Advertisement

ಕಿರು ಸಾಲ ಸೌಲಭ್ಯ ಮೇಳಕ್ಕೆ ಶಾಸಕ ಚಾಲನೆ

04:29 PM Nov 29, 2020 | Suhan S |

ಮೈಸೂರು: ನಗರದ ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲವಾಗಲೆಂದು ಪ್ರಧಾನಮಂತ್ರಿ ಆತ್ಮನಿರ್ಭರ ನಿಧಿ ಯೋಜನೆಯಡಿ ಕಿರು ಸಾಲಸೌಲಭ್ಯ ಮೇಳಕ್ಕೆ ಶನಿವಾರ ಶಾಸಕ ಎಲ್‌ .ನಾಗೇಂದ್ರ ಚಾಲನೆ ನೀಡಿದರು.

Advertisement

ನಗರದ ಶೇಷಾದ್ರಿ ಅಯ್ಯರ್‌ ರಸ್ತೆಯಲ್ಲಿರುವ ಪಾಲಿಕೆ ವಲಯ ಕಚೇರಿ 6 ರಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಆತ್ಮನಿರ್ಭರನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಕಿರು ಸಾಲಸೌಲಭ್ಯ ಮೇಳದಲ್ಲಿ ಸಾಂಕೇತಿಕವಾಗಿ 10 ಮಂದಿಗೆ ಸಾಲಸೌಲಭ್ಯ ಪತ್ರ ನೀಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ನಷ್ಟದಲ್ಲಿರುವ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶ‌ದಿಂದ ಪ್ರಧಾನಿ ನರೇಂದ್ರ ಮೋದಿಯವರು ಈ ಕಿರುಸಾಲ ಯೋಜನೆ ಜಾರಿಗೊಳಿಸಿದ್ದಾರೆ. ಇದರಲ್ಲಿ 10 ಸಾವಿರ ರೂ. ವರೆಗೆ ಭದ್ರತೆ ರಹಿತ ಸಾಲಸೌಲಭ್ಯ ಸಿಗಲಿದೆ. ಈ ಯೋಜನೆ ಜುಲೈ 1ರಿಂದ ಆರಂಭವಾಗಿದ್ದು 2022ರ ಮಾರ್ಚ್‌ 31 ರವರೆಗೂ ಅನುಷ್ಠಾನದಲ್ಲಿರಲಿದೆ.ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳು ಈ ಸಾಲ ಸೌಲಭ್ಯ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.

ನಗರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿ ತೊಡಗಿಸಿಕೊಂಡು ಗುರುತಿಸಲ್ಪಟ್ಟಿರುವ ವ್ಯಾಪಾರಿಗಳು ತಮ್ಮ ಗುರುತಿನ ಚೀಟಿ ಮತ್ತು ವ್ಯಾಪಾರ ಪ್ರಮಾಣ ಪತ್ರ ಹೊಂದಿರುವ ಎಲ್ಲಾ ಬೀದಿ ಬದಿ ವ್ಯಾಪಾರಿಗಳುಯೋಜನೆಯಫ‌ಲಾನುಭವಿಗಳು ಆಗಿರುತ್ತಾರೆ. ಒಂದು ವೇಳೆ ವ್ಯಾಪಾರ ಪ್ರಮಾಣಪತ್ರವಿಲ್ಲದಿದ್ದರೂ ನಗರ ಪಾಲಿಕೆಯಲ್ಲಿ ನಿಮ್ಮ ವ್ಯಾಪಾರದ ಬಗ್ಗೆ ಮಾಹಿತಿ ನೀಡಿ, ಸಹಾಯಕಆಯುಕ್ತರಿಂದ ಅನುಮತಿ ಪತ್ರ ತಂದು ಅರ್ಜಿ ಸಲ್ಲಿಸಬಹುದು ಎಂದರು. ಈ ವೇಳೆ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್‌, ಉಮೇಶ್‌, ಸಹಾಯಕ ಆಯುಕ್ತ ಶಶಿಕುಮಾರ್‌, ಆರೋಗ್ಯಾಧಿಕಾರಿ ಡಾ.ಜಯಂತ್‌ ಇದ್ದರು.

10,092 ಅರ್ಜಿ, 1,571 ಮಂದಿಗೆ ಸಾಲ :  ನಗರದಲ್ಲಿ ಈ ಕಿರುಸಾಲ ಯೋಜನೆಗೆ 10,092 ಮಂದಿ ಬೀದಿಬದಿ ವ್ಯಾಪಾರಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದು, 1,571 ಮಂದಿಗೆ ತಲಾ 10 ಸಾವಿರ ರೂಗಳ ಸಾಲ ನೇರವಾಗಿಅವರ ಖಾತೆಗೆ ಬಂದಿರುತ್ತದೆ. ಇದರಲ್ಲಿ ಅಧಿಕೃತ ವ್ಯಾಪಾರ ಪ್ರಮಾಣ ಪತ್ರ ಹೊಂದಿರುವವರ ಸಂಖ್ಯೆ ಕೇವಲ 1,856 ಮಂದಿ ಮಾತ್ರ, ಉಳಿದ 8,236 ಅರ್ಜಿದಾರರಿಗೆ ವ್ಯಾಪಾರ ಪ್ರಮಾಣ ಪತ್ರವಿಲ್ಲ, ಇವರು ಪಾಲಿಕೆ ವತಿಯಿಂದ ಅನುಮತಿ ಪತ್ರ ಪಡೆದು ಅರ್ಜಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next