Advertisement

ಮೆಟ್ರೋ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್‌ ಶಾಕ್‌!

12:56 AM Jan 09, 2020 | Lakshmi GovindaRaj |

ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲೇ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ವು “ಸ್ಮಾರ್ಟ್‌’ ಶಾಕ್‌ ನೀಡಿದೆ. ಸ್ಮಾರ್ಟ್‌ ಮೊಬಿಲಿಟಿ ಕಾರ್ಡ್‌ ಬಳಕೆದಾರರಿಗೆ ಈಗಿರುವ ರಿಯಾಯ್ತಿ ದರದ ಪ್ರಮಾಣವನ್ನು ಶೇ.15ರಿಂದ ಏಕಾಏಕಿ ಶೇ. 5ಕ್ಕೆ ಇಳಿಕೆ ಮಾಡಲು ನಿರ್ಧರಿಸಿರುವ ನಿಗಮವು ಈ ಸಂಬಂಧ ಅಧಿಕೃತ ಆದೇಶ ಹೊರಡಿಸಿದೆ.

Advertisement

ಈ ಪರಿಷ್ಕೃತ ರಿಯಾಯ್ತಿ ದರವು ಜ. 20ರಿಂದ ಅನ್ವಯವಾಗುವ ಸಾಧ್ಯತೆ ಇದೆ. ನಿತ್ಯ ಸುಮಾರು 4.20 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾ ಣಿಸುತ್ತಾರೆ. ಈ ಪೈಕಿ ಶೇ. 62ರಷ್ಟು ಪ್ರಯಾಣಿಕರು ಸ್ಮಾರ್ಟ್‌ ಕಾರ್ಡ್‌ ಹೊಂದಿ ದ್ದಾರೆ. ಅವರೆಲ್ಲರಿಗೂ ಇದರ ಬಿಸಿ ತಟ್ಟಲಿದೆ.

ರಿಯಾಯ್ತಿಗೆ ಶೇ. 10ರಷ್ಟು ಕತ್ತರಿ ಹಾಕಿದರೆ, ಕಾರ್ಯಾಚರಣೆಯಿಂದ ಪ್ರತಿ ದಿನ 7ರಿಂದ 8 ಲಕ್ಷ ರೂ. ಹೆಚ್ಚುವರಿ ಆದಾಯವನ್ನು ನಿಗಮ ನಿರೀಕ್ಷಿಸಿದ್ದು, ಮಾಸಿಕ ಇದು 2 ಕೋಟಿ ರೂ. ಆಗಲಿದೆ. ಪ್ರಯಾಣಿಕರನ್ನು ಸ್ಮಾರ್ಟ್‌ ಕಾರ್ಡ್‌ನತ್ತ ಸೆಳೆಯಲು ವಾಣಿಜ್ಯ ಸೇವೆ ಆರಂಭಗೊಂಡ ದಿನದಿಂದ ಅಂದರೆ 2011ರ ಸೆಪ್ಟೆಂಬರ್‌ನಿಂದಲೇ ಕಾರ್ಡ್‌ ಹೊಂದಿದ ವರಿಗೆ ಶೇ. 15ರಷ್ಟು ರಿಯಾಯ್ತಿ ಕಲ್ಪಿಸಿತ್ತು.

ಈಗ ಬಹುತೇಕರು ಈ ಕಾರ್ಡ್‌ ಬಳಕೆ ಮಾಡುವುದರ ಜತೆಗೆ ಮೆಟ್ರೋ ಸೇವೆಗೆ ಹೊಂದಿ ಕೊಂಡಿದ್ದರಿಂದ ಕತ್ತರಿ ಹಾಕಲು ಉದ್ದೇಶಿಸ ಲಾಗಿದೆ. ವಿರೋಧದ ನಡು ವೆಯೇ ನಿಗಮವು ಕೆಲ ತಿಂಗಳ ಹಿಂದೆ ಸ್ಮಾರ್ಟ್‌ ಕಾರ್ಡ್‌ನಲ್ಲಿ ಕನಿಷ್ಠ 50 ರೂ. ಠೇವಣಿ ಇಡುವುದನ್ನು ಕಡ್ಡಾಯ ಗೊಳಿಸಿತ್ತು. ಇದರಿಂದ ಕೋಟ್ಯಂತರ ರೂ. ಹರಿದುಬಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next