Advertisement

ವಾಹನ ಸವಾರರಿಗೆ ಕಂಟಕವಾದ ಕಾಂಕ್ರೀಟ್‌ ಸ್ಲ್ಯಾಬ್

01:26 AM Jan 21, 2020 | Team Udayavani |

ಉಡುಪಿ: ಮಣಿಪಾಲ ನಗರದಿಂದ ಲಕ್ಷ್ಮೀಂದ್ರನಗರ- ಪೆರಂಪಳ್ಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸಗ್ರಿ ಶಾಲೆ ಕ್ರಾಸ್‌ ಎಂದರೆ ಸವಾರರಿಗೆ ಅಪಘಾತ ಭಯ!

Advertisement

ತುಸು ಎಚ್ಚರ ತಪ್ಪಿದರೂ
ಜೀವ ಹಾನಿ ಖಚಿತ
ನಗರಾಡಳಿತದ ಕುಡಿಯುವ ನೀರಿನ ಗೇಟ್‌ವಾಲ್‌ನ ಇರುವ ಸ್ಲ್ಯಾಬ್ ರಸ್ತೆಗೆ ಆವರಿಸಿದ್ದು ಚಾಲಕರು ತುಸು ಎಚ್ಚರ ತಪ್ಪಿದರೂ ಜೀವ ಹಾನಿ ಖಚಿತ. ಪೆರಂಪಳ್ಳಿ, ಲಕ್ಷ್ಮೀಂದ್ರ ಭಾಗಕ್ಕೆ ಕುಡಿಯುವ ನೀರು ಸರಬರಾಜಿಗೆ ಪೈಪುಗಳನ್ನು ಹಾಕಲಾಗಿತ್ತು. ಸಗ್ರಿ ಶಾಲೆ ಬಳಿ ನೀರಿನ ವಾಲ್‌Ì ನಿರ್ಮಿಸಲಾಗಿತ್ತು. ಅದರ ಮೇಲೆ ಸಿಮೆಂಟ್‌ ಕಾಂಕ್ರಿಟ್‌ ಹಾಕಿದ ಬಳಿಕ ಅದನ್ನು ಸರಿಯಾಗಿ ಮುಚ್ಚದೆ ಅರ್ಧಕ್ಕೆ ಬಿಡಲಾಗಿದೆ.

ಸ್ಲ್ಯಾಬ್ಗ ವಾಹನಗಳ ಡಿಕ್ಕಿ
ವಾಲ್‌Ì ಇರುವ ಸ್ಲ್ಯಾಬ್ ರಸ್ತೆಗೆ ತಾಗಿಕೊಂಡಿದ್ದು, ವಾಹನ ಟಯರ್‌ ಸ್ಲ್ಯಾಬ್ಗ ಬಡಿದು ಟಯರ್‌ ತೂತಾಗುವುದು, ಒಡೆಯುವುದು ನಡೆಯುತ್ತದೆ. ಕಳೆದ ಒಂದು ತಿಂಗಳಲ್ಲಿ ಸುಮಾರು 8 ವಾಹನ ಅಪಘಾತ ಪ್ರಕರಣ ಈ ಸ್ಥಳದಲ್ಲಿ ಸಂಭವಿಸಿದೆ. ಇತ್ತೀಚೆಗೆ ಕಾರಿನ ಟಯರ್‌ ಇಲ್ಲಿ ಸ್ಫೋಟಗೊಂಡಿತ್ತು ಎನ್ನುತ್ತಾರೆ ಸ್ಥಳೀಯರಾದ ಸತೀಶ್‌ ಅವರು.

ನಿರಂತರ ಪ್ರಕ್ರಿಯೆಯಿಂದ ತೊಂದರೆ
ಸ್ಲ್ಯಾಬ್ ರಸ್ತೆ ಕೆಳ ಭಾಗದಲ್ಲಿ 7 ಅಡಿ ಆಳಕ್ಕೆ ನೀರಿನ ವಾಲ್‌Ì ಇದೆ. ಇದರಲ್ಲಿ ನೀರು ಸೋರಿಕೆಯಾಗುತ್ತಿರುತ್ತದೆ. ಅವಾಗೆಲ್ಲ ಮುಚ್ಚಳ ತೆಗೆದು, ದುರಸ್ತಿಗೊಳಿಸುವ ಕೆಲಸ ನಡೆಯುತ್ತದೆ. ಸರಿಯಾಗಿ ನಿರ್ವಹಣೆ ಮಾಡದ್ದರಿಂದ ಸ್ಲ್ಯಾಬ್ ಎತ್ತರ ಹೆಚ್ಚಲು ಕಾರಣವಾಗಿದೆ. ಕೆಲವೊಮ್ಮೆ ವಾಹನ ಇದರ ಮೇಲೆ ಸಂಚರಿಸಿ ಸ್ಲಾéಬ್‌ 9 ಇಂಚು ಮೇಲಕ್ಕೆ ಬಂದಿದೆ.

ದೂರು ನೀಡಿದರೂ ಕ್ರಮವಿಲ್ಲ
ನಗರ ಸಭೆ ಸಿಬಂದಿ ಕಾಮಗಾರಿ ನಡೆಸಿದ ಬಳಿಕ ಮುಚ್ಚುವ ಕೆಲಸ ಮಾಡಿಲ್ಲ. ಸ್ಥಳೀಯರು ಈ ಬಗ್ಗೆ ದೂರು ನೀಡಿ ತಿಂಗಳು ಕಳೆದರೂ ಯಾವುದೇ ಸ್ಪಂದನೆಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಸಮಸ್ಯೆ ಹೆಚ್ಚಳ
ಪೈಪು ಅಳವಡಿಸುವ ವೇಳೆ ವಾಹನ ಸಂಚಾರ ಕಡಿಮೆಯಿತ್ತು. ಈಗ ದೊಡ್ಡ ವಾಹನಗಳು ಸಂಚರಿಸಿ ಸ್ಲ್ಯಾಬ್ ಮತ್ತಷ್ಟೂ ಎತ್ತರಕ್ಕೆ ಬಂದಿದೆ.
-ಯೋಗೇಂದ್ರ ನಾಯಕ್‌, ಸ್ಥಳೀಯರು

ಸಮಸ್ಯೆ ನಿವಾರಣೆಗೆ ಪ್ರಯತ್ನ
ಪೈಪ್‌ ಅಳವಡಿಸುವ ವೇಳೆ ಸ್ಲ್ಯಾಬ್ ರಸ್ತೆ ಬದಿ ಮಾಡಲಾಗಿತ್ತು. ರಸ್ತೆ ಅಭಿವೃದ್ಧಿಯಾದ ಬಳಿಕ ಸಮಸ್ಯೆಗಳಾಗುತ್ತಿರುವುದು ಗಮನಕ್ಕೆ ಬಂದಿದೆ. ಎತ್ತರ ತಗ್ಗಿಸುವ ಪ್ರಯತ್ನ ಮಾಡಿದರೂ ಸಮಸ್ಯೆ ನಿವಾರಣೆಯಾಗಿಲ್ಲ.ಅಧಿಕಾರಿಗಳ ಗಮನಕ್ಕೆ ತಂದು ಶಾಶ್ವತ ಪರಿಹಾರಕ್ಕೆ ಯತ್ನಿಸುತ್ತೇನೆ.
-ಭಾರತಿಪ್ರಕಾಶ್‌,
ನಗರ ಸಭೆ ವಾರ್ಡ್‌ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next