Advertisement

ಬಿಡದಿ ಬಳಿ ಸ್ಮಾರ್ಟ್‌ ಸಿಟಿ 

12:12 PM Feb 07, 2018 | |

ಬೆಂಗಳೂರು: ಬೆಂಗಳೂರು ಮಹಾನಗರದ ಮೇಲಿನ ಒತ್ತಡ ಕಡಿಮೆ ಮಾಡಲು ಬಿಡದಿ ಬಳಿ 10 ಸಾವಿರ ಎಕರೆ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿ ನಿರ್ಮಾಣ ಮಾಡಲಾಗುತ್ತದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್‌ ತಿಳಿಸಿದ್ದಾರೆ.

Advertisement

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಹ್ಯಾರೀಸ್‌ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ನಗರದಲ್ಲಿ ಸಂಚಾರ ದಟ್ಟಣೆ, ಜನಸಾಂಧ್ರತೆ ಕಡಿಮೆ ಮಾಡಲು ಸ್ಮಾರ್ಟ್‌ ಸಿಟಿ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ ಅದಕ್ಕಾಗಿ ಯೋಜನಾ ವರದಿಯನ್ನು  ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು ಇದಕ್ಕೆ ಕಡಿವಾಣ ಹಾಕಲು ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕಾಗಿದೆ. ಸಿಗ್ನಲ್‌ ಫ್ರೀ ಕಾರಿಡಾರ್‌ ರೂಪಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ ಅದಕ್ಕಾಗಿ ಜನದಟ್ಟಣೆ ಕಡಿಮೆ ಮಾಡಲು  ಉಪನಗರ ವರ್ತುಲ ರಸ್ತೆ ಅಭಿವೃಧಿœಗೊಳಿಸಲು ಕ್ರಮತೆಗೆದುಕೊಳ್ಳಲಾಗುತ್ತದೆ ಎಎಂದು ಹೇಳಿದರು.

ರಾಮನಗರ-ಚನ್ನಪಟ್ಟಣ,ಬಿಡದಿ-ಹಾರೋಹಳ್ಳಿ,ನೆಲಮಂಗಲ-ಪೀಣ್ಯ,ಡಾಬಸ್‌ಪೇಟೆ-ನೆಲಮಂಗಲ,ದೊಡ್ಡಬಳ್ಳಾಪುರ,ದೇವನಹಳ್ಳಿ-ಯಲಹಂಕ,ಹೊಸಕೋಟೆ-ಕೆ.ಆರ್‌ ಪುರಂ ಜಿಗಣಿ-ಎಲೆಕ್ಟ್ರಾನಿಕ್‌ ಸಿಟಿ-ಬೊಮ್ಮಸಂದ್ರ-ಅತ್ತಿಬೆಲೆಯಲ್ಲಿ  8 ಕ್ಲಸ್ಟರ್‌ಗಳನ್ನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಮಳೆ ಹಾನಿ ಕುರಿತು ಶಾಸಕ ಆರ್‌ ಅಶೋಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಗರದಲ್ಲಿ ಭಾರಿ ಮಳೆಯಿಂದ ಉಂಟಾಗುವ ಹಾನಿ ತಡೆಗಟ್ಟಲು ಸರ್ಕಾರ ಶಾಶ್ವತ ಪರಿಹಾರ ಕಾಮಗಾರಿಗಳನ್ನು 1100 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿದೆ. ಬರುವ ಮಳೆಗಾಲದ ವೇಳೆಗೆ ಧಾರಾಕಾರ ಮಳೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು, ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.

Advertisement

ಮಳೆನೀರು ಸರಾಗವಾಗಿ ಹರಿದು ಹೋಗಲು 300 ಕಡೆ ಅಡಚಣೆ ಉಂಟಾಗಲಿದೆ. ಶಾಂತಿನಗರ ,ಕುರುಬರಹಳ್ಳಿ,ಕೋರಮಂಗಲ,ಹೆಚ್‌ ಎಸ್‌ ಅರ್‌ ಲೇಔಟ್‌,ಕೆ ಆರ್‌ ಪುರ  ಸೇರಿದಂತೆ ಒಟ್ಟು 8 ಭಾಗದಲ್ಲಿ ಹೆಚ್ಚು ಮಳೆ ಬಿದ್ದರೆ ನೀರುಗಾಲುವೆಗಳಲ್ಲಿ ಮಳೆನೀರು ಸರಾಗವಾಗಿ ಹರಿದುಹೋಗದೇ ತೊಂದರೆಯಾಗುತ್ತಿರುವುದನ್ನು ಪತ್ತೆಹಚ್ಚಿ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.

ಹೆಬ್ಟಾಳದಿಂದ ಸಿಲ್ಕ್ ಬೋರ್ಡ್‌ ವರೆಗಿನ ರಸ್ತೆಗೆ ಹೊರ ವರ್ತುಲ ರಸ್ತೆ ನಿರ್ಮಾಣ ಪ್ರಸ್ತಾವನೆ ಕುರಿತು ಶಾಸಕ ಸುಬ್ಟಾರೆಡ್ಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಈ ಯೋಜನೆಗೆ 1810 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬೇಕಗಿದೆ.ಭೂಸ್ವಾಧೀನ ಪರಿಹಾರ ನೀಡಲು 8100 ಕೋಟಿ ರೂಪಾಯಿ ಅಗತ್ಯತೆಯಿದೆ.

ಕೇಂದ್ರ ಸರ್ಕಾರ ಆರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲು ಆಸಕ್ತಿ ತೋರಿತ್ತು. ಈಗ ಮತ್ತೆ ಕೇಂದ್ರದ ಭೂ ಸಾರಿಗೆ ಸಚಿವ ಗಡ್ಕರಿ ಜೊತೆ ಚರ್ಚಿಸಿ ಹೆದ್ದಾರಿ ಪ್ರಾಧಿಕಾರದಿಂದಲೇ ಯೋಜನೆ ಕೈಗೆತ್ತಿಕಳ್ಳಲು ಒತ್ತಾಯಿಸಲಾಗುವುದೆಂದು ಸಚಿವ ಜಾರ್ಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next