Advertisement
ಏನಿದು ಸ್ಮಾರ್ಟ್ ಲಾಕ್‌ಡೌನ್?ಅತೀ ಹೆಚ್ಚು ಕೋವಿಡ್ ಸೋಂಕಿತರಿರುವವ 5 ಪ್ರದೇಶಗಳನ್ನು ಗುರುತಿಸಿ ಅಲ್ಲಿ ಮಾತ್ರ ಲಾಕ್‌ಡೌನ್ ಜಾರಿಗೊಳಿಸಲಾಗುತ್ತದೆ. ಇದರೊಂದಿಗೆ ಲಾಕ್‌ಡೌನ್ ಪ್ರದೇಶದಲ್ಲಿರುವವರಿಗೆ ಇಲ್ಲಿನವರಿಗೆ ಯಾವುದೇ ಹೊರ ಪ್ರದೇಶಗಳ ಸಂಪರ್ಕಕ್ಕೆ ಅವಕಾಶವಿಲ್ಲ. ಪಾಕ್‌ನ ಆರೋಗ್ಯ ಅಧಿಕಾರಿಗಳ ನಿರ್ದೇಶನದಂತೆ ಸ್ಮಾರ್ಟ್ ತಂತ್ರವನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ. ಸದ್ಯದ ದೇಶದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಂಪೂರ್ಣ ಲಾಕ್‌ಡೌನ್ ಅಸಾಧ್ಯ. ಆದರೆ ಹೆಚ್ಚುತ್ತಿರುವ ವೈರಸ್ ತಡೆಗೆ ಏನಾದರೂ ಯೋಜನೆ ಸಿದ್ಧಗೊಳಿಸಲೇ ಬೇಕಿದೆ ಎಂಬುದು ಅಧಿಕಾರಿಗಳ ಹೇಳಿಕೆ. ಒಂದು ವಾರದಿಂದ ಸೋಂಕು ಅತಿ ಹೆಚ್ಚು ಹರಡುತ್ತಿರುವ ದೇಶಗಳಲ್ಲಿ ಪಾಕಿಸ್ಥಾನವೂ ಒಂದು ಎಂಬ ಮಾಹಿತಿಯನ್ನು ವಿಶ್ವಸಂಸ್ಥೆ ನೀಡಿದೆ. ಸೋಮವಾರ ದೇಶಾದ್ಯಂತ 3946 ಸೋಂಕಿತರು ಕಂಡು ಬಂದಿದ್ದು 15 ಮಂದಿ ಮೃತಪಟ್ಟಿದ್ದಾರೆ. ಇಲ್ಲಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸಾ ಸೌಲಭ್ಯಗಳಿಲ್ಲ. ಆದ್ದರಿಂದ ಸೋಂಕು ತಡೆಯುವುದು ಸವಾಲಾಗಿದೆ. ಪ್ರಸ್ತುತ ಆ ದೇಶದಲ್ಲಿ 185034 ಮಂದಿ ಸೋಂಕಿತರಿದ್ದಾರೆ. 3,695 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.