Advertisement

ಬಿಜೆಪಿಗೆ ಆಪ್ತರ ಕರೆತರಲು ಎಸ್‌.ಎಂ. ಕೃಷ್ಣ ಸಜ್ಜು

10:57 AM Mar 26, 2017 | Harsha Rao |

ಬೆಂಗಳೂರು: ದೆಹಲಿಯಲ್ಲಿ ಅಮಿತ್‌ ಶಾ ಸಮ್ಮುಖ ಬಿಜೆಪಿ ಸೇರಿರುವ ಮಾಜಿ ಸಿಎಂ ಎಸ್‌.ಎಂ.ಕೃಷ್ಣ, ಬೆಂಗಳೂರಿಗೆ ಹಿಂದಿರುಗಿದ್ದು, ಈಗ ಸಕ್ರಿಯ ರಾಜಕೀಯ ಚಟುವಟಿಕೆ ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿರುವ ತಮ್ಮ ಆಪ್ತರೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದ್ದು, ಹಲವರನ್ನು ಬಿಜೆಪಿಗೆ ಕರೆತರುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಶನಿವಾರ ಬೆಳಗ್ಗಿನಿಂದಲೇ ಎಸ್‌. ಎಂ.ಕೃಷ್ಣರನ್ನು ಕಾಂಗ್ರೆಸ್‌ನ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ದೂರವಾಣಿ ಮೂಲಕ
ಹಾಗೂ ಖುದ್ದಾಗಿ ಅವರ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ಅನೇಕರು ಬಿಜೆಪಿ ಸೇರುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಜಿ ಸಚಿವವಾರದ ಕುಮಾರ
ಬಂಗಾರಪ್ಪ ಹಾಗೂ ಬಿ.ಎನ್‌.ಬಚ್ಚೇಗೌಡ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

Advertisement

ಜತೆಗೆ ಕೆಲಸ ಮಾಡುವ ಅವಕಾಶ: ಎಸ್‌.ಎಂ.ಕೃಷ್ಣ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್‌ ಬಂಗಾರಪ್ಪ, “ನನ್ನ ತಂದೆ ಸಮಾನರಾದ ಕೃಷ್ಣ ಅವರು ಬಿಜೆಪಿಗೆ ಬಂದಿದ್ದು ಸಂತೋಷ ತಂದಿದೆ’ ಎಂದರು. “ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಸಂಪುಟದಲ್ಲಿ ಸಣ್ಣ ನೀರಾವರಿ ಸಚಿವನಾಗಿದ್ದೆ. ಮತ್ತೂಮ್ಮೆ ಅವರ
ಭಾವಚಿತ್ರದೊಂದಿಗೆ ಚುನಾವಣೆಗೆ ಹೊರಟಿದ್ದೇವೆ. ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷ್ಣ ಬೆಂಬಲಿಗ ಸತ್ಯಾನಂದ ರಾಜೀನಾಮೆ: ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಬೆನ್ನಲ್ಲೇ ಅವರ
ಬೆಂಬಲಿಗ ಟಿ.ಎಸ್‌. ಸತ್ಯಾನಂದ ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ
ಡಾ. ಜಿ. ಪರಮೇಶ್ವರ್‌ ಅವರಿಗೆ ತಮ್ಮ ರಾಜೀನಾಮೆ ಪತ್ರ ಕಳುಹಿಸಿರುವ ಅವರು, ಎಸ್‌.ಎಂ. ಕೃಷ್ಣ ಕಾಂಗ್ರೆಸ್‌
ತೊರೆದು ಬಿಜೆಪಿ ಸೇರ್ಪಡೆಯಾಗಿವುದರಿಂದ ಅವರ ಅನುಯಾಯಿಯಾದ ನಾನು ಅವರ ಮಾರ್ಗದಲ್ಲೇ ನಡೆಯಲು ತೀರ್ಮಾನಿಸಿದ್ದೇನೆಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next