ನಗರ ಎಂದಿಗೂ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಲೇ ಇರುತ್ತದೆ. ನಗರಗಳನ್ನು ಅಭಿವೃದ್ಧಿ ವಿಷಯದಲ್ಲಿ ವಿಶೇಷವಾಗಿ, ವಿಭಿನ್ನವಾಗಿ ಸೃಷ್ಟಿಸುವ ಆಲೋಚನ ಪರಿ ಪ್ರತಿಯೊಬ್ಬ ನಾಗರಿಕನಲ್ಲೂ ಇರುತ್ತದೆ. ನಾವು ಅದ್ಯಾವುದೋ ನಗರಕ್ಕೆ ಹೋದಾಗ ಅಲ್ಲಿನ ವಿಶೇಷತೆಗಳು ನಮ್ಮ ನಗರಗಳಲ್ಲಿ ಅಳವಡಿಕೆಯಾಗಲಿ ಎನ್ನುವ ಬಯಕೆ ಮನದಲ್ಲಿ ಮೂಡುತ್ತದೆ ಮತ್ತು ನಮ್ಮ ನಗರವನ್ನು ಆ ದೃಷ್ಟಿಕೋನದಲ್ಲಿ ನೋಡುವಂತೆ ಮಾಡುತ್ತದೆ. ಇದು ಸಹಜ. ನಮ್ಮ ನಗರ ಹೀಗಿಲ್ಲವಲ್ಲಾ ಎಂದುಕೊಳ್ಳುತ್ತಾ ನಗರದ ಮೇಲಿನ ಪ್ರೀತಿ, ಕಾಳಜಿ, ಆಲೋಚನೆಗಳು ಆ ಸಮಯದಲ್ಲಿ ವ್ಯಕ್ತವಾಗುತ್ತವೆೆ. ಇದೇ ರೀತಿ ಅನಿಸಿಕೊಳ್ಳುವ ಇಲ್ಲೊಂದು ವಿಭಿನ್ನ ತಂತ್ರಜ್ಞಾನದ ವಿವರಣೆ ಇಲ್ಲಿದೆ.
ನಗರ ಅಂದರೆ ಗೊತ್ತಲ್ಲವೇ ಹಬ್ಬದಂತೆ ಜನಸಂದಣಿಯಿಂದ ತುಂಬಿ ತುಳುಕುತ್ತಿರುತ್ತದೆ. ಇಲ್ಲೊಂದು ನಗರ ಇದನ್ನೇ ಲಾಭ ಪಡೆದು ಹೊಸತನ್ನು ಅನ್ವೇಷಿಸಿದೆ.
ಹೌದು ನಗರಗಳು ಅಂದರೇ ನಿಲ್ಲದ ಜನಸಂಚಾರ. ಇದನ್ನು ಸಮಸ್ಯೆಯೆಂದು ಪರಿಗಣಿಸದೆ ಪಾದಚಾರಿ ರಸ್ತೆಯನ್ನು ಶಕ್ತಿಯಾಗಿ ಉಪಯೋಗಿಸಿದ್ದಾರೆ. ಇಂತಹದ್ದೊಂದು ಪ್ರಯೋಗಕ್ಕೆ ಒಳಪಟ್ಟು ಯಶಸ್ವಿಯಾಗಿದ್ದು ಲಂಡನ್‌ನ ನಗರ.
ಶೇ. 95 ಮರುಬಳಕೆಯ ಟಯರ್‌ಗಳಿಂದ ತಯಾರಿಸಿದ ಮತ್ತು ಕೆಲವೊಂದು ತಂತ್ರಜ್ಞಾನಗಳನ್ನು ಜೋಡಿಸಿದ ಲಂಡನ್ ಮೂಲದ ಕಂಪೆನಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ- ಇದು ಹೆಜ್ಜೆ ಹಾಕಿದಾಗ 5 ಮಿ.ಮೀ.ಗೆ ಬಾಗುತ್ತದೆ. ಇದರ ಪರಿಣಾಮವಾಗಿ ಹೆಜ್ಜೆ ಗುರುತು ಅವಧಿಯಲ್ಲಿ 8 ವ್ಯಾಟ್‌ಗಳಷ್ಟು ಚಲನಶಕ್ತಿ ಉತ್ಪಾದನೆಯಾಗುತ್ತದೆ. ಇದು 30 ಸೆಕೆಂಡ್‌ಗಳ ಕಾಲ ಎಲ್ಇಡಿ ದಾರಿ ದೀಪವನ್ನು ಬೆಳಗಿಸುತ್ತದೆ. ಪ್ರತಿಯೊಂದು ಟೈಲ್ ಅನನ್ಯ ವೈಯರ್ ಲೆಸ್ ಸಂವಹನ ತಂತ್ರಜ್ಞಾನವನ್ನೂ ಹೊಂದಿದೆ. ಇವುಗಳಿಂದ ಮತ್ತೂಂದು ಉಪಯೋಗ ಎಂದರೆ ನಗರಕ್ಕೆ ಬರುವವರ ಸಂಖ್ಯೆ ಮತ್ತು ಉತ್ಪತ್ತಿಯಾಗುವ ಶಕ್ತಿಯ ಬಗ್ಗೆ ಡೇಟಾವನ್ನು ಪಡೆಯಲು ಸಹಾಯ ಮಾಡುತ್ತದೆ. ಇದು ನಗರದ ಅಧಿಕಾರಿಗಳು ಮತ್ತು ವ್ಯಾಪಾರ ಪ್ರಕಾರಗಳು ಎಷ್ಟು ಜನರು ಒಂದು ಪ್ರದೇಶದ ಮೂಲಕ ಹಾದುಹೋಗುತ್ತಿದ್ದಾರೆ ಎಂಬುದನ್ನು ನೋಡಬಹುದು. ಅನಂತರ ಹೆಚ್ಚುವರಿ ಶಕ್ತಿಯನ್ನು ಬಳಸುವ ವಿಧಾನದ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ಪಾದಚಾರಿ ರಸ್ತೆಯಿಂದ ಉತ್ಪತ್ತಿಯಾಗುವ ಶಕ್ತಿಗಳು ಹಗಲು ಹೊತ್ತಿನಲ್ಲಿ ಹಕ್ಕಿಗಳ ಶಬ್ದಗಳನ್ನು ಮೂಡಿಸಿದರೆ ರಾತ್ರಿ ಬೆಳಕನ್ನು ಸೂಕ್ತವಾಗಿ ಒದಗಿಸುತ್ತದೆ. ಈ ತಂತ್ರಜ್ಞಾನವನ್ನು ಪಾರ್ಕ್, ಮಾಲ್, ಮಾರ್ಕೆಟ್ ವಲಯಗಳಲ್ಲಿ ನಿರ್ಮಿಸಬಹುದು.
ಮಂಗಳೂರಿನಲ್ಲಿ ಸೃಷ್ಟಿಯಾಗಲಿ
ಸ್ಮಾರ್ಟ್ ನಗರಯಾಗಿ ವೇಗವಾಗಿ ಮತ್ತು ಯೋಜಿತವಾಗಿ ಮುಂದುವರಿಯುತ್ತಿರುವ ಮಂಗಳೂರು ನಗರದಲ್ಲೂ ಇಂತಹ ಯೋಜನೆಗಳನ್ನು ತಂತ್ರಜ್ಞಾನವನ್ನು ಪರಿಚಯಿಸಿ ಲಾಭ ಪಡೆಯಬಹುದು. ಇವುಗಳ ನಿರ್ಮಾಣ ಕೇವಲ ನಗರದ ಆಡಳಿತ ಮಂಡಳಿಗಳ ಬಳಿ ಮಾಡದೇ ಮಾಲ್ಗಳು, ಮಾರುಕಟ್ಟೆಗಳಲ್ಲಿ ಇವುಗಳನ್ನು ಉಪಯೋಗಿಸಬಹುದು.
– ವಿಶ್ವಾಸ್ ಅಡ್ಯಾರ್