Advertisement

ವಿಶ್ವದ ಹಳೆಯ ಇಮೋಜಿ ಸ್ಲೊವಾಕಿಯಾದಲ್ಲಿ ಪತ್ತೆ?

03:45 AM Feb 06, 2017 | Team Udayavani |

ಲಂಡನ್‌: ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸ್‌ಆ್ಯಪ್‌ಗ್ಳಲ್ಲಿ ಇತ್ತೀಚಿನ ದಿನಗಳಲ್ಲಿ  ಇಮೋಜಿಗಳನ್ನು ಬಳಕೆ ಮಾಡುತ್ತಿದ್ದೇವೆ. ಆದರೆ ಇಂಥ ಸಂಜ್ಞೆಗಳು ಹೊಸತೇನಲ್ಲ. 1635ರಲ್ಲಿ ಹಾಲಿ ಬಳಕೆ ಮಾಡುವಂಥವುಗಳು ಇದ್ದವು. ಅದಕ್ಕೆ ಸಂಬಂಧಿಸಿದ ಕಾನೂನುಬದ್ಧ ದಾಖಲೆಗಳೇ ಇವೆ. ಸ್ಲೊವಾಕಿಯಾದ ಸ್ಟಾರ್ಸೊ ಪರ್ವತ ಪ್ರದೇಶದ ತಪ್ಪಲಿನಲ್ಲಿರುವ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡುವ ವೇಳೆ ವಕೀಲರೊಬ್ಬರಿಗೆ ವಸ್ತುವಿನಲ್ಲಿ ಸಣ್ಣ ವೃತ್ತವನ್ನೆಳೆದು ಎರಡು ಚಿಹ್ನೆಗಳನ್ನು ಹಾಗೂ ಗೆರೆಯ ಸಹಿತ ಬಿಡಿಸಲಾಗಿರುವ ಚಿತ್ರ ಪತ್ತೆಯಾಗಿದೆ. ಅದನ್ನು ಪರಿಶೀಲನೆ ನಡೆಸಿದ ಸ್ಲೊವಾಕಿಯಾದ ರಾಷ್ಟ್ರೀಯ ಹಳೆಯ ದಾಖಲೆಗಳ ಸಂಗ್ರಹಣಾ ಸಂಸ್ಥೆಯ ಪೀಟರ್‌ ಬ್ರಿಂಡಾÕ ವಿಶ್ವದಲ್ಲೇ ಮೊದಲನೆಯದ್ದು ಎಂದು ಹೇಳಲಸಾಧ್ಯ. 1648ರಲ್ಲಿ ರಾಬರ್ಟ್‌ ಹೆರ್ರಿಕ್‌ ಬರೆದ “ದ ಫಾಚೂÂìನ್‌’ ಎಂಬ ಪದ್ಯದಲ್ಲೂ ಇಂಥ ಚಿತ್ರಗಳು ಬಳಕೆಯಾಗಿದ್ದವು ಎಂದವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next