Advertisement
ದುಶ್ಚಟಗಳ ದಾಸಸೋಮಾರಿಗಳು ಈಗ ಮಾಡಬೇಕಾದ ಕೆಲಸವನ್ನು ಮತ್ತೆಗೆ ಅಥವಾ ನಾಳೆಗೆ ಮುಂದೂಡುತ್ತಾರೆ. ಮೋಜು – ಮಸ್ತಿಗಳಲ್ಲಿ ಕಾಲ ಕಳೆಯುತ್ತಾರೆ. ಅಲ್ಲದೆ ಅಮಲು ಪದಾರ್ಥ, ಮಾದಕ ವಸ್ತುಗಳ ದಾಸರಾಗುತ್ತಾರೆ. ಇದರಿಂದ ಅವರು ಭವಿಷ್ಯದಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹೇಗೆಂದರೆ, ಕೆಲವೊಂದು ಕೆಲಸಗಳು ಸಮಯ ಕಳೆದಂತೆ ತನ್ನ ಪ್ರಾಮುಖ್ಯ ಅಥವಾ ಬೆಲೆಯನ್ನು ಕಳೆದುಕೊಳ್ಳುತ್ತವೆ. ಇದರಿಂದ ತಡವಾಗಿ ಮಾಡಿದ ಕೆಲಸ, ಶ್ರಮ ಎಲ್ಲವೂ ವ್ಯರ್ಥವಾಗುತ್ತದೆ. ಇನ್ನೊಂದೆಡೆ ವಿಪರೀತ ಮೋಜು – ಮಸ್ತಿ ಮಾಡುವುದರಿಂದ ಹಣ, ಸಮಯ, ಆರೋಗ್ಯವೂ ಹಾಳಾಗುತ್ತದೆ. ಮೈಗಳ್ಳತನದಿಂದ ವ್ಯಕ್ತಿಯಲ್ಲಿರುವ ಪ್ರತಿಭೆ ನಾಶವಾಗುತ್ತದೆ. ಅವುಗಳನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆತನ ವ್ಯಕ್ತಿತ್ವಕ್ಕೆ ಕುಂದುಂಟಾಗುತ್ತದೆ.
ಸಮಯ ಎಂಬುದು ಎಲ್ಲಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತದ್ದು. ಕಳೆದು ಹೋದ ಅಮೂಲ್ಯ ಸಮಯವನ್ನು ಮರಳಿ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕಾಲವನ್ನು ಚೆನ್ನಾಗಿ ಬಳಸುವವನು ಎಂದಿಗೂ ಬಡವನಾಗಿರುವುದಿಲ್ಲ ಎಂಬ ಮಾತಿದೆ. ಆಯಾ ಸಮಯದಲ್ಲಿ ಮಾಡಬೇಕಾದ ಕರ್ತವ್ಯಗಳನ್ನು ಮಾಡದೆ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುವವರು ಸಮಯಗಳ್ಳರೂ ಹೌದು, ಮೈಗಳ್ಳರೂ ಹೌದು.ಇದರಿಂದಾಗಿಯೇ ಕೆಲವರು ಜೀವನೋಪಾಯಕ್ಕಾಗಿ ಅಡ್ಡ ದಾರಿ ಹಿಡಿಯುವುದುಂಟು. ಮೈಗಳ್ಳರನ್ನು ಸಮಾಜವು ಕೂಡ ಕೆಟ್ಟ ದೃಷ್ಟಿಯಿಂದ ನೋಡುತ್ತದೆ. ಸಮಾಜದಲ್ಲಿ ಅವರು ಪುಂಡು – ಪೋಕ್ರಿ,
ದಂಡ – ಪಿಂಡಗಳು ಎಂದೆಲ್ಲ ಗುರುತಿಸಿಕೊಂಡಿರುತ್ತಾರೆ. ಈ ರೀತಿಯ ಹಣೆಪಟ್ಟಿಗಳನ್ನು ಧರಿಸಿಕೊಂಡು ಮಾನಸಿಕವಾಗಿ ಖನ್ನರಾಗುವ ಬದಲು, ಆಯಾ ಕೆಲಸಗಳನ್ನು ಅದೇ ಸಮಯದಲ್ಲಿ ನಿರ್ವಹಿಸಬೇಕು. ಪ್ರತಿಯೊಬ್ಬರು ತಮ್ಮದೇ ಆದ ಗುರಿ, ಉದ್ದೇಶಗಳನ್ನು ಇಟ್ಟುಕೊಂಡು ಅವುಗಳ ಪೂರೈಕೆಗೆ ಶ್ರಮಿಸಬೇಕು.
Related Articles
Advertisement
ಒಂದು ರೋಗಸೋಮಾರಿತನ ಎಂಬುದು ಒಂದು ಕೆಟ್ಟ ಅಭ್ಯಾಸ ಅಥವಾ ಚಾಳಿ ಮಾತ್ರ ಅಲ್ಲ, ಅದು ಒಂದು ದೊಡ್ಡ ರೋಗ ಕೂಡ
ಹೌದು. ಸೋಮಾರಿತನದಿಂದ ನಾವು ಚಟುವಟಿಕೆ ರಹಿತರಾಗುತ್ತೇವೆ. ಇದು ದೈಹಿಕ ನಿಷ್ಕ್ರಿಯತೆಗೆ ಕಾರಣವಾಗುತ್ತದೆ. ದೈಹಿಕ ನಿಷ್ಕ್ರಿಯತೆಗೂ ಅನಾರೋಗ್ಯಕ್ಕೂ ತೀರ ಹತ್ತಿರದ ಸಂಬಂಧವಿದೆ. ಯಾವುದೇ ಒಂದು ಕಬ್ಬಿಣದ ವಸ್ತುವು ಉಪಯೋಗಿಸಲ್ಪಡದೇ ಇದ್ದಾಗ ಅದಕ್ಕೆ ತುಕ್ಕು ಹಿಡಿಯುತ್ತದೆ. ಹಾಗೆಯೇ ನಮ್ಮ ದೇಹದ ಅಂಗಗಳು ಜಡವಾಗಿ ಇರುವುದರಿಂದ ಅವುಗಳಿಗೆ ಅನಾರೋಗ್ಯ ತಗುಲುವುದು. ಮುಖ್ಯವಾಗಿ ದೈಹಿಕ ನಿಷ್ಕ್ರಿಯತೆಯಿಂದ ಉಂಟಾಗುವ ರೋಗಗಳೆಂದರೆ ಸ್ಥೂಲಕಾಯ, ಡಯಾಬಿಟಿಸ್, ರಕ್ತದ ಒತ್ತಡ, ಹೃದ್ರೋಗ ಮುಂತಾದವುಗಳು. ಗಣೇಶ ಕುಳಮರ್ವ