Advertisement

ಜಪಾನ್‌ನಲ್ಲೀಗ ಸ್ಮಾರ್ಟ್‌ ಮಾಸ್ಕ್

01:34 PM Jun 27, 2020 | sudhir |

ಟೋಕಿಯೋ: ಮಾಸ್ಕ್ ಧರಿಸುವುದು ಈಗ ಕಡ್ಡಾಯ ಮತ್ತು ಆರೋಗ್ಯ ದೃಷ್ಟಿಯಿಂದ ಒಳಿತೂ ಹೌದು. ಆದರೆ ಜಪಾನಿಗರು ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿ ಸ್ಮಾರ್ಟ್‌ ಮಾಸ್ಕ್ ನ್ನು ತಯಾರಿಸಿದ್ದಾರೆ. ಸಿ ಮಾಸ್ಕ್ ಎಂಬ ಪ್ಲಾಸ್ಟಿಕ್‌ ಕವರ್‌ ಮಾಸ್ಕ್ ನೊಂದಿಗೆ ಜೋಡಣೆಯಾಗಿರುತ್ತದೆ. ಬ್ಲೂಟೂತ್‌ ಮೂಲಕ ಮೊಬೈಲ್‌ಗೆ ಕನೆಕ್ಟ್ ಆಗಿರುವ ಈ ಸ್ಮಾರ್ಟ್‌ ಮಾಸ್ಕ್ ನಿಂದ ಹಲವಾರು ಪ್ರಯೋಜನಗಳಿವೆ. ಮಾತುಗಳನ್ನು ಅಕ್ಷರ ರೂಪಕ್ಕೆ ಪರಿವರ್ತಿಸಲು ಈ ಉಪಕರಣದಿಂದ ಸಾಧ್ಯ. ಮಾಸ್ಕ್ ಧರಿಸಿದ ವ್ಯಕ್ತಿಯ ಮಾತನ್ನು ಡಿಕೋಡ್‌ ಮಾಡುವ ತಂತ್ರಜ್ಞಾನವೂ ಇದರಲ್ಲಿದೆ.

Advertisement

ಸೆಪ್ಟಂಬರ್‌ನಲ್ಲಿ ಈ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ತಯಾರಕರು ಹೇಳಿದ್ದಾರೆ. ಜನರ ಬೇಡಿಕೆಯನ್ನು ಅನುಸರಿಸಿ ಮತ್ತಷ್ಟು ಮಾಸ್ಕ್ ತಯಾರಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next