Advertisement
ಅವುಗಳ ಉಪಯೋಗವೇನು?ಸುಲಭ ನಿಯಂತ್ರಣ- ಸ್ಮಾರ್ಟ್‌ಫೋನಿನಲ್ಲಿ ಆಯಾ ಬಲ್ಬ್ ತಯಾರಕ ಸಂಸ್ಥೆಯ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ನಂತರ ತಾವು ಎಲ್ಲಿದ್ದರೂ ಮನೆಯ ಬಲ್ಬನ್ನು ನಿಯಂತ್ರಿಸಬಹುದು. ಓಡಾಡಲು ಕಷ್ಟ ಪಡುವ ವೃದ್ಧರು ಅಥವಾ ರೋಗಿಗಳು ಮನೆಯಲ್ಲಿದ್ದರೆ, ಅವರಿಗೆ ಕುಳಿತಲ್ಲಿಂದಲೇ ಲೈಟ್ ಉರಿಸಲು/ ಆರಿಸಲು ಇದು ತುಂಬಾ ಸಹಾಯಕ.
ಸ್ಮಾರ್ಟ್ ಬಲ್ಬ್ಗಳಲ್ಲಿ ಒಂದೇ ಬಣ್ಣದ್ದು ಮತ್ತು ಹಲವು ಬಣ್ಣಗಳ ಬೆಳಕನ್ನು ಹೊರಸೂಸಬಲ್ಲ ಸಾಮರ್ಥ್ಯ ಇರುವ ಬಲ್ಬ್ಗಳೂ ಇವೆ. ಮಲ್ಟಿ ಕಲರ್ ಬಲ್ಬ್ಗಳಿಗೆ ಬೆಲೆ ಕೊಂಚ ದುಬಾರಿ ಮಲ್ಟಿ ಕಲರ್ ಬಲ್ಬ್ಗಳಿಂದ ತಮಗೆ ಬೇಕೆಂದ ಬಣ್ಣವನ್ನು ಬಳಕೆದಾರ ಆರಿಸಿಕೊಳ್ಳಬಹುದು. ಆಟೋಮ್ಯಾಟಿಕ್ ಅಡ್ಜಸ್ಟ್‌ಮೆಂಟ್
ಇನ್ನು ಕೆಲ ಬಲ್ಬ್ಗಳು ಬೆಳಗ್ಗೆ ಮತ್ತು ರಾತ್ರಿಯ ವೇಳೆ ತನ್ನಷ್ಟಕ್ಕೇ ಪ್ರಕಾಶವನ್ನು ಹೊಂದಿಸಿಕೊಳ್ಳುತ್ತವೆ. ಬಳಕೆದಾರನ ಕಣ್ಣುಗಳಿಗೆ ತ್ರಾಸವಾಗದಿರಲಿ ಎಂಬ ಕಾರಣಕ್ಕೆ.
Related Articles
ಲೈಟ್ ಸ್ವಿಚ್ ಆನ್- ಆಫ್ ಮಾಡುವುದು ಮಾತ್ರವಲ್ಲ, ಬಲ್ಬ್ ಎಷ್ಟು ಪ್ರಮಾಣದ ಬೆಳಕನ್ನು(ತೀವ್ರತೆ) ಬೀರಬೇಕು ಎನ್ನುವುದನ್ನೂ ನಿಯಂತ್ರಿಸಬಹುದಾಗಿದೆ. ಬಳಕೆದಾರರಿಗೆ ಬೇಕೆಂದಾಗ ಮಂದ ಅಥವಾ ಪ್ರಕಾಶಮಾನ ಬೆಳಕನ್ನು ಪಡೆಯಬಹುದಾಗಿದೆ. ಅಲ್ಲದೆ 10 ಲಕ್ಷಕ್ಕೂ ಅಧಿಕ ಶೇಡ್‌ಗಳ ಆಯ್ಕೆಯನ್ನು ಬಳಕೆದಾರರು ಮಾಡಿಕೊಳ್ಳಬಹುದಾಗಿದೆ. ಈ ಬಲ್ಬನ್ನು ಟಾಕ್ ಅಸಿಸ್ಟೆಂಟ್‌ಗಳಾದ, ಅಮೆಝಾನ್‌ನ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಜೊತೆ ಸಂಪರ್ಕ ಕಲ್ಪಿಸಬಹುದಾಗಿದೆ. ಅದರಿಂದ ಬಳಕೆದಾರ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಬಲ್ಬ್ನ ಆ್ಯಪ್ ತೆರೆದು ಬಟನ್ ಒತ್ತಬೇಕಿಲ್ಲ. ಅಲೆಕ್ಸಾಗೆ ಧ್ವನಿ ಮುಖೇನ ಸೂಚನೆ ನೀಡಿದರಾಯಿತು. ಮಾರುಕಟ್ಟೆಯಲ್ಲಿ ಫಿಲಿಪ್ಸ್, ವಿಪ್ರೊ, ಸಿಸ್ಕಾ, ಶಿಯೋಮಿ ಮತ್ತಿತರ ಕಂಪನಿಗಳು ಸ್ಮಾರ್ಟ್ ಬಲ್ಬ್ ಗಳನ್ನು ನೋಡಬಹುದಾಗಿದೆ.
Advertisement