ಸಕಲೇಶಪುರ: ಹಾಸನದಿಂದ ಮಾರನಹಳ್ಳಿವರೆಗಿನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಗುಂಡಿಗಳನ್ನು ಮುಂದಿನ ಹದಿನೈದು ದಿನಗಳ ಒಳಗಾಗಿ ಮುಚ್ಚಿದರೆ ಮಾತ್ರ ಗುತ್ತಿಗೆ ಪಡೆದಿರುವ ಸಂಸ್ಥೆಗೆ ಚತುಷ್ಪಥ ಕಾಮಗಾರಿ ಮುಂದು ವರಿ ಸುವ ಅವಕಾಶ ನೀಡುವ ಬಗ್ಗೆ ಪರಾಮರ್ಶೆ ನಡೆಸಲಾಗುವುದು ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರೂ ಗುಂಡಿ ಮುಚ್ಚುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿರುವುದು ವಾಹನ ಸವಾರರ ಆಕ್ರೋಶಕ್ಕೆ ಕಾರಣವಾಗಿದೆ. ನವದೆಹಲಿಯ ರಸ್ತೆ ಸಾರಿಗೆ ಸಚಿವಾಲಯದಲ್ಲಿ ಸೋಮವಾರ ನಡೆದ ಸಭೆಯಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯ ಮಂಡಳಿಯಿಂದ ನೇಮ ಕಗೊಂಡಿರುವ ದಿವಾಳಿತನ ವಿಚಾರಣೆ ಸಮಿತಿ ನಿರ್ದೇಶಕ ವಿಕ್ರಮ ಕುಮಾರ್ ಅವರೊಂ ದಿನ ಚರ್ಚೆ ನಂತರ ಸಚಿವರು ಈ ವಿಷಯ ಸ್ಪಷ್ಟಪಡಿಸಿದ್ದಾರೆ.
7 ಕೋಟಿ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿ: ಹಾಸನ ದಿಂದ ಸಕಲೇಶಪುರ ತಾಲೂಕು ಹೆಗ್ಗದ್ದೆ ವರೆಗಿನ 45 ಕಿ.ಮೀ. ಹಳೇ ರಸ್ತೆಯಲ್ಲಿನ ಹೊಂಡ ಮುಚ್ಚಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತೀಚೆಗೆ 7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಅಹ್ವಾನಿಸಿತ್ತು. ಈ ಹಿಂದೆ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದರೂ ಕಾಮಗಾರಿ ಮುಕ್ತಾಯಗೊಳಿಸಲು ವಿಫಲವಾಗಿದ್ದ ಮಧ್ಯಪ್ರದೇಶ ಮೂಲದ ರಾಜಕಮಲ್ ಕನ್‌ಸ್ಟ್ರಕ್ಷನ್ ಹಾಗೂ ಸ್ಪೇನ್ ಮೂಲದ ಐಸೋಲೆಕ್ಸ್ ಆ್ಯಂಡ್ ಕಾರ್ಸನ್ ಕಂಪನಿಗಳ ಮುಖ್ಯಸ್ಥರು ಶೀಘ್ರವೇ ಹಳೆ ರಸ್ತೆಯ ಹೊಂಡ ಮುಚ್ಚಿ ಡಾಂಬರೀಕರಣ ಮಾಡುತ್ತೇವೆ. ನಂತರ ಚತುಷ್ಪಥ ಕಾಮಗಾರಿ ಪೂರ್ಣಗೊಳಿಸು ವುದಾಗಿ ಭರವಸೆ ನೀಡಿದ್ದರಿಂದ ಈ ವಿಚಾರವನ್ನು ಸೋಮವಾರ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು.
ನಿಯಮ ಪಾಲಿಸದಿದ್ದರೆ ಟೆಂಡರ್ ರದ್ದು: ಈ ಸಂಬಂಧ ಮಾತನಾಡಿದ ಕೇಂದ್ರ ಸಚಿವ ಗಡ್ಕರಿ, 15 ದಿನಗಳ ಒಳಗೆ ಹೊಂಡ ಮುಚ್ಚಿ ವರದಿ ನೀಡಬೇಕು. ಈ ಅವಧಿ ಯಲ್ಲಿ ಗುರಿ ತಲುಪದಿದ್ದರೆ ಗುತ್ತಿಗೆ ಒಪ್ಪಂದ ರದ್ದು ಗೊಳಿಸಿ ಪ್ರಾಧಿಕಾರದಿಂದಲೇ ಹೊಂಡ ಮುಚ್ಚಿ ಡಾಂಬರೀಕರಣ ನಡೆಸಲಾಗುವುದು. ಚತು ಷ್ಪಥ ಯೋಜನೆಗೆ ಹೊಸದಾಗಿ ಟೆಂಡರ್ ಕರೆ ಯುವ ಪ್ರಕ್ರಿಯೆಗೆ ಚಾಲನೆ ನೀಡಿ ಎಂದು ಅಧಿಕಾರಿ ಗಳಿಗೆ ಸೂಚಿಸಿದ್ದಾರೆ.
ಬಾಳ್ಳುಪೇಟೆ ಕಡೆ ಯಿಂದ ದುರಸ್ತಿ ಕಾರ್ಯ ಆರಂಭವಾಗಿದೆ. ಆದರೆ ಮಂದ ಗತಿಯಲ್ಲಿ ಸಾಗಿರುವ ಹಿನ್ನೆಲೆಯಲ್ಲಿ ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಿ ದ್ದಾರೆ. ಪಟ್ಟಣದ ಹೇಮಾವತಿ ಸೇತುವೆ ಮೇಲಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಇದನ್ನು ಮೊದಲು ದುರಸ್ತಿ ಮಾಡ ಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದೆ.