Advertisement

“ಈಶ್ವರಪ್ಪ ಪೆದ್ದ ;ಬಿಜೆಪಿಯಲ್ಲಿರೋದು ಗುಲಾಮಗಿರಿ’

01:16 AM Feb 22, 2019 | |

ಬಾಗಲಕೋಟೆ: ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಪೆದ್ದ. ಪಾಪ, ರಾಜಕೀಯದ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿಯಲ್ಲಿ ಗುಲಾಮಗಿರಿ ಇದೆ. ಈಶ್ವರಪ್ಪ ಅವರಂತೆ ಮಾತನಾಡದಿದ್ದರೆ ನಡೆಯಲ್ಲ. ಬಾಗಲಕೋಟೆ ಕ್ಷೇತ್ರಕ್ಕೆ ಲೋಕಸಭೆ ಚುನಾವಣೆಯ ಉಸ್ತುವಾರಿ ಕೊಟ್ಟಿದ್ದಾರೆ. ಹೀಗಾಗಿ ಮಾತನಾಡಿ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

Advertisement

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯಲ್ಲಿ ಗುಲಾಮಗಿರಿ ಇದೆ. ಅಲ್ಲಿ ಭಾರೀ ಕಷ್ಟ. ಅದಕ್ಕೆ ಹೀಗೆಲ್ಲ ಮಾತನಾಡುತ್ತಾ ಇರಬೇಕು. ಮಾತನಾಡದಿದ್ದರೆ ಬಿಜೆಪಿಯಿಂದ ಹೊರ ಹಾಕುತ್ತಾರೆ. ಮುಂಬರುವ ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಅಧಿಕಾರದಲ್ಲಿ ಇರಲ್ಲ. ಬಿಜೆಪಿಗೆ ಎಲ್ಲೂನೆಲೆ ಇಲ್ಲ. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕರ್ನಾಟಕದ ಕಡೆ ಹೆಚ್ಚು ಏಕಾಗ್ರತೆ ವಹಿಸಿದ್ದಾರೆ ಎಂದರು.
 

Advertisement

Udayavani is now on Telegram. Click here to join our channel and stay updated with the latest news.

Next