Advertisement

ವಿಜಯೇಂದ್ರನ ಕುಮ್ಮಕ್ಕಿನಿಂದ ಕೆಲ ಮಾಧ್ಯಮಗಳಿಂದ ಅಪಪ್ರಚಾರ :ಯತ್ನಾಳ್

07:45 PM Oct 10, 2022 | Team Udayavani |

ವಿಜಯಪುರ :‘ ರಾಜಕೀಯವಾಗಿ ನನ್ನನ್ನು ಮುಗಿಸಲು, ಬಿಜೆಪಿ ಪಕ್ಷದ ಸನ್ಮಾನ್ಯ ಉಪಾಧ್ಯಕ್ಷ ವಿಜಯೇಂದ್ರನ ಮಾತು ಕೇಳಿ, ಕೊಟ್ಟ ಪ್ರಸಾದ ಸ್ವೀಕರಿಸಿ, ಕೇಂದ್ರದವರು 2500 ಕೊಟಿ ರೂ. ಕೇಳಿದ್ದಾರೆಂದು ನನ್ನ ಝೀರೋ ಮಾಡುವುದಕ್ಕಾಗಿ ಕೆಲ ದೃಶ್ಯಮಾಧ್ಯಮಗಳು ವ್ಯವಸ್ಥಿವಾಗಿ ಅಪಪ್ರಚಾರ ಮಾಡಿದವು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೋಮವಾರ ಹರಿಹಾಯ್ದಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿ, ಬಿಜೆಪಿ ಪಕ್ಷದಲ್ಲಿ ಹಣ ಕೊಟ್ಟು ಅಧಿಕಾರ ಪಡೆಯುವ ಪದ್ದತಿ ಇಲ್ಲ, ನಮ್ಮ ಪಕ್ಷದಲ್ಲಿ ಕಾರ್ಯತರ್ತರಿಂದ ಹಿಡಿದು ದಿಲ್ಲಿಗೆ ನೇರ ಸಂಪರ್ಕವಿದೆ. ನಾನು ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಲು ನೇರವಾಗೇ ಹೋಗುತ್ತೇನೆ. ನನಗಂತೂ ಯಾವ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಆದರೂ ಮಾಧ್ಯಮವರು ವಿಜಯೇಂದ್ರನ ಮಾತುಕೇಳಿಕೊಂಡು ಕೆಲವು ಮಾಧ್ಯಮದವರು ಪದೇ ಪದೇ ಅದನ್ನೇ ಕೇಳುತ್ತೀರಿ ಎಂದು ಹರಿಹಾಯ್ದರು.

ದೆಹಲಿಯಿಂದ ಈಗಲೂ ಕೆಲವರು ನನಗೆ ಕರೆ ಮಾಡುತ್ತಾರೆ. ಓರ್ವ ಸ್ವಾಮೀಜಿಯಂತೂ 1500 ಕೋಟಿ ರೂ. ಕೂಡಿಸಿಕೊಂಡು ದೆಹಲಿ ಬನ್ನಿ. ನಿಮ್ಮನ್ನು ಜೆ.ಪಿ.ನಡ್ಡಾ, ಮೋದಿ ಅವರ ಭೇಟಿಗೆ ಸಮಯ ನಿಗದಿ ಮಾಡುತ್ತೇನೆ ಎಂದೆಲ್ಲ ಅಂತೆಲ್ಲ ಹೇಳುತ್ತಾರೆ, ಇಂಥದ್ದನ್ನೆಲ್ಲ ನಂಬಬೇಡಿ ಎಂದಿದ್ದೇನೆ. 3-4 ದಶಕಗಳ ಕಾಲ ರಾಜಕೀಯದಲ್ಲಿರುವ ಹಿರಿಯ ನಾಯಕರಿಗೇ ಈ ರೀತಿಯಾದರೆ ಹೇಗೆ ಎಂದರು.

ಇಂಥವರ ಮಾತು ನಂಬಿಕೊಂಡು ಹಲವರು ಭಾರಿ ಪ್ರಮಾಣದ ಹಣ ಕಳೆದುಕೊಂಡು ಸಂಕಷ್ಟ ಅನುಭವಿಸಿದ್ದಾರೆ. ಬಿಜೆಪಿ ಪಕ್ಷದಲ್ಲೇ ಕೆಲವರು ಹಣ ಕಳೆದುಕೊಂಡಿದ್ದಾರೆ. ಎಷ್ಟೋಮಂದಿ ಅಂಥವರೇ ಇಲ್ಲಿದ್ದು, ಪಕ್ಷದಲ್ಲಿ ಎಲ್ಲರೂ ಸಾಚಾ ಇಲ್ಲ. ಅಂಥವರೇ ಇದೀಗ ಮಂತ್ರಿಯೂ ಆಗಿದ್ದಾರೆ ಎಂದು ಯಾರ ಹೆಸರು ಹೇಳದೇ ಗಂಭೀರ ಆರೋಪ ಮಾಡಿದರು.

ಬಿಜೆಪಿ ಪಕ್ಷದಲ್ಲಿ ಸಿಎಂ ಆಗಲು 2500 ಕೋಟಿ ರೂಪಾಯಿ ನೀಡಬೇಕು ಎಂದು ನಾನು ಹೇಳಿದ್ದಾಗಿ ಆಪ್ ಮುಖಂಡ ಮುಖ್ಯಮಂತ್ರಿ ಚಂದ್ರು ಆರೋಪ ಮಾಡಿದ್ದಾರೆ. ಆದರೆ ನನ್ನ ಹೇಳಿಕೆ ಮತ್ತೊಮ್ಮೆ ತಿರುಗಿಸಿ ನೋಡಿ, ನಾನು ಹೇಳಿದ್ದು ಏನಿದೆ ಎಂಬುದನ್ನು ನೋಡಿ ಎಂದು ಯತ್ನಾಳ್ ಸಲಹೆ ನೀಡಿದರು.

Advertisement

ದೆಹಲಿ, ಬೆಂಗಳೂರಿನಲ್ಲಿ ರಾಜಕೀಯ ಕೆಲ ದಲ್ಲಾಲಿಗಳಿದ್ದಾರೆ. ಇಂಥ ದಲ್ಲಾಲಿಗಳು ಎಲ್ಲಾ ಪಕ್ಷದಲ್ಲಿದ್ದಾರೆ, ಅವರು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ರಾಮದುರ್ಗದಲ್ಲಿ ಕೆಲ ಟಿಕೆಟ್ ಆಕಾಂಕ್ಷಿಗಳು, ಬೆಂಗಳೂರು, ದೆಹಲಿಯಲ್ಲಿ ಕೆಲವರು 2-3 ಕೋಟಿ ರೂ. ಕೊಡಿ, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಮಗೆ ಹೇಳಿದ್ದಾರೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿ ಇಂಥವರಿಂದ ಎಚ್ಚರವಾಗಿರಿ ಎಂದು ಹೇಳಿದ್ದೆ ಎಂದು ಸಮಜಾಯಿಸಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next