Advertisement
ಸ್ಮಾರ್ಟ್ ಫೋನ್ ಬಳಕೆಯಿಂದ ನಾವೂ ಸ್ಮಾರ್ಟ್ ಆಗುತ್ತಿದ್ದೇವೆ. ಮೊಬೈಲ್ ಕಂಪೆನಿಗಳು ವಾರಕ್ಕೊಂದರಂತೆ ತಾಂತ್ರಿಕ ಉನ್ನತಿ ಹೊಂದಿರುವ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಅದಕ್ಕಾಗಿ ಜನರೂ ಕಾಯುತ್ತಿದ್ದು, ತಮ್ಮ ನೆಚ್ಚಿನ ಫೋನ್‌ಗಳನ್ನು ಖರೀದಿಸಿ ಸಂಭ್ರಮಿಸುತ್ತಾರೆ.
ಯುವ ಜನಾಂಗಕ್ಕೆ ಫೋನ್ ಕ್ರೇಜ್ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರ ಅಭಿರುಚಿ ಅರಿತು ಕಂಪೆನಿಗಳು ಹೊಸ ಮಾದರಿಯ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. 2019ರ ಟ್ರೆಂಡ್‌ನಲ್ಲಿ ಮಡಚುವ ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿವೆ. ಸ್ಯಾಮ್ ಸಂಗ್, ಮೋಟೊರೊಲಾ, ಎಲ್‌ಜಿ, ಹುವೈ, ಶಿಯೋಮಿ ಕಂಪೆನಿಗಳು ಮಡಚುವ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮೊಬೈಲ್ ಪ್ರಿಯರ ನಿದ್ದೆಗೆಡಿಸಲು ಸಿದ್ಧತೆ ನಡೆಸಿವೆ. ಸ್ಯಾಮ್‌ಸಂಗ್ ಮುಂಚೂಣಿ
ಸ್ಯಾಮ್‌ಸಂಗ್ ಕಂ ಪೆನಿಯ ಫ್ಲಿಪ್ ಫೋನ್ ಗಳು ಅಂತರ್ಜಾಲದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಲೇ ಇವೆ. ಬಾಗಿಸಬಹುದಾದ ಸ್ಕ್ರೀನ್ ಇರುವ ಸಾಧನಗಳ ತಯಾರಿಕೆಯ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆ, ಪ್ರಯೋಗ ನಡೆಸುತ್ತಲೇ ಇರುವ ಸ್ಯಾ ಮ್ ಸಂಗ್ ಸ್ಕ್ರೀನನ್ನೇ ಮಡಚಬಹುದಾದ ಫೋನ್ ತಯಾರಿಸಿದ್ದೂ ಅಲ್ಲದೆ ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ. ಮಡಚುವ ಫೋನ್‌ಗಳು ನೋಡಲು ಫ್ಲಿಪ್ ಫೋನ್‌ನಂತೆಯೇ ಕಾಣಿಸುತ್ತದೆ. ಒಂದು ರೀತಿ ಒಂದೇ ಫೋನ್‌ನಲ್ಲಿ ಎರಡು ಡಿಸ್‌ಪ್ಲೇ ಇದ್ದಂತೆ. ಇಲ್ಲಿ ಎರಡೂ ಸ್ಕ್ರೀನ್‌ಗಳು ಕೂಡಿಕೊಂಡಿರುತ್ತವೆ. ಎರಡೂ ಸೇರಿಸಿದರೆ ದೊಡ್ಡ ಸ್ಕ್ರೀನ್ ಕಾಣಿಸುತ್ತದೆ. ಇದನ್ನು ಮಡಚಿ ಜೇಬಿನಲ್ಲಿ ಇರಿಸಿಕೊಳ್ಳಲು ಅನುಕೂಲ. ಇದು ಮೈಕ್ರೋಸಾಫ್ಟ್‌ನ ಸರ್ಫೇಸ್ ಬುಕ್ ಲ್ಯಾಪ್‌ಟಾಪ್ ಕಮ್ ಟ್ಯಾಬ್ಲೆಟ್‌ನಲ್ಲಿ ಬಳಸಿದ ತಂತ್ರಜ್ಞಾನವನ್ನೇ ಹೋಲುತ್ತದೆ.
Related Articles
ಮಡಚಬಹುದಾದ ಸ್ಮಾರ್ಟ್ ಫೋನ್ ಬಿಡುಗಡೆಗೆ ಹುವೈ ಕೂಡ ತಯಾರಿ ನಡೆಸಿತ್ತು. ದೊಡ್ಡ ಸ್ಕ್ರೀನ್ ಬೇಕು ಎನ್ನುವವರ ಕೊರತೆಯನ್ನು ಹುವೈ ಹೊರತರುವ ಫೋಲ್ಡೇಬಲ್ ಸ್ಮಾರ್ಟ್ ಫೋನ್ ನೀಗಿಸಲಿದೆಯಂತೆ. ಮಡಚಬಹುದಾದಂತ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಹೊಸತು. ಹೀಗಾಗಿ ಟ್ಯಾಬ್‌ಗಳ ರೀತಿ ದೊಡ್ಡ ಸ್ಕ್ರೀನ್ ಅನುಭವವನ್ನು ನೀಡುವಲ್ಲಿ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಯಶಸ್ವಿ ಯಾಗಲಿದೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ. ಹುವೈ ಪ್ರಕಾರ ಸ್ಯಾಮ್ ಸಂಗ್‌ಗಿಂತಲೂ ಮೊದಲೇ ಮಡಚುವ ಫೋನ್‌ಗಳನ್ನು ಅದು ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸ್ಮಾರ್ಟ್ ಫೋನ್‌ನ ಅಭಿವೃದ್ಧಿ ಕೆಲಸ ಮುಕ್ತಾಯವಾಗಿದೆ ಎಂದು ಇತ್ತೀಚೆಗೆ ಸ್ಯಾಮ್‌ಸಂಗ್ ಹೇಳಿತ್ತು. ಮೂಲಗಳ ಪ್ರಕಾರ ಹುವೈ ಫೋನ್‌ನಲ್ಲಿ ಎರಡು ಸ್ಕ್ರೀನ್‌ಗಳ ಬದಲಾಗಿ ಮಡಚಬಹುದಾದಂತಹ ಒಂದೇ ಸ್ಕ್ರೀನ್ ಹೊಂದಿದೆ. ಸ್ಯಾಮ್‌ಸಂಗ್ ಬಿಡುಗಡೆ ಮಾಡುವ ಸ್ಮಾರ್ಟ್‌ಫೋನ್‌ನಲ್ಲಿ 7 ಇಂಚಿನ ಸ್ಕ್ರೀನ್ ಇದ್ದು, ಸ್ಕ್ರೀನ್ ಅನ್ನು ನಮ್ಮ ಪರ್ಸ್‌ನಂತೆ ಅರ್ಧದಷ್ಟು ಮಡಚಬಹುದಾಗಿದೆ. ಇನ್ನಿತರ ಕಂಪೆನಿಗಳಾದ ಮೋಟೊರೊಲಾ ರಾಝರ್ 2019, ಎಲ್‌ಜಿ ಬೆಂಡಿ, ಶಿಯೋಮಿ ಕಂಪೆನಿಗಳು ಮಡಚುವ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿವೆ.
Advertisement
ಸಾಕಷ್ಟು ನಿರೀಕ್ಷೆ ಇದೆಸ್ಮಾರ್ಟ್ಫೋನ್ ಗಳಲ್ಲಿ ಏನೇ ಹೊಸತು ಬಂದರೂ ಅದನ್ನು ನೋಡಬೇಕು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಈ ಮಡ ಚುವ ಫೋನ್ ಗಳು ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಇದರ ರಿವ್ಯೂ ಬಗ್ಗೆ ಹುಡುಕಾಟಕ್ಕೆ ತೊಡಗಿದ್ದೇನೆ. ದೊಡ್ಡ ಗಾತ್ರ ಫೋನ್ ಬೇಕು ಆದರೆ ಹಿಡಿದು ಕೊಳ್ಳಲು ಸುಲಭವಾಗಿರಬೇಕು ಎನ್ನುವವರಿಗಾಗಿ ಹೇಳಿ ಮಾಡಿಸಿದಂತಿದೆ.
-ನಿಶ್ಮಾ, ಮಂಗಳೂರು ತುಂಬಾ ಚೆನ್ನಾಗಿವೆ
ಮಡಚುವ ಫೋನ್ ಗಳು ಈಗೀರುವ ಸ್ಮಾರ್ಟ್ ಫೋನ್, ಟ್ಯಾಬ್ ಗಳಿಗೆ ಪೈಪೋಟಿ ನೀಡುವಂತಿದೆ. ಟ್ಯಾಬ್ ಇಷ್ಟಪಡುವವರು ಈ ಮಡುಚುವ ಫೋನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲ್ಲೆಂದರಲ್ಲಿ ಸಾಗಿಸುವುದು ಇದನ್ನು ಸುಲಭ. ಜತೆಗೆ ಹೆಚ್ಚಿನ ಫೀ ಚರ್ ಗಳು ಎಲ್ಲರಿಗೂ ಇಷ್ಟವಾಗುವಂತಿದೆ.
– ಪಿಯೂಷ್,
ಕೊಡಿಯಾಲ್ ಬೈಲ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಕ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ಫೋಲ್ಡೇಬಲ್ ಸ್ಮಾರ್ಟ್ ಫೋನ್ 7.3 ಇಂಚಿನ ಡಿಸ್ ಪ್ಲೇ ಹೊಂದಿದೆ. ಈ ಫೋನ್ ಗಳಲ್ಲಿ ಎರಡು ಸ್ಕ್ರೀನ್‌ಗಳನ್ನು ಕಾಣಬಹುದು. ಮೊದಲನೇಯದು 1536×2152 ಸ್ಕ್ರೀನ್ ರೆಸಲ್ಯೂಶನ್, 420 ಪಿಪಿಐ ಹೊಂದಿದ್ದರೆ, ಎರಡನೆಯದ್ದು 4.58 ಇಂಚಿನ ಸ್ಕ್ರೀನ್ 840 1960 ರೆಸಲ್ಯೂಶನ್, 420 ಪಿಪಿಐ ಸ್ಕ್ರೀನ್ ಹೊಂದಿರಲಿದೆ. ಗೂಗಲ್ ಜತೆಗೂಡಿ ಈ ಫೋನ್ ತಯಾರಾಗುತ್ತಿದ್ದು, ಫೋನ್‌ನ ಇತರೆ ಯಾವುದೇ ಮಾಹಿತಿಗಳನ್ನು ಸ್ಯಾಮ್ ಸಂಗ್ ಬಹಿರಂಗಪಡಿಸಿಲ್ಲ. ಪ್ರಜ್ಞಾ ಶೆಟ್ಟಿ