Advertisement
ಕರ್ನಾಟಕದ ಜತೆಗೆ, ಬಿಹಾರ, ಛತ್ತೀಸ್‌ಗಡ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಕೇರಳ, ಮೇಘಾಲಯ, ಪಂಜಾಬ್, ಲಕ್ಷದ್ವೀಪ ಮತ್ತು ಪುದುಶೆರಿಗಳಿಗೂ 1 ಲಕ್ಷ ರೂ.ದಂಡ ವಿಧಿಸಿದೆ ಸುಪ್ರೀಂಕೋರ್ಟ್. ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ.
Related Articles
Advertisement
“ಮೂರನೇ ಎರಡರಷ್ಟು ರಾಜ್ಯಗಳು ಸುಪ್ರೀಂ ಕೋರ್ಟ್‌ನ ಆದೇಶವನ್ನು ಪಾಲನೆ ಮಾಡುವ ಬಗ್ಗೆ ಕಿಂಚಿತ್ತು ಯೋಚನೆ ಮಾಡಿಲ್ಲ ಎಂದು ದುಃ ಖದಾಯಕ. ಜತೆಗೆ ಕೇಂದ್ರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲು ಸಚಿವಾಲಯ ನೀಡಿದ ನಿರ್ದೇಶನಗಳನ್ನೂ ಪಾಲನೆ ಮಾಡುತ್ತಿಲ್ಲ. ಇದು ಬೇಸರ ತರುವುದು ಮಾತ್ರವಲ್ಲ, ಆಘಾತ ವನ್ನುಂಟು ಮಾಡುತ್ತದೆ’ ಎಂದು ಸುಪ್ರೀಂಕೋರ್ಟ್ ಪ್ರಬಲವಾಗಿ ಆಕ್ಷೇಪ ಮಾಡಿದೆ.
ನ್ಯಾಯಾಂಗದ ಬಗ್ಗೆ ಆಕ್ಷೇಪ: “ಸಾರ್ವಜನಿಕರಿಗೆ ತೊಂದರೆಯಾಗುವ ವಿಚಾರಗಳಲ್ಲಿ ಕೋರ್ಟ್‌ಗಳು ಮಧ್ಯಪ್ರವೇಶಿಸಿದರೆ ನ್ಯಾಯಾಂಗ ಅಗತ್ಯಕ್ಕಿಂತ ಹೆಚ್ಚು ಮಧ್ಯಪ್ರವೇಶ ಮಾಡುತ್ತಿದೆ. ನ್ಯಾಯಾಂಗ ಹೆಚ್ಚಿನ ರೀತಿಯಲ್ಲಿ ಕ್ರಿಯಾಶೀಲವಾಗಿದೆ ಎಂದು ನಮ್ಮ ಮೇಲೆ ಟೀಕಾ ಪ್ರಹಾರ ನಡೆಸಲಾಗುತ್ತಿದೆ ಎಂದು ಮಾತನಾಡಲಾಗುತ್ತದೆ.
ಕಾರ್ಯಾಂಗದ ಕರ್ತವ್ಯದ ಮೇಲೆ ನ್ಯಾಯಾಂಗ ಅತಿಕ್ರಮಿಸುತ್ತಿದೆ ಎಂದು ವಿಮರ್ಶೆ ಮಾಡಲಾಗುತ್ತದೆ’ ಎಂದು ನ್ಯಾಯಪೀಠ ಖಾರವಾಗಿ ನುಡಿದಿದೆ. ಸಂಸತ್‌ನಲ್ಲಿ ರಚನೆಯಾಗಿರುವ ಕಾನೂನುಗಳನ್ನು ರಾಜ್ಯಗಳು ಪಾಲಿಸುತ್ತಿಲ್ಲ.
ರಾಜ್ಯಗಳು ಏನೂ ಕೆಲಸ ಮಾಡದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ ಎಂದು ಸುಪ್ರೀಂಕೋರ್ಟ್ ಖಡಕ್ ಆಗಿ ಕೇಳಿದೆ. ಯಾವುದೇ ವಿಚಾರಗಳಿಗೆ ಯಾರನ್ನೇ ಆಗಲಿ ಉತ್ತರದಾಯಿತ್ವತೆಯೇ ಇಲ್ಲದಂತೆ ಮಾಡಿದರೆ ಹೇಗೆ ಎಂದು ಹೆಚ್ಚುವರಿ ಸಾಲಿಸಟರ್ ಜನರಲ್ ಎ.ಎನ್. ಎಸ್.ನಾಡಕರ್ಣಿ ಅವರನ್ನು ಪ್ರಶ್ನೆ ಮಾಡಿದೆ ನ್ಯಾಯಪೀಠ.