Advertisement

ಸ್ಮಾರ್ಟ್‌ ಫೋನ್‌ ಸೇಲ್!‌

04:24 AM May 18, 2020 | Lakshmi GovindaRaj |

ಕೋವಿಡ್‌ 19 ಕಾರಣದಿಂದ ಲಾಕ್‌ಡೌನ್‌ ಆದ ಕಾರಣ, ಎಲ್ಲ ರಂಗದಂತೆಯೇ ಮೊಬೈಲ್‌ ಫೋನ್‌ ಮಾರುಕಟ್ಟೆಯೂ ಸ್ಥಗಿತವಾಗಿತ್ತು. ಈ ಅವಧಿಯಲ್ಲಿ ಅನೇಕ ಮಂದಿಯ ಮೊಬೈಲ್‌ಗ‌ಳು ಕೈಕೊಟ್ಟು, ಹಾಳಾಗಿ, ರಿಪೇರಿ ಮಾಡಿಸಲು  ಅವಕಾಶವಿಲ್ಲದಂಥ, ಹೊಸ  ಫೋನ್‌ಗಳು ದೊರಕದಂಥ ಸ್ಥಿತಿಇತ್ತು. ಫೋನ್‌ ಕೆಟ್ಟು ಹೋದವರು, ಮೂಲೆಗೆ ಎಸೆದಿದ್ದ ಕೀಪ್ಯಾಡ್‌ ಮೊಬೈಲನ್ನೋ, ಹ್ಯಾಂಗ್‌ ಆಗುತ್ತದೆ ಎಂದು ಇಟ್ಟಿದ್ದ ಹಳೆಯ ಆಂಡ್ರಾಯ್ಡ್ ಫೋನನ್ನೋ  ಳಸತೊಡಗಿದರು. ಆದರೆ, ಎರಡು ವಾರದಿಂದ ಹಲವಾರು ಕಡೆಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಆಗಿ, ಅಂಗಡಿಗಳಲ್ಲಿ ಮೊಬೈಲ್‌ ಮಾರಾಟ ಶುರುವಾಗಿದೆ. ಅಮೆಜಾನ್‌, ಫ್ಲಿಪ್‌ಕಾಟ್‌ ìಗಳು ಕೆಂಪು ವಲಯಗಳನ್ನು ಹೊರತುಪಡಿಸಿ, ಉಳಿದ  ಪ್ರದೇಶಗಳಿಗೆ ಮೊಬೈಲ್‌ ಫೋನ್‌ಗಳ ಡೆಲಿವರಿ ನೀಡುತ್ತಿವೆ. ಹೊಸದಾಗಿ ಬಿಡುಗಡೆಯಾಗಿರುವ ನಾಲ್ಕು ವಿವಿಧ ಮಾಡೆಲ್‌ ಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Advertisement

ರಿಯಲ್‌ಮಿ ನಾರ್ಜೋ 10: ಈ ಮೊಬೈಲು ಹೊಚ್ಚ ಹೊಸದು. ಮೇ 18ರಿಂದ (ಇಂದಿನಿಂದ) ಫ್ಲಿಪ್‌ಕಾರ್ಟ್‌ನಲ್ಲಿ ದೊರಕುತ್ತಿದೆ. ಇದರ ದರ 12000 ರೂ. ಇದು 4 ಜಿಬಿ ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಹೊಂದಿದೆ. (4 ಜಿಬಿ  ರ್ಯಾಮ್‌ ಇದ್ದು 128 ಜಿಬಿ ಆಂತರಿಕ ಮೆಮೊರಿ ಇದ್ದರೆ ಒಳ್ಳೆಯದೇ. 6 ಜಿಬಿ ರ್ಯಾಮ್‌ ಇದ್ದು 64 ಜಿಬಿ ಆಂತರಿಕ ಸಂಗ್ರಹ ಇರುವುದಕ್ಕಿಂತ ಆಂತರಿಕ ಸಂಗ್ರಹ ಜಾಸ್ತಿ ಇರುವುದು ಉತ್ತಮ ಆಯ್ಕೆ.) ಇದರಲ್ಲಿ ಹೀಲಿಯೋ ಜಿ80  ಎಂಟು  ಕೋರ್‌ಗಳ ಪ್ರೊಸೆಸರ್‌ ಇದೆ. 48 ಮೆ.ಪಿ. ಮುಖ್ಯ ಕ್ಯಾಮೆರಾ ಇದೆ. ಇದಕ್ಕೆ 8 ಮೆ.ಪಿ+ 2ಮೆಪಿ+2ಮೆಪಿ ಉಪ ಕ್ಯಾಮೆರಾಗಳಿವೆ. ಅಂದರೆ ಹಿಂಬದಿ ಒಟ್ಟಾರೆ ನಾಲ್ಕು ಲೆನ್ಸ್‌ಗಳ ಕ್ಯಾಮೆರಾ ಇದೆ. ಸೆಲ್ಫೀಗೆ 16 ಮೆ.ಪಿ. ಕ್ಯಾಮೆರಾ (ವಾಟರ್‌ಡ್ರಾಪ್‌  ನಾಚ್‌) ಇದೆ. 6.5 ಇಂಚಿನ, 1600×720 ಪಿಕ್ಸಲ್ಸ್ ಎಚ್‌ಡಿ ಪ್ಲಸ್‌ ಎಲ್‌ಸಿಡಿ ಡಿಸ್‌ಪ್ಲೆ ಇದೆ. 5000 ಎಂಎಎಚ್‌ ಬ್ಯಾಟರಿ ಇದೆ. 18 ವ್ಯಾ. ವೇಗದ ಯುಎಸ್‌ಬಿ ಟೈಪ್‌ ಸಿ ಚಾರ್ಜರ್‌ ನೀಡಲಾಗಿದೆ. ಎರಡು ಸಿಮ್‌ + ಮೆಮೊರಿ ಕಾರ್ಡ್‌ ಹಾಕಿಕೊಳ್ಳುವ ಸವಲತ್ತಿದೆ. ಮೊಬೈಲ್‌ನ ಹಿಂಬದಿ ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಇದೆ.

ರೆಡ್‌ಮಿ ನೋಟ್‌ 9 ಪ್ರೊ: ಮಿಡ್ಲ್ ರೇಂಜಿನಲ್ಲಿ ಚೆನ್ನಾಗಿ ಮಾರಾಟ ಆಗುತ್ತಿರುವ ಮಾಡೆಲ್‌ ಇದು. ಅಮೆಜಾನ್‌ ನಲ್ಲಿ ಲಭ್ಯ. ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್‌ 720ಜಿ, ಎಂಟು ಕೋರ್‌ಗಳ ಪ್ರೊಸೆಸರ್‌ ಹೊಂದಿದೆ. 4 ಜಿಬಿ ರ್ಯಾಮ್+ 64 ಜಿಬಿ  ಆಂತರಿಕ ಸಂಗ್ರಹ (14000 ರೂ.), 6ಜಿಬಿ ರ್ಯಾಮ್‌ 128 ಜಿಬಿ ಆಂತರಿಕ ಸಂಗ್ರಹ (17,000 ರೂ.) 48 ಮೆ.ಪಿ. ಮುಖ್ಯ ಕ್ಯಾಮೆರಾ ಅದಕ್ಕೆ 8 ಮೆ.ಪಿ.+ 5 ಮೆ.ಪಿ. + 2 ಮೆ.ಪಿ. ಉಪ ಕ್ಯಾಮೆರಾಗಳಿವೆ. ಸೆಲ್ಫೀಗೆ 16 ಮೆ.ಪಿ. ಕ್ಯಾಮೆರಾ ಇದೆ. ಇದು  ಡಿಸ್‌ಪ್ಲೆ ಮಧ್ಯದಲ್ಲಿದೆ, ಹಾಗಾಗಿ ಇದನ್ನು ಪಂಚ್‌ ಹೋಲ್‌ ಕ್ಯಾಮೆರಾ ಎಂದು ಕರೆಯಲಾಗುತ್ತದೆ. 6.67 ಇಂಚಿನ 2400×1080 ಪಿಕ್ಸಲ್‌ ಎಲ್‌ಸಿಡಿ ಡಿಸ್‌ಪ್ಲೆ ಇದೆ. ಎರಡು ಸಿಮ್‌ ಹಾಕಿಕೊಂಡು ಸಹ ಮೆಮೊರಿ ಕಾರ್ಡ್‌ ಹಾಕಿಕೊಳ್ಳಬಹುದು. ಫಿಂಗರ್‌ ಪ್ರಿಂಟ್‌ ಸೆನ್ಸರ್‌ ಮೊಬೈಲ್‌ನ ಬಲಭಾಗದಲ್ಲಿ ಆನ್‌ ಆ್ಯಂಡ್‌ ಆಫ್ ಬಟನ್ನಲ್ಲೇ ಇದೆ. ಇದು ಬಳಕೆಗೆ ಅನುಕೂಲಕರ. 5020 ಎಂಎಎಚ್‌ ಬ್ಯಾಟರಿ, ಟೈಪ್‌ ಸಿ ಚಾರ್ಜರ್‌, ಅಂಡ್ರಾಯ್ಡ್ 10 ಆಪರೇಟಿಂಗ್‌ ವ್ಯವಸ್ಥೆ ಇದೆ.

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಂ21: ಎಂ ಸರಣಿಯ ಮೂಲಕ ಆನ್‌ಲೈನ್‌ ಮಾರಾಟದಲ್ಲಿ ಯಶಸ್ಸು ಪಡೆಯಿತು ಸ್ಯಾಮ್‌ ಸಂಗ್‌. ಇದು ಎಂ ಸರಣಿಯ ಮತ್ತೂಂದು ಹೊಸ ಫೋನ್‌. ಅಮೆಜಾನ್‌ನಲ್ಲಿ ಲಭ್ಯ. ಇದು ಸ್ಯಾಮ್‌ಸಂಗ್‌ನದ್ದೇ ಆದ  ಎಕ್ಸಿನಾಸ್‌ 9611 ಎಂಟು ಕೋರ್‌ಗಳ ಪ್ರೊಸೆಸರ್‌ ಹೊಂದಿದೆ. (ಇದೇ ಪ್ರೊಸೆಸರ್‌ ಸ್ಯಾಮ್‌ಸಂಗ್‌ ಎಂ31ನಲ್ಲಿ ಕೂಡ ಇದೆ.) ಅಂಡ್ರಾಯ್ಡ್ 10 ಆವೃತ್ತಿ, 4 ಜಿಬಿ ರ್ಯಾಮ್+ 64 ಜಿಬಿ ಆಂತರಿಕ ಸಂಗ್ರಹ (12,700 ರೂ.), 6 ಜಿಬಿ ರಾಮ್, 128 ಜಿಬಿ ಆಂತರಿಕ ಸಂಗ್ರಹ (15000 ರೂ.), 6.4 ಇಂಚಿನ 2340×1080 ಪಿಕ್ಸೆಲ್‌ಗ‌ಳ ವಾಟರ್‌ ಡ್ರಾಪ್‌ ಅಮೋಲೆಡ್‌ ಡಿಸ್‌ಪ್ಲೆ ಇದೆ. 48 ಮೆ.ಪಿ. ಮುಖ್ಯಕ್ಯಾಮೆರಾ. ಇದಕ್ಕೆ 8 ಮೆ.ಪಿ., 5 ಮೆ.ಪಿ, ಉಪಕ್ಯಾಮೆರಾಗಳಿವೆ. ಮುಂಬದಿ 20 ಮೆ.ಪಿ. ಕ್ಯಾಮೆರಾ  ಇದೆ. ಮೊಬೈಲ್‌ ಹಿಂಬದಿ ಫಿಂಗರ್‌ಪ್ರಿಂಟ್‌ ಸೆನ್ಸರ್‌ ಹೊಂದಿದೆ. 6000 ಎಎಂಎಚ್‌ ಬ್ಯಾಟರಿ, 15 ವ್ಯಾಟ್‌ ಟೈಪ್‌ ಸಿ ಕೇಬಲ್‌ ಫಾಸ್ಟ್ ಚಾರ್ಜರ್‌ ಇದೆ.

ಆನರ್‌ 9 ಎಕ್ಸ್: ಈ ಮಾಡೆಲ್‌ 4 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (14000 ರೂ.), 6 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ (18000 ರೂ.) ಎರಡು ಆವೃತ್ತಿ ಹೊಂದಿದೆ. ಇದರ ವಿಶೇಷತೆ ಎಂದರೆ 6.59 ಇಂಚಿನ ಫ‌ುಲ್‌ ವ್ಯೂ ಎಲ್‌ಸಿಡಿ ಡಿಸ್‌ಪ್ಲೆ. 2340×1080 ಪಿಕ್ಸಲ್ಸ್ ಹೊಂದಿದೆ. ಪರದೆಯಲ್ಲಿ ಮುಂಬದಿ ಕ್ಯಾಮೆರಾ ಇಲ್ಲ. ಮೊಬೈಲ್‌ನೊಳಗಿನಿಂದ ಹೊರಬರುವ ಪಾಪ್‌ ಅಪ್‌ (16 ಮೆ.ಪಿ.) ಸೆಲ್ಫೀ ಕ್ಯಾಮೆರಾ ಇದೆ. ಹಾಗಾಗಿ, ಇಡೀ ಪರದೆ  ವೀಕ್ಷಣೆಗೆ ದೊರಕುತ್ತದೆ. 48 ಮೆ.ಪಿ. ಹಿಂಬದಿ ಕ್ಯಾಮೆರಾ ಅದಕ್ಕೆ, 8 ಮೆ.ಪಿ.+ 2 ಮೆ.ಪಿ. ಹಿಂಬದಿ ಉಪಕ್ಯಾಮೆರಾಗಳಿವೆ. (ಟ್ರಿಪಲ್‌ ಲೆನ್ಸ್‌ ಕ್ಯಾಮೆರಾ) ಇದು ಹುವಾವೇಯ ಸ್ವಂತ ತಯಾರಿಕೆ ಕಿರಿನ್‌ 710 (8 ಕೋರ್‌) ಪ್ರೊಸೆಸರ್‌ ಹೊಂದಿದೆ.  ಹಿಂಬದಿ ಬೆರಳಚ್ಚು ಸ್ಕ್ಯಾನರ್‌ ಇದೆ. 4000 ಎಂಎಎಚ್‌ ಬ್ಯಾಟರಿ ಹೊಂದಿದೆ. ಟೈಪ್‌ ಸಿ ಕೇಬಲ್‌ ವೇಗದ ಚಾರ್ಜರ್‌ ಸೌಲಭ್ಯ ಇದೆ. ಅಮೆಜಾನ್‌ನಲ್ಲಿ ಲಭ್ಯ.

Advertisement

* ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next