ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ವೇಗವಾಗಿ ಸಮುದಾಯಕ್ಕೆ ಪಸರಿಸುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯಇಲಾಖೆ ಏನೆಲ್ಲ ಕಸರತ್ತು ನಡೆಸಿದರು ಫಲ ನೀಡದಂತಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ 1.40 ಲಕ್ಷ ಮಂದಿಗೆ ಕೋವಿಡ್ ಪರೀಕ್ಷೆ ನಡೆದಿದ್ದು,17ಲಕ್ಷದಷ್ಟು ತಪಾಸಣೆ ಆಗಬೇಕಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಕೋವಿಡ್ ತಪಾಸಣೆ ನಡೆದರೆ, ಸೋಂಕು ಇತರರಿಗೆ ವ್ಯಾಪಿಸುವ ವೇಗ ಕಡಿಮೆಯಾಗುತ್ತದೆ. ಆದರೆ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಮರೋಪಾದಿಯಲ್ಲಿ ಕೋವಿಡ್ ಟೆಸ್ಟ್‌ಗೆ ಮುಂದಾಗದಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.
ಏರುಗತಿ: ಕಳೆದ ಜುಲೈ ಎರಡನೇ ವಾರದಲ್ಲಿ ಅಂತರ ಜಿಲ್ಲಾ ಸಂಚಾರಕ್ಕೆ ಅವಕಾಶ ನೀಡಿದ ನಂತರ ಜಿಲ್ಲೆಯಲ್ಲಿ ಸೋಂಕಿನ ಮಟ್ಟ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಪರಿಣಾಮ ಇಂದು ಆಸ್ಪತ್ರೆ ಗಳಲ್ಲಿ ಕೋವಿಡ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಸೋಂಕಿಗೆ ತುತ್ತಾಗಿ ಬಲಿಯಾದವರ ಸಂಖ್ಯೆ 576ಕ್ಕೆ ಏರಿಕೆಯಾಗಿದೆ. ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸಾ ಸೌಲಭ್ಯಗಳು ಸಿಗದಂತಾಗಿದೆ. ರಾಜ್ಯಧಾನಿ ಬೆಂಗಳೂರಿಗೆ ನೇರ ಸಂಪರ್ಕದಲ್ಲಿ ರುವ ಮಹಾನಗರಗಳಲ್ಲಿ ಮೈಸೂರು ಪ್ರಮುಖವಾಗಿರುವುದರಿಂದಮುಕ್ತ ಸಂಚಾರಹಾಗೂವ್ಯಾಪಾರ ವಹಿವಾಟಿಗೆ ಅವಕಾಶ ನೀಡಿದ ಬೆನ್ನಲ್ಲೆ ಸೋಂಕಿನ ಪ್ರಮಾಣ ವೇಗವಾಗಿ ವ್ಯಾಪಿಸಿದ್ದು, ಕಳೆದೊಂದು ತಿಂಗಳಿನಿಂದ ನಿತ್ಯ 600ಕ್ಕೂ ಪ್ರಕರಣಗಳು ದಾಖಲಾಗುತ್ತಿದೆ.
ಪರೀಕ್ಷೆಗೊಳಗಾಗಲು ಹಿಂಜರಿಕೆ: ಜಿಲ್ಲೆಯ ಜನರು ಸೋಂಕಿನ ಭಯದಿಂದಾಗಿ ಕೋವಿಡ್ ಪರೀಕ್ಷೆಗೆ ಒಳಗಾ ಗಲು ಹಿಂಜರಿ ಯುತ್ತಿದ್ದಾರೆ. ರೋಗ ಲಕ್ಷಣಗಳು ಕಾಣಿಸಿಕೊಂಡರೂಅದನ್ನು ಮುಚ್ಚಿಟ್ಟು ಕೊಂಡು ಪರೀಕ್ಷೆಗೆ ಒಳ ಗಾಗದಿರುವ ಉದಾ ಹರಣೆಗಳು ಕಂಡು ಬಂದಿವೆ. ಇನ್ನು ಕೆಲ ವರು ಸೋಂಕು ಪ್ರಾಥಮಿಕ ಹಂತದಲ್ಲಿರುವಾಗಲೇ ಪರೀಕ್ಷೆಗೆ ಒಳ ಪಡದೆ ಸೋಂಕು ಉಲ್ಬಣವಾದ ನಂತರ ಚಿಕಿತ್ಸೆ ಪಡೆಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಾಗಲುಕಾರಣವಾಗಿದೆ.
ಜನರಲ್ಲಿಲ್ಲ ಕೋವಿಡ್ ಭೀತಿ: ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಕೋವಿಡ್ ಭೀತಿ ಇಲ್ಲದಿರುವುದು ಹಾಗೂ ಅಸಡ್ಡೆ ಇರುವುದು ಸೋಂಕು ವೇಗವಾಗಿ ಹರಡುತ್ತಿರುವುದಕ್ಕೆ ಒಂದು ಕಾರಣ. ಸಂತೆ, ತರಕಾರಿ ಮಾರುಕಟ್ಟೆ, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಮರೆತು ಎಲ್ಲೆಂದರಲ್ಲಿ ಅನಗತ್ಯವಾಗಿ ಓಡಾಡುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್-19 ಸೋಂಕು ಏರುಗತಿಯಲ್ಲಿ ಸಾಗುತ್ತಿದ್ದರೆ, ಜಿಲ್ಲೆಯಲ್ಲಿ ಜನರು ಮಾಸ್ಕ್ ಬಳಕೆಯನ್ನೇ ಮರೆತು ತಮ್ಮ ತಮ್ಮ ಕೆಲಸಗಳಲ್ಲಿಮಗ್ನರಾಗಿದ್ದಾರೆ.ಸರ್ಕಾರಹೊರಡಿಸಿರುವ ಮಾರ್ಗಸೂಚಿ ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಪಾಲನೆಯಾಗುತ್ತಿಲ್ಲ. ಜೊತೆಗೆ ಮಾಸ್ಕ್ ಧರಿಸದವರಿಗೆ ನಗರಪಾಲಿಕೆ, ಪೊಲೀಸ್ ಇಲಾಖೆ200 ರೂ. ದಂಡ ವಿಧಿಸುತ್ತಿದ್ದರೂ ಜನ ಎಚ್ಚುತ್ತುಕೊಂಡಿಲ್ಲ.
ಇಂದಿನಿಂದ ಮನೆ ಮನೆಗೆ ತೆರಳಿ ಟೆಸ್ಟ್ : ಕೋವಿಡ್ ಸೋಂಕಿನ ಪ್ರಮಾಣ ತಗ್ಗಿಸಲು ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಅವರು ಮನೆಮನೆಗೆ ತೆರಳಿಕೋವಿಡ್‌ಟೆಸ್ಟ್‌ಮಾಡುವಂತೆ ಸೂಚನೆ ನೀಡಿದ ಹಿನ್ನೆಲೆ ಮೈಸೂರಿನಲ್ಲಿ ಸೋಮವಾರದಿಂದ ಮನೆ ಮನೆಗೆ ತೆರಳಿ ಮಧುಮೇಹ, ಉಸಿರಾಟದ ತೊಂದರೆ ಮುಂತಾದ ಆರೋಗ್ಯ ಸಮಸ್ಯೆ ಇರುವವರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಲಾಗುತ್ತದೆ. ತಾಲೂಕು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಧುಮೇಹ, ಉಸಿರಾಟದ ತೊಂದರೆ ಇರುವವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸಿಗುತ್ತಿಲ್ಲ ವೆಂಟಿಲೇಟರ್ : ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲವೆಂಟಿಲೇಟರ್ ಅಭಾವ ಎದುರಾಗಿದೆ. ರೋಗಿಗಳಿಗೆ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ಸಿಗದಕಾರಣ ಚಿಕಿತ್ಸೆ ಫಲಕಾರಿಯಾಗದೆ ಮೃತಪಡುತ್ತಿದ್ದಾರೆ. ಇದರ ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿಕೋವಿಡ್ ಚಿಕಿತ್ಸೆ ನೀಡಲು ಸಿಬ್ಬಂದಿ ಮುಂದೆ ಬಾರದಕಾರಣ ಸೋಂಕಿತರಿಗೆ ಚಿಕಿತ್ಸೆಯೂ ಸಿಗುತ್ತಿಲ್ಲ, ಹೊಸ ರೋಗಿಗಳನ್ನು ಹಾಸಿಗೆ ಇಲ್ಲ ಎಂಬ ನೆಪ ನೀಡಿ ಸೇರಿಸಿಕೊಳ್ಳುತ್ತಿಲ್ಲ.
– ಸತೀಶ್ ದೇಪುರ