Advertisement
ಏನಿದು ಸಮೀಕ್ಷೆ? “ಪೋಷಕರ ಹಾಗೂ ಮಕ್ಕಳ ಸಂಬಂಧದ ಮೇಲೆ ಸ್ಮಾರ್ಟ್ ಫೋನ್‌ಗಳ ಪರಿಣಾಮ’ ಎಂಬ ವಿಷಯದ ಮೇಲೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಹಾಗೂ ವಿವೊ ಮೊಬೈಲ್ ಕಂಪೆನಿ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ದೇಶದ 1,500 ಜನರಿಂದ ಅಭಿಪ್ರಾಯವನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ.
ಈಗೀಗ ಸ್ಮಾರ್ಟ್‌ಫೋನ್‌ಗಳು ಶಿಕ್ಷಣದ ಮಾಹಿತಿಗಳನ್ನು ಪೂರೈಸುವ ಅಗತ್ಯಗಳಲ್ಲಿ ಒಂದಾಗಿದೆ. ಪೋಷಕರು 12-14 ವಯಸ್ಸಿನಲ್ಲೇ ತಮ್ಮ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದ್ದು, ಮಕ್ಕಳು ದಿನಕ್ಕೆ ಅಂದಾಜು 6.5 ಗಂಟೆ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಾರೆ, ಅದರಲ್ಲೂ ಗೇಮಿಂಗ್ ಆ್ಯಪ್‌ಗ್ಳನ್ನು ಹೆಚ್ಚು ಬಳಸುತ್ತಾರೆ. ಇದರಲ್ಲಿ ಶೇ.90ರಷ್ಟು ಮಕ್ಕಳು ಸ್ಮಾಟ್‌ಫೋನ್‌ನಿಂದ ದೂರವಿದ್ದರೆ ಭಯವೆನಿಸುತ್ತದೆ ಹಾಗೂ ಶೇ.87ರಷ್ಟು ಮಕ್ಕಳು ಕೀಳರಿಮೆಯ ಭಾವ ನೀಡುತ್ತದೆ ಎಂದು ಹೇಳಿದ್ದಾರೆ. ಶೇ.87ರಷ್ಟು ಮಕ್ಕಳು ಸ್ಮಾರ್ಟ್ ಫೋನ್ ಬಳಕೆಯ ವೇಳೆ ಪೋಷಕರೊಂದಿಗೆ ಒರಟಾಗಿ ವರ್ತಿಸುವುದನ್ನು ಒಪ್ಪಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಿದ್ದರೂ ಶೇ.90ರಷ್ಟು ಮಂದಿ ಏಕಾಂಗಿತನದ ಭಾವ ಕಾಡುತ್ತಿರುವುದಾಗಿ ಹೇಳಿದ್ದಾರೆ.
ಶೇ.90ರಷ್ಟು ಜನರು ಅತಿಯಾದ ಮೊಬೈಲ್ ಬಳಕೆಯು ಅವರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಸಮೀಕ್ಷಾ ವರದಿಯ ಮುಖ್ಯಾಂಶಗಳು
ಸಮೀಕ್ಷೆಯ ಪ್ರಕಾರ ಪೋಷಕರು ದಿನಕ್ಕೆ ಸರಾಸರಿ 7.7ರಷ್ಟು ಗಂಟೆ ಸ್ಮಾರ್ಟ್‌ಫೋನ್‌ನಲ್ಲಿ ಕಾಲ ಕಳೆಯುತ್ತಾರೆ. ಅದರಲ್ಲೂ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುತ್ತಾರೆ.
ಶೇ.70ರಷ್ಟು ಪೋಷಕರು ಇದನ್ನು ಮಾಹಿತಿ ತಾಣ ಹಾಗೂ ಸಾಮಾಜಿಕ ಬಾಂಧವ್ಯದ ಸಂಕೇತವಾಗಿ ನೋಡಿದರೆ, ಶೇ.60ರಷ್ಟು ಮಕ್ಕಳು ಮಾಹಿತಿಗಾಗಿ ಹಾಗೂ ಪ್ರೀತಿಪಾತ್ರರ ಜತೆ ಸಂಪರ್ಕದಲ್ಲಿರಲು ಸಹಕಾರಿ ಎಂದು ಹೇಳಿದ್ದಾರೆ.
ಸ್ಮಾರ್ಟ್‌ಫೋನ್‌ಗಳಲ್ಲೇ ಅತೀ ಹೆಚ್ಚು ಸಮಯ ವ್ಯಯಿಸುವುದರಿಂದ ಮಕ್ಕಳೊಂದಿಗಿನ ಉತ್ತಮ ಸಂಬಂಧ ಹಾಳಾಗುತ್ತಿದೆ ಎಂದು ಶೇ.93ರಷ್ಟು ಮಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಮಾರ್ಟ್‌ಫೋನ್‌ನಲ್ಲಿ ವ್ಯಸ್ತವಾಗಿರುವಾಗ ಮಕ್ಕಳು ಬಂದು ಮಾತನಾಡಿದರೆ ಅಥವಾ ಪ್ರಶ್ನೆ ಕೇಳಿದರೆ ಕಿರಿಕಿರಿಯ ಭಾವನೆಯನ್ನು ಅನುಭವಿಸುತ್ತೇವೆ ಎಂದು ಶೇ.90ರಷ್ಟು ಪೋಷಕರು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳೊಂದಿಗೆ ಕಳೆಯುವ 2 ಗಂಟೆಯ ಅವಧಿಯಲ್ಲಿಯೂ ಶೇ.75ರಷ್ಟು ಪೋಷಕರು ಮೊಬೈಲ್ ಅನ್ನು ನೋಡುತ್ತಾರೆ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿದೆ.
Related Articles
Advertisement
10ರಲ್ಲಿ 7 ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯು ಋಣಾತ್ಮಕವಾಗಿ ಪರಿಣಾಮ ಬೀರಲಿದೆ. ಜತೆಗೆ ಇದು ಬಳಕೆದಾರರ ಪ್ರಕ್ರಿಯೆಗೂ ಧಕ್ಕೆ ತರಲಿದೆ ಎಂದು ಹೇಳಿದ್ದಾರೆ. ಹೂಡಿಕೆಯ ನೆಲೆಯಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರವು ಅಗ್ರಸ್ಥಾನದಲ್ಲಿ ನಿಲ್ಲಲಿದೆ. ಆದರೆ ಬಳಕೆದಾರರು ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಮಿತಿಯನ್ನು ಹಾಕಿಕೊಂಡಿದ್ದಾರೆ ಎಂಬುದು ಅಧ್ಯಯನಕಾರರ ಅಭಿಪ್ರಾಯ.
ಸಾಮಾಜಿಕ ಜಾಲತಾಣದ ಬಳಕೆಯ ಲಕ್ಷಣವು ಆಗಾಗ್ಗೆ ಬದಲಾಗುತ್ತಿರುತ್ತದೆ, ಕಳೆದ ಕೆಲವು ವರ್ಷಗಳನ್ನು ಗಮನಿಸಿದಾಗ ಬಳಕೆದಾರರು ತಮ್ಮ ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದು ಕಡಿಮೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನದ ಮೇಲೆ ನಂಬಿಕೆ ಇಲ್ಲದೇ ಇರುವುದು ಹಾಗೂ ಅದರ ಬಳಕೆಯಲ್ಲಿ ವಿಶ್ವಾಸವಿಲ್ಲದಿರುವುದೇ ಎಐ ಮುಕ್ತ ಬ್ರ್ಯಾಂಡ್‌ಗಳ ಬಳಕೆಯನ್ನು ಕಡಿಮೆಗೊಳಿಸಲಿದೆ ಎಂದು ವರದಿ ಹೇಳಿದೆ.
2028ರ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಮಾನವ ಆಧಾರಿತ ಹುಡುಕಾಟವು ಶೇ.50ರಷ್ಟು ಕಡಿಮೆಯಾಗಲಿದೆ. ಹೆಚ್ಚಿನ ಸರ್ಚ್ ಎಂಜಿನ್‌ಗಳು ಎಐ ತಂತ್ರಜ್ಞಾನವನ್ನು ಹೊಂದಲಿದೆ. ಬಳಕೆದಾರರು ಈ ಬದಲಾವಣೆಗೆ ಸಿದ್ಧರಾಗಿರಬೇಕು ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.