್ ಮಾನಿಟರ್ ಅಳವಡಿಸಲಾಗಿದೆ.
ನೂತನ ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಹಾರ್ಟ್‌ರೇಟ್, ಬಿಪಿ ಮಾನಿಟರಿಂಗ್, ಆಕ್ಟಿವಿಟಿ ಟ್ರ್ಯಾಕಿಂಗ್, ಆಕ್ಸಿಜನ್ ಲೆವಲ…, ಔಟ್‌ಡೋರ್ ರನ್ನಿಂಗ್, ಸ್ಟೆಪ್ ಕೌಂಟಿಂಗ್ ಮೊದಲಾದ ಹಲವು ಆಯ್ಕೆಗಳಿವೆ.
ಶವೋಮಿ ಸಂಸ್ಥೆಯ ಆಕರ್ಷಕ ಫೀಚರ್‌ಗಳುಳ್ಳ ಎಂಐ ಬ್ಯಾಂಡ್ 4 ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಳೆದ ವರ್ಷ ಲಾಂಚ್ ಆದ ಹೊಸ ಸರಣಿಯ ಎಂಐ ಬ್ಯಾಂಡ್ 4, 20 ದಿನಗಳ ಕಾಲ ಬ್ಯಾಟರಿಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಬ್ಯಾಂಡ್ 4 ಟ್ರೆಡ್ಮಿಲ…, ವ್ಯಾಯಾಮ, ಔಟ್ ಡೋರ್ ರನ್ನಿಂಗ್, ಸೈಕ್ಲಿಂಗ್, ವಾಕಿಂಗ್ ಮತ್ತು ಸ್ವಿಮ್ಮಿಂಗ್ ಸಹಿತ ವಿವಿಧ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುತ್ತದೆ.
ಮ್ಯೂಸಿಕ್ ನಿಯಂತ್ರಣ, ವಾಯ್ಸ… ಕರೆ ನಿರ್ವಹಣೆ, ಸಂದೇಶ ಓದುವುದು ಹೀಗೆ ಕೆಲವು ಆಯ್ಕೆಗಳು ಲಭ್ಯವಿವೆ. ಬಣ್ಣದ ಅಮೊಲಿಡ್ ಡಿಸ್‌ಪ್ಲೇ, ನಾಲ್ಕು ಬಣ್ಣದ ಸ್ಟ್ರಾಪ್ ಕೂಡ ಇದರಲ್ಲಿ ಲಭ್ಯವಿವೆೆ. 0.95 ಇಂಚಿನ ಅಮೊಲಿಡ್ ಡಿಸ್‌ಪ್ಲೇ, ಸ್ಪೆ$Éà, ವಾಟರ್ ರೆಸಿಸ್ಟೆಂಟ್, ಬ್ಲೂಟೂತ್ 5.0 ಬೆಂಬಲ ಕೂಡ ಇದರ ವಿಶೇಷವಾಗಿದೆ.