Advertisement

ಗಡಿಯಲ್ಲಿ ಇಂದಿನಿಂದ ಸ್ಮಾರ್ಟ್‌ ನಿಗಾವಣೆ!

01:00 AM Mar 05, 2019 | Harsha Rao |

ಹೊಸದಿಲ್ಲಿ: ಭಾರತ ಮತ್ತು ಬಾಂಗ್ಲಾದೇಶದ ಗಡಿಯ ಕೆಲವು ಭಾಗಗಳು ಇನ್ನು ಸ್ಮಾರ್ಟ್‌ ಆಗಲಿವೆ! ಗಡಿಯಲ್ಲಿ ಅಕ್ರಮ ವಲಸೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಮಾದಕ ದ್ರವ್ಯ ಹಾಗೂ ಜಾನುವಾರು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ಕೆಲವೆಡೆ ತಡೆಯುವುದು ಅತ್ಯಂತ ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಅಸ್ಸಾಂನ ಧುಬ್ರಿ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ 61 ಕಿ.ಮೀ ಸ್ಮಾರ್ಟ್‌ ಬೇಲಿಯನ್ನು ಅಳವಡಿಸಿದೆ. ಈ ಸ್ಮಾರ್ಟ್‌ ಬೇಲಿಯನ್ನು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಉದ್ಘಾಟಿಸಲಿದ್ದಾರೆ. ಈ ಭಾಗದಲ್ಲಿ ಬ್ರಹ್ಮಪುತ್ರಾ ನದಿ ಹರಿಯುತ್ತಿದ್ದು, ಗಡಿ ಕಾಯುವುದು ಬಿಎಸ್‌ಎಫ್ಗೆ ಅತ್ಯಂತ ಹರಸಾಹಸದ ಕೆಲಸ. ಹೀಗಾಗಿ ಬೋಲ್ಡ್‌ ಕ್ವಿಟ್‌ ಎಂಬ ಯೋಜನೆ ಅಡಿಯಲ್ಲಿ ಬಿಎಸ್‌ಎಫ್ನ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗವು ಈ ಸ್ಮಾರ್ಟ್‌ ಫೆನ್ಸಿಂಗ್‌ ಅಳವಡಿಸಿದೆ.

Advertisement

ಇಲ್ಲಿ ಅತ್ಯಾಧುನಿಕ ಕ್ಯಾಮೆರಾಗಳು, ಸೆನ್ಸರ್‌ಗಳನ್ನು ಅಳವಡಿಸಲಾಗಿದ್ದು, ಇದರ ಸಮಗ್ರ ವಿವರಗಳು ಗಡಿಯಲ್ಲಿ ಸ್ಥಾಪಿಸಲಾದ ಕೇಂದ್ರಗಳಿಗೆ ರವಾನೆಯಾಗುತ್ತವೆ. ಈ ಕೇಂದ್ರಗಳಲ್ಲಿ ಬಿಎಸ್‌ಎಫ್ ಸಿಬಂದಿ ನಿರಂತರವಾಗಿ ಮೇಲ್ವಿ ಚಾರಣೆ ನಡೆಸುತ್ತವೆ. ಪಾಕಿಸ್ಥಾನ-ಭಾರತ ಅಂತಾರಾಷ್ಟ್ರೀಯ ಗಡಿಯಲ್ಲೂ 5 ಕಿ.ಮೀ. ಸ್ಮಾರ್ಟ್‌ ಫೆನ್ಸಿಂಗ್‌ಅನ್ನು 2018ರಲ್ಲಿ ಅಳವಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next