Advertisement

Gold rate: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ

09:01 PM Apr 06, 2023 | |

ನವದೆಹಲಿ: ಮಾರುಕಟ್ಟೆಯಲ್ಲಿ ಬುಧವಾರ ಸಾರ್ವಕಾಲಿಕ ದಾಖಲೆ ಬೆಲೆಗೆ ಏರಿಕೆಯಾಗಿದ್ದ ಚಿನ್ನ, ಗುರುವಾರ ತುಸು ಇಳಿಕೆಯಾಗಿದೆ. ಶುದ್ಧ ಚಿನ್ನ (24 ಕ್ಯಾರೆಟ್‌) ಪ್ರತಿ ಗ್ರಾಮ್‌ಗೆ (ಬೆಂಗಳೂರಿನಲ್ಲಿ) ಬುಧವಾರ 61,410 ರೂ. ತಲುಪಿತ್ತು. ಗುರುವಾರ 380 ರೂ. ತಗ್ಗಿದ್ದು, ಪ್ರತಿ ಗ್ರಾಮ್‌ಗೆ 61,030 ರೂ. ಆಗಿದೆ. ಅದೇ ರೀತಿ ಆಭರಣ ಚಿನ್ನ (22 ಕ್ಯಾರೆಟ್‌) ಪ್ರತಿ ಗ್ರಾಮ್‌ಗೆ ಬುಧವಾರ 56,300 ರೂ. ತಲುಪಿತ್ತು. ಗುರುವಾರ ಕೊಂಚ ಇಳಿಕೆಯಾಗಿದ್ದು, ಗ್ರಾಮ್‌ಗೆ 350 ರೂ. ತಗ್ಗಿದೆ, 55,950 ರೂ.ಗಳಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next