ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾ ಪರಮೇಶ್ವರೀ ದೇಗುಲದಲ್ಲಿ ನೂತನವಾಗಿ ಪ್ರಾರಂಭಿಸಿರುವ ಮಳೆಗಾಲದ ಯಕ್ಷಗಾನದ ದೇವರ ಸೇವೆಯಾಟಕ್ಕೆ ರವಿವಾರ ಚಾಲನೆ ನೀಡಲಾಯಿತು.
ಬೆಳಗ್ಗೆ ಬಾರಾಳಿ ಶ್ರೀ ಮಹಾಗಣಪತಿ ದೇಗುಲದಲ್ಲಿ ಗಣಪತಿ ಹೋಮ ನಡೆಯಿತು. ಅನಂತರ ಕಲಾವಿದರಿಗೆ ಸಂಪ್ರದಾಯದಂತೆ ಗೆಜ್ಜೆ ನೀಡಲಾಯಿತು. ಮಧ್ಯಾಹ್ನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಗಣಪತಿ ಹೋಮ ಮತ್ತು ಯಕ್ಷಗಾನ ಮೇಳದ ಗಣಪತಿ ಪೂಜೆ ನಡೆಯಿತು.
ಉಡುಪಿಯ ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ.ದೀಪ ಬೆಳಗಿಸಿ, ಮೇಳದ ಭಾಗವತರಿಗೆ ತಾಳ ನೀಡುವ ಮೂಲಕ ಮಳೆಗಾಲದ ಸೇವೆಯಾಟಕ್ಕೆ ಚಾಲನೆ ನೀಡಿದರು.
ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ನಾಗ್ ಸಿ.ಟಿ., ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶ್ರೀಪತಿ ಅಡಿಗ, ಗೋಪಾಲ ನಾಯ್ಕ, ಶೇಡಿಕೊಡ್ಲು ವಿಠಲ ಶೆಟ್ಟಿ, ಗಣೇಶ್ ಕುಂದರ್, ಮಾಜಿ ಮೊಕ್ತೇಸರರಾದ ಪ್ರಭಾಕರ ಶೆಟ್ಟಿ, ನಿವೃತ್ತ ಪ್ರಾಂಶುಪಾಲ ಗಣಪಯ್ಯ ಶೆಟ್ಟಿ, ಎಚ್. ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.
ಸೇವಾಕರ್ತರ ಸೇವೆ ಶೀಘ್ರದಲ್ಲಿ ಈಡೇರಿಸುವ ದೃಷ್ಟಿ ಯಿಂದ ನೂತನವಾಗಿ ಪ್ರಾರಂಭಗೊಂಡ ಮಳೆಗಾಲದ ಸೇವೆಯಾಟವು 84 ದಿನಗಳ ಕಾಲ ದೇಗುಲದ ಶ್ರೀ ದುರ್ಗಾಪರಮೇಶ್ವರೀ ಕಲ್ಯಾಣ ಮಂದಿರದಲ್ಲಿ 5 ಮೇಳಗಳ ಆಯ್ದ ಕಲಾವಿದರಿಂದ ದಿನಂಪ್ರತಿ ಸಂಜೆ 7ರಿಂದ ರಾತ್ರಿ 12 ಗಂಟೆಯ ತನಕ ನಡೆಯಲಿದೆ.