Advertisement

ವೇಗದ ವಾಹನಗಳನ್ನು ನಿಯಂತ್ರಿಸುವ ಸ್ಮಾರ್ಟ್‌ ರಸ್ತೆ ಉಬ್ಬುಗಳು

12:58 AM Oct 06, 2019 | Sriram |

ನೀವು ನಿತ್ಯ ಗಮನಿಸರಬಹುದು ವಾಹನಗಳು ಹೋಗುವ ವೇಗ ಮತ್ತು ಅದರಿಂದ ಅಪಘಾತಕ್ಕೀಡಾಗುವ ಪ್ರಸಂಗಗಳು ದಿನ ಪತ್ರಿಕೆಯಲ್ಲಿ, ವಾಟ್ಸಪ್‌ನಲ್ಲಿ, ಫೇಸ್‌ ಬುಕ್‌ ನಲ್ಲಿ ರಾರಾಜಿಸುತ್ತಿರುವುದನ್ನು. ವಾಹನಗಳಿಂದ ಆಗುತ್ತಿರುವ ಅದೆಷ್ಟೋ ಅನಾಹುತಗಳಿಗೆ ಸರಕಾರ ಅದೆಷ್ಟೇ ಬಿಗು ನಿಯಮಗಳನ್ನು ತಂದರೂ ಪಾಲನೆಗಳಾಗುವುದು ಅಷ್ಟಕಷ್ಟೇ.

Advertisement

ಜನದಟ್ಟಣೆ ಮತ್ತು ಅಪಘಾತ ವಲಯಗಳಲ್ಲಿ, ಶಾಲೆಗಳಿರುವ ರಸ್ತೆಗಳಲ್ಲಿ ವಾಹನಗಳ ವೇಗವನ್ನು ಕುಗ್ಗಿಸಲು ಸಾಮಾನ್ಯವಾಗಿ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗುತ್ತದೆ. ಈ ರೀತಿಯ ಉಬ್ಬುಗಳು ಜನರಿಗೆ ಒಂದು ರೀತಿಯಲ್ಲಿ ಸುರಕ್ಷತೆಯ ಭಾವವನ್ನು ತಂದೊಡ್ಡುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಲವೆಡೆ ಅವೈಜ್ಞಾನಿಕವಾಗಿ ನಿರ್ಮಿಸಿದ ಉಬ್ಬುಗಳು ಸವಾರರಿಗೆ ಕಿರಿಕಿರಿ ತಂದೊಡ್ಡಬಲ್ಲದು.

ನಗರಕ್ಕೆ ಹೊಸದಾಗಿ ಬರುವವನಿಗೆ ಎಲ್ಲಿ ಏನೀದೆ ಅನ್ನುವುದರ ಬಗ್ಗೆ ಸ್ಪಷ್ಟವಾದ ಅರಿವು ಇರುವುದಿಲ್ಲ. ಇಂತವರು ಒಂದಿಮ್ಮೊಲೇ ರಸ್ತೆ ಉಬ್ಬುಗಳನ್ನು ಎದುರಿಸಿ ವಾಹನಗಳಿಗೆ ಸಮಸ್ಯೆಗಳನ್ನು ತಂದೊಡ್ಡಬೇಕಾಗುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ದೊರಕಿದ್ದು ಸ್ಮಾರ್ಟ್‌ ಸ್ಪೀಡ್‌ ಹಂಪ್ಸ್‌ಗಳಿಂದ.

ಏನಿದು ಇಂಟೆಲಿಜೆಂಟ್‌ ಸ್ಪೀಡ್‌ ಹಂಪ್ಸ್‌?
ಗಮನಿಸಿದ್ದಂತೆ ರಸ್ತೆ ಉಬ್ಬುಗಳು ಡಾಮರು, ಮೆಟಲ್‌ನಿಂದ ನಿರ್ಮಿತ ವಾಗಿರುತ್ತದೆ. ಆದರೆ ಸ್ಪೇನ್‌, ಇಸ್ರೆಲ್‌, ಜರ್ಮನಿ ತನ್ನ ನಗರದಲ್ಲಿ ಇದಕ್ಕೆ ವಿಭಿನ್ನವಾದಂತಹ ಹಂಪ್ಸ್‌ ಒಂದನ್ನು ಪರಿಚಯಿಸಿದೇ ಅದುವೇ ಸ್ಮಾರ್ಟ್‌ ಸ್ಪೀಡ್‌ ಹಂಪ್ಸ್‌. ಈ ಸ್ಪೀಡ್‌ ಹಂಪ್ಸ್‌ ನಿಧಾನವಾಗಿ ಗಾಡಿ ಚಲಾಯಿಸುವವರಿಗೆ ಯಾವುದೇ ರೀತಿಯ ಹಾನಿಯನ್ನು ಮಾಡುವುದಿಲ್ಲ. ಅದು ಹೇಗೆ ಎಂದುಕೊಂಡಿರಾ.. ಈ ಉಬ್ಬುಗಳು ನ್ಯೂಟೋನಿಯನ್‌ ಅಲ್ಲದ ದ್ರವದಿಂದ ತುಂಬಿರುತ್ತವೆ. ಕಾರ್ನ್ಸ್ಟಾರ್ಚ್‌ ಮತ್ತು ನೀರಿನ ಮಿಶ್ರಣದಿಂದ ನಿರ್ಮಿತವಾಗಿದೆ. ನೀವು ಯಾವ ರೀತಿ ಈ ಹಂಪ್‌ ನ ಮೇಲೆ ಸಾಗುತ್ತಿರೋ ಅದರ ಮೇಲೆ ಈ ಹಂಪ್‌ ನ ಪ್ರತಿಕ್ರಿಯೆ ನಿಂತಿರುತ್ತದೆ. ಇದರಿಂದಾಗಿ ಮೆಲ್ಲನೆ ಚಲಾಯಿಸುವ ಸವಾರರಿಗೆ , ಆ್ಯಂಬುಲೆನ್ಸ್‌ ಚಲಾಯಿಸುವವರಿಗೆ ಈ ರೀತಿಯ ಹಂಪ್‌ಗ್ಳು ಸಹಾಯ ವಾಗಲಿದೆ. ರಸ್ತೆಗಳಲ್ಲಿ ವೇಗವಾಗಿ ಬರುವ ವಾಹನಗಳ ವೇಗದ ಮಿತಿಯನ್ನು ನಿಯಂತ್ರಿಸುತ್ತದೆ

ಮಂಗಳೂರಿಗೆ ಬರಲಿ
ಮಂಗಳೂರಿನಲ್ಲಿ ದಿನೇ ದಿನೇ ವಾಹನ ಸವಾರರು ಹೆಚ್ಚಾಗುತ್ತಿದ್ದು, ಮಂಗಳೂರಿನ ಟ್ರಾಫಿಕ್‌ ನಿಯಮಗಳಲ್ಲಿ ತರಬಲ್ಲಂತ ಹೊಳಹು ಇದಾಗಿದ್ದು, ಸವಾರರ ಹಿತದೃಷ್ಟಿಯಿಂದ ಈ ರೀತಿಯ ಹಂಪ್‌ ಗಳು ನಮ್ಮ ನಗರದಲ್ಲಿ ಕಾಣುವಂತಾಗಲಿ.

Advertisement

-ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next