ಬ್ರಹ್ಮಾವರ: ಸೂಕ್ತ ನಿಯಮಾವಳಿ ರೂಪಿಸುವ ಮೂಲಕ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತು 94 ಸಿಸಿ ಮೂಲಕ ಹಕ್ಕುಪತ್ರ ಹಂಚಿಕೆ ಮಾಡುತ್ತಿರುವುದು ಸಂವಿಧಾನದಲ್ಲಿ ತಿಳಿಸಲಾದ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳಿಗೆ ಪೂರಕ ಎಂದು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.
ಅವರು ಮಂದಾರ್ತಿಯಲ್ಲಿ ಜರಗಿದ ಕೋಟ ಹೋಬಳಿ ವ್ಯಾಪ್ತಿಯ ಗ್ರಾ.ಪಂ.ಗಳ ವಿವಿಧ ಫಲಾನುಭವಿಗಳಿಗೆ 94 ಸಿ ಮತ್ತು 94 ಸಿಸಿ ಹಕ್ಕುಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾ.ಪಂ. ಉಪಾಧ್ಯಕ್ಷ ಭುಜಂಗ ಶೆಟ್ಟಿ ಕಾಡೂರು ಮಾತನಾಡಿ, ಅರಣ್ಯ ಇಲಾಖೆ ಹಾಗೂ ಡೀಮ್ಡ್ ನಿಯಮಗಳ ಕುರಿತು ಮರುಪರಿಶೀಲಿಸುವ ಅಗತ್ಯವಿದ್ದು ಇದರಿಂದ ನಾಗರಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯಡ್ತಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಹೆಗ್ಗುಂಜೆ ಪಂಚಾಯತ್ ಸದಸ್ಯ ಗುರುಪ್ರಸಾದ್ ಮಾತನಾಡಿದರು.
ಮಂದಾರ್ತಿ ಜಿ.ಪಂ. ಸದಸ್ಯ ಪ್ರತಾಪ್ ಹೆಗ್ಡೆ, ಕಾಡೂರು ಗ್ರಾ.ಪಂ. ಅಧ್ಯಕ್ಷ ಆನಂದ ನಾಯ್ಕ, ಬಿಲ್ಲಾಡಿಯ ಪೃಥ್ವಿರಾಜ್ ಶೆಟ್ಟಿ, ಆವರ್ಸೆಯ ಪ್ರಮೋದ್ ಹೆಗ್ಡೆ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೋರಯ್ಯ, ಕಂದಾಯ ನಿರೀಕ್ಷಕ ಚಂದ್ರಹಾಸ ಬಂಗೇರ, ಹೆಗ್ಗುಂಜೆ ಪಿಡಿಒ ಅನಿಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕಾಡೂರು ಪಿಡಿಒ ಮಹೇಶ್ ಕೆ. ನಿರ್ವಹಿಸಿದರು.