Advertisement
ರವಿವಾರ ಕೊಡವೂರು ಶಂಕರ ನಾರಾಯಣ ತೀರ್ಥ ಕೆರೆ (ಕಿಚ್ಚಣ್ಣ ಕೆರೆ) ಯಲ್ಲಿ ಗಂಗಾಪೂಜೆ ನೆರವೇರಿಸಿ ಬಳಿಕ ಇಂದ್ರಾಣಿ ನದಿಯಲ್ಲಿ ಹರಿಯುವ ಕೊಳಚೆ ನೀರಿನ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಶಾಸಕನಾಗಿದ್ದಾಗ ಕನಿಷ್ಠ 15 ದಿನಗಳಿಗೊಮ್ಮೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೆ. ಜನಪ್ರತಿನಿಧಿ ಆದವನು ನಿರಂತರ ಅಲ್ಲಿಗೆ ಹೋಗಿ ಅದು ಸರಿ ಇದೆಯೋ ಇಲ್ಲವೋ ಎಂದು ಸರಿಯಾಗಿ ನೋಡದೇ ಇದ್ದಲ್ಲಿ ಈ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದರು.
ಇಲ್ಲಿನ ಕೆರೆಯ ಅಭಿವೃದ್ಧಿಗೆ ಸರಕಾರ ದಿಂದ ಈಗಾಗಲೇ ಅನುದಾನ ದೊರೆತಿದೆ ಎನ್ನಲಾಗುತ್ತಿದೆ, ಆದರೆ ನನಗೆ ಅದರ ಸರಿ ಯಾದ ಮಾಹಿತಿಯಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಈ ಬಗ್ಗೆ ಅಧಿಕಾರಿ ಗಳೊಂದಿಗೆ ಚರ್ಚಿಸಿ ಅನುದಾನ ಬಂದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗು ವುದು, ಅದಲ್ಲದಿದ್ದರೂ ಸಣ್ಣ ನೀರಾವರಿ ಇಲಾಖೆಯ ಮೂಲಕವಾದರೂ ಈ ಕೆರೆಯ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ರಘುಪತಿ ಭಟ್ ಹೇಳಿದರು. ಸಂವೇದನಾ ಫೌಂಡೇಶನ್‌ನ ಸಂಸ್ಥಾಪಕ ಪ್ರಕಾಶ್ ಮಲ್ಪೆ ಮಾತನಾಡಿ, ಪರಿಸರ ಉಳಿಸುವಂತಹ ಕಾರ್ಯ ಆಗಬೇಕು. ನಾವೆಲ್ಲರು ಹಸಿರುಗನಸನ್ನು ಕಾಣೋಣ, ಭಾರತವನ್ನು ಸಸ್ಯ ಶ್ಯಾಮಲೆಯಾಗಿಸೋಣ ಎಂದರು.
ಕರ್ನಾಟಕ ದಕ್ಷಿಣ ಪ್ರಾಂತ ಪರಿಸರ ಸಂರಕ್ಷಣಾ ಪ್ರಮುಖ್ ಡಾ| ನಾರಾಯಣ ಶೆಣೈ, ಶಂಕರನಾರಾಯಣ ತೀರ್ಥ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ಕೆ. ಶ್ರೀನಿವಾಸ್ ರಾವ್, ಅಧ್ಯಕ್ಷ ದೇವರಾಜ್ ಸುವರ್ಣ ಉಪಸ್ಥಿತರಿದ್ದರು. ರಾಜೇಶ್ ಕಾನಂಗಿ ಸ್ವಾಗತಿಸಿ, ವಿಜಯ ಕೊಡವೂರು ಪ್ರಸ್ತಾವಿಸಿದರು. ಪ್ರವೀಣ್ ಬಲ್ಲಾಳ್ ವಂದಿಸಿದರು. ಶ್ರೇಯಾ ನಿರೂಪಿಸಿದರು.