Advertisement

ರದ್ದು ನೋಟಿನಿಂದ ಸಣ್ಣ ಉದ್ಯಮಕ್ಕೆ ಸಾಲ

02:49 PM Mar 10, 2017 | Team Udayavani |

ಕಲಬುರಗಿ: ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರದ್ದು ಮಾಡಲಾಗಿರುವ ನೋಟುಗಳು ಬ್ಯಾಂಕುಗಳಿಗೆ ಬಂದು ಜಮೆಯಾಗಿದೆ. ಜಮೆ ಆಗಿರುವ ಆ ನೋಟುಗಳಿಂದ ಗೃಹ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವ ಮೂಲಕ ಬ್ಯಾಂಕುಗಳ ಆದಾಯವನ್ನುಹೆಚ್ಚಳ ಮಾಡಿಕೊಳ್ಳಬಹುದಾಗಿದೆ ಎಂದು ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಿ.ಭಾರತಿ ಅಭಿಪ್ರಾಯ ವ್ಯಕ್ತಪಡಿಸಿದರು. 

Advertisement

ರಾಜಾಪುರದಲ್ಲಿರುವ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ನೂತನವಾಗಿ ಆಗಮಿಸಿದ್ದ ಸಿಬ್ಬಂದಿಗಳಿಗೆ ತರಬೇತಿ ನೀಡಲು ಆರಂಭಿಸಲಾಗಿರುವ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಅಮಾನ್ಯಿàಕರಣದಿಂದಾಗಿ ಬ್ಯಾಂಕುಗಳಿಗೆ ಬಂದಿರುವ ಅಪಾರ ಹಣವನ್ನು ಬ್ಯಾಂಕುಗಳ ಸರ್ವಾಂಗೀಣ ಬೆಳವಣಿಗೆಗೆ ಬಳಕೆ ಮಾಡಲು ಯೋಜಿಸಲಾಗಿದೆ.

ಪಿಕೆಜಿಬಿ ಎನ್‌ಪಿಎ ಶೇಕಡಾ 4.5ರಷ್ಟು ಇದ್ದು, ಇದನ್ನು ಶೇಕಡಾ 2.5ಕ್ಕೆ ಇಳಿಸುವ ನಿಟ್ಟಿನಲ್ಲಿ ಬ್ಯಾಂಕ್‌ ಪ್ರಯತ್ನಪಡಬೇಕು ಎಂದು ಸಲಹೆ ಮಾಡಿದರು.ಬ್ಯಾಂಕಿಂಗ್‌ ವಲಯದಲ್ಲಿ ಉತ್ತಮ ಸಾಧನೆ ಮಾಡುವುದರ ಮೂಲಕ ಹಾಗೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ ಕೆನರಾ ಬ್ಯಾಂಕಿನ ಗೌರವ ಹೆಚ್ಚಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆನರಾ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕರವೀಂದ್ರ ಬಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜ್ಯೋತಿ ಪ್ರಾರ್ಥನಾ ಗೀತೆ ಹಾಡಿದರು. ರವಿ ಸುಧಾಕರ್‌ ಸ್ವಾಗತಿಸಿದರು. ಪಿಕೆಜಿಬಿ ಅಧ್ಯಕ್ಷ ಆರ್‌. ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಯಾಂಕಿನ ಹಿರಿಯ ಸಿಬ್ಬಂದಿಹಾಗೂ ಹೊಸದಾಗಿ ನೇಮಕಗೊಂಡಿರುವ ಸಿಬ್ಬಂದಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next