Advertisement

ಸ್ಲೀಪ್ ಆಪ್ನಿಯಾ: ಸಂವಾದ

08:55 AM Sep 06, 2017 | Harsha Rao |

ಉಡುಪಿ: “ಸ್ಲೀಪ್ ಆಪ್ನಿಯಾ’ ಕಾಯಿಲೆ ನಿಭಾಯಿಸುವಲ್ಲಿ ದಂತ ವೈದ್ಯರ ಪಾತ್ರದ ಕುರಿತು ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ ವತಿಯಿಂದ ಮಣಿಪಾಲದಲ್ಲಿ ಚರ್ಚೆ, ಸಂವಾದ ನಡೆಯಿತು.

Advertisement

ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನ ಹಳೆ ವಿದ್ಯಾರ್ಥಿ, ಯುಎಸ್‌ಎ ರುಟYರ್ಸ್‌ ವಿವಿಯ ಓರೋಫೇಶಿಯಲ್‌ ಪೈನ್‌ ಆ್ಯಂಡ್‌ ಡೆಂಟಲ್‌ ಸ್ಲಿàಪ್‌ ಮೆಡಿಸಿನ್‌ ಪ್ರೋಗ್ರಾಮ್‌ ಡೆವಲಪಿಂಗ್‌ ಇನ್‌ಚಾರ್ಜ್‌ ಆಗಿರುವ ಡಾ| ಡೇವಿಸ್‌ ಸಿ. ಥೋಮಸ್‌ ಅವರು ಸ್ಲಿàಪ್‌ ಆಪ್ನಿಯಾ ಕಾಯಿಲೆ ನಿಭಾಯಿಸುವಲ್ಲಿ ದಂತ ವೈದ್ಯರ ಪಾತ್ರದ ಕುರಿತು ಮಾತನಾಡಿದರು.

ಓರಲ್‌ ಮೆಡಿಸಿನ್‌ ಮತ್ತು ರೇಡಿಯಾಲಜಿ ವಿಭಾಗದ ಚಯರ್‌ಪರ್ಸನ್‌ ಡಾ| ವಿನೀತಾ ಆರ್‌. ಅವರು ಕಾರ್ಯಕ್ರಮದ ಪಕ್ಷಿನೋಟವನ್ನು ವಿವರಿಸಿದರು. ಮಣಿಪಾಲ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಪ್ರಜ್ಞಾ ರಾವ್‌ ಮುಖ್ಯ ಅತಿಥಿಯಾಗಿದ್ದರು. ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನ ಡೀನ್‌ ಡಾ| ಕೀರ್ತಿಲತಾ ಎಂ. ಪೈ ಉಪಸ್ಥಿತರಿದ್ದರು.

ಮಣಿಪಾಲ ಕಾಲೇಜ್‌ ಆಫ್ ಡೆಂಟಲ್‌ ಸೈನ್ಸ್‌ನ ಹಾಗೂ ಮಂಗಳೂರು ಡೆಂಟಲ್‌ ಕಾಲೇಜಿನ ವಿದ್ಯಾರ್ಥಿ, ಸಿಬಂದಿ, ಸಂವಾದದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next