Advertisement

ಪರೀಕ್ಷಾ ಒತ್ತಡ ನಿವಾರಣೆಗೆ ನಿದ್ರೆ ಅವಶ್ಯಕ

06:35 AM Mar 18, 2019 | Team Udayavani |

ಬೆಂಗಳೂರು: ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ನಿದ್ರೆ ಬಹಳ ಅವಶ್ಯಕ. ಪರೀಕ್ಷಾ ಒತ್ತಡದಿಂದ ಕುಗ್ಗು ಹೋಗುವ ಮಕ್ಕಳಲ್ಲಿ ಪೋಷಕರು ಧೈರ್ಯ ತುಂಬಬೇಕು ಹಾಗೂ ಓದುವ ಜತೆ ನಿದ್ರೆಯೂ ಅಗತ್ಯ ಎಂಬುದನ್ನು ತಿಳಿಹೇಳಬೇಕು ಎಂದು ವಿಶ್ವ ನಿದ್ರಾ ದಿನದ ಅಂಗವಾಗಿ ಡ್ನೂರೋಫ್ಲೆಕ್ಸ್‌ ಹಮ್ಮಿಕೊಂಡ #sleeptoperform, ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್‌ ತಂಡ ಮಾಜಿ ಕ್ಯಾಪ್ಟನ್‌ ಅನಿಲ್‌ ಕುಂಬ್ಳೆ ಸಲಹೆ ನೀಡಿದರು.

Advertisement

ಡ್ನೂರೋಫ್ಲೆಕ್ಸ್‌ ಮ್ಯಾಟ್ರಸ್‌ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಮ್ಯಾಥ್ಯೂ ಜೋಸೆಫ್‌ ಮಾತನಾಡಿ, ಡ್ನೂರೋಫ್ಲೆಕ್ಸ್‌ ನಿದ್ರೆಯ ಮಹತ್ವ ಹಾಗೂ ಅದರ ಉಪಯೋಗಗಳ ಬಗ್ಗೆ ಸದಾ ಜಾಗೃತಿ ಮೂಡಿಸುತ್ತಿರುತ್ತದೆ. ಇಂದಿನ ದಿನಗಳಲ್ಲಿ ಏನಾದರೂ ತ್ಯಾಗ ಮಾಡುವುದಾದರೆ ಅದು ನಿದ್ರೆಯಾಗಿದೆ.

ಅದರಲ್ಲೂ ಶೇ.80 ರಷ್ಟು ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ನಿದ್ರೆಗೆಡುವುದು ಜಾಸ್ತಿ. ಕಾರಣ ಅತಿ ಹೆಚ್ಚು ಒತ್ತಡದಲ್ಲಿ ಸಿಲುಕಿರುತ್ತಾರೆ. ಆದ್ದರಿಂದ ನಮ್ಮ ಸ್ಲಿಪ್‌ಟುಪರ್ಫಾಮ್‌ ಕ್ಯಾಂಪೇನ್‌ನಿಂದ ಮಕ್ಕಳಿಗೆ ನಿದ್ರೆಯ ಮಹತ್ವದ ಅರಿವು ಮೂಡಿಸುವತ್ತ ಪೋಷಕರು ಸಾಗಬೇಕು. ಅದನ್ನು ಜಾಗೃತಗೊಳಿಸುವುದು ನಮ್ಮ ಕರ್ತವ್ಯವೂ ಆಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next