Advertisement
ಬಿಜಾಪುರ ನಗರ ಸ್ಲಂ ಅಭಿವೃದ್ಧಿ ಸಮಿತಿ ಹಮ್ಮಿಕೊಂಡಿದ್ದ 11ನೇ ಜನಾಂದೋಲನ ವರ್ಷಾಚರಣೆ ಕಾರ್ಯಕ್ರಮದಲ್ಲಿ ಸ್ಲಂ ನಗರ ವಂಚಿತ ಸಮುದಾಯಗಳ ಮುಂದಿನ ಹೆಜ್ಜೆಗಳ ಕುರಿತು ನಡೆದ ರಾಜ್ಯಮಟ್ಟದ ಪ್ರತಿನಿಧಿಗಳ ಸಭೆಯ ದಿಕ್ಸೂಚಿ ಮಾತುಗಳನಾಡಿದ ಅವರು, ಸ್ಲಂಗಳು ಭಾರತದ ಜಾತಿ ವ್ಯವಸ್ಥೆಯ ಪ್ರತೀಕವಾಗಿದ್ದು, ಹಳ್ಳಿಗಳಲ್ಲಿ ದುಡಿಮೆ ಇದ್ದರೂ ಜಾತೀಯತೆ ಕಾರಣಕ್ಕೆ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಬರಲು ಮುಖ್ಯ ಕಾರಣವಾಗಿದೆಎಂದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಕಾನೂನು ಶಾಲಾ ಪ್ರಾಧ್ಯಾಪಕ ಬಾಬಾ ಮ್ಯಾಥ್ಯೂ ಮಾತನಾಡಿ, ನಗರೀಕರಣದ ಈ ಸಂದರ್ಭದಲ್ಲಿ ನಗರದಲ್ಲಿ ಬದುಕುವಹಕ್ಕನ್ನು ಗುರಿಯಾಗಿಸಿಕೊಂಡ ಸ್ಲಂ ಜನರ ಸಂಘಟನೆ ಬಲಿಷ್ಠಗೊಳಿಸಬೇಕಿದೆ. ಇದಕ್ಕಾಗಿ ಪ್ರಜಾಪ್ರಭುತ್ವವಾದಿ ಸಂಘಗಳನ್ನು ಸ್ಲಂಗಳಲ್ಲಿ ರಚಿಸಿ ಭೂ ಮಾಲೀಕತ್ವ ಮತ್ತು ವಸತಿ ಹಕ್ಕಿಗಾಗಿ ಸ್ಲಂ ಜನಾಂದೋಲನ ಕರ್ನಾಟಕ ಮುಂದಾಗಬೇಕು. ಈ ಪ್ರಶ್ನೆಗಳು ನಮ್ಮ ಸಂಘಟನೆಯ ನೀತಿಯಾದಾಗ ಮಾತ್ರ ಸರ್ಕಾರಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗುತ್ತದೆ. ಸ್ಲಂ ಸಂಘಟನೆಗಳು ಐಕ್ಯವಾದ ಹೋರಾಟ ರೂಪಿಸಲು ಒಂದು ವೇದಿಕೆ ಅವಶ್ಯವಾಗಿದೆ ಎಂದರು. ಸರಕಾರದ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಪರವಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಶಿವಪ್ರಸಾದ್ ಮನವಿ ಸ್ವೀಕರಿಸಿ, ಸಂಘಟನೆಯ ನಿರಂತರ ಹೋರಾಟದಿಂದ ರಾಜ್ಯ ಸರ್ಕಾರ ಇತ್ತೀಚೆಗೆ ಹಕ್ಕುಪತ್ರ ನೀಡುವ ಐತಿಹಾಸಿಕ ನಿರ್ಣಯ ಕೈಗೊಂಡಿದೆ. ಹಂತ ಹಂತವಾಗಿ ಕ್ರಯಪತ್ರ ನೀಡಲಾಗುವುದು. ನಗರ ಪ್ರದೇಶದಲ್ಲಿ ವಸತಿ ನಿರ್ಮಾಣಕ್ಕೆ ಅಗತ್ಯವಿರುವ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗಾಗಿ ಸರ್ಕಾರದ ಉನ್ನತ ಮಟ್ಟದ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ
ಭರವಸೆ ನೀಡಿದರು. ಪಿಯುಸಿಎಲ್ ರಾಜ್ಯಾಧ್ಯಕ್ಷ ವೈ. ಜೆ. ರಾಜೆಂದ್ರ ಮತ್ತು ಪತ್ರಕರ್ತ ಐಸಾಕ್ ಅರುಳ್ ಸೆಲ್ವಾ, ಗಜಲ್ ಕವಿ ಅಲ್ಲಗಿರಿರಾಜು, ರಾಜ್ಯ ಸಮಿತಿ ಪದಾಧಿಕಾರಿ ಚಂದ್ರಮ್ಮ, ಗೀತಾ, ದೀಪಿಕಾ, ಜನಾರ್ಧನ್, ಬಿಜಾಪುರ ಸ್ಲಂ ಸಮಿತಿ ಒಕ್ಕೂಟದ ಅಧ್ಯಕ್ಷ ಅಕ್ರಂ ಮಾಶ್ಯಾಳಕರ ಇದ್ದರು. ಎ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ತೇಜಸ್‌ಕುಮಾರ ನಿರೂಪಿಸಿದರು.