Advertisement

ಮಣಿಪಾಲದಲ್ಲಿ 36 ಗಂಟೆಗಳ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 

11:37 AM Apr 01, 2017 | Team Udayavani |

ಉಡುಪಿ: ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ವಹಿಸುವ 36 ಗಂಟೆಗಳ ದಿನಪೂರ್ತಿ ಕಾರ್ಯಕ್ರಮ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಮಣಿಪಾಲದಲ್ಲಿ ನಡೆಯಲಿದೆ.

Advertisement

ಇದು ಇಲ್ಲಿಯವರೆಗೆ ನಡೆದ ವಿಶ್ವದ ಅತಿ ದೊಡ್ಡ ಡಿಜಿಟಲ… ಉತ್ಪನ್ನ ತಯಾರಿಕೆ ಹ್ಯಾಕಥಾನ್‌ ಆಗಿದೆ. ಡಿಜಿಟಲ… ಇಂಡಿಯಾ ಕನಸನ್ನು ನನಸಾಗಿಸಲು ಯುವಕರನ್ನು ತೊಡಗಿಸಿಕೊಳ್ಳುವ ಗುರಿ ಹೊಂದಲಾಗಿದೆ.

ಇಸ್ರೋ, ರಕ್ಷಣಾ ಮಂತ್ರಾಲಯ ಮುಂತಾದ ಕೇಂದ್ರ ಸರಕಾರದ ವಿಭಾಗಗಳ 598 ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬರೋಬ್ಬರಿ 10,000 ಯುವಕರು ತೊಡಗಿಸಿಕೊಳ್ಳಲಿ¨ªಾರೆ. ಆರಂಭದಲ್ಲಿ ಈ ಎಲ್ಲ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ 2,100ಕ್ಕೂ ಅಧಿಕ ಕಾಲೇಜುಗಳ 7,531 ತಂಡಗಳು (ತಲಾ 6 ವಿದ್ಯಾರ್ಥಿಗಳು ಮತ್ತು 2 ಮಾರ್ಗದರ್ಶಕರು) ಕಲ್ಪನೆಗಳನ್ನು ಒದಗಿಸಿದರೂ 1,266 ತಂಡಗಳು ಮಾತ್ರ ಎ. 1 ಮತ್ತು 2ರಂದು ದೇಶದ 26 ನೋಡಲ್‌ ಕೇಂದ್ರಗಳಲ್ಲಿ ನಡೆಯುವ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. 

ಕರ್ನಾಟಕದಲ್ಲಿ ಆಯ್ಕೆಯಾದ 3 ಕೇಂದ್ರಗಳಲ್ಲಿ ಮಣಿಪಾಲದ ಎಂಐಟಿ ಒಂದಾಗಿದೆ. ಎ. 1ರ ಬೆಳಗ್ಗೆ 7.30 ಗಂಟೆಯಿಂದ ಎ. 2 ರಾತ್ರಿ 8.30ರ ವರೆಗೆ ನಿರಂತರವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ, ವಿ.ವಿ. ಧನಸಹಾಯ ಆಯೊಗ (ಯುಜಿಸಿ) ನೀಡುವ ಸಮಸ್ಯೆಗಳನ್ನು ಪರಿಹರಿಸಲು 350ಕ್ಕೂ ಅಧಿಕ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಲಿ¨ªಾರೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಣಿಪಾಲ ವಿ.ವಿ. ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಯುಜಿಸಿ ಅಧಿಕಾರಿ ಡಾ| ಎನ್‌. ಗೋಪುಕುಮಾರ್‌, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಭಾಗವಹಿಸಲಿ¨ªಾರೆ. 

ಎಂಐಟಿ ನಿರ್ದೇಶಕ ಡಾ| ಗೋಪಾಲಕೃಷ್ಣ ಪ್ರಭು ಉಪಸ್ಥಿತರಿರುವರು. ಉಪಕುಲಸಚಿವ (ತಾಂತ್ರಿಕ ಶಿಕ್ಷಣ) ಡಾ| ಪ್ರೀತಮ್‌ ಕುಮಾರ್‌ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಯುಜಿಸಿ ಅಧಿಕಾರಿಗಳು, ರೋಬೋ ಸಾಫ್ಟ್ ಟೆಕ್ನಾಲಜೀಸ್‌ನ ಅನುಭವಿ ವೃತ್ತಿಪರರು ತೀರ್ಪುಗಾರರಾಗಿ ಭಾಗವಹಿಸಲಿ¨ªಾರೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next